ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವೈಶಾಕ್ ಎಂಬಾತ ಬೆಂಗಳೂರಿನ ಹೆಚ್‌ಎಎಲ್ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಆರೋಪಿ. ಈತ ನಟಿ ಕೃಷಿ ತಾಪಂಡ ಸ್ನೇಹಿತ ಎನ್ನಲಾಗಿದೆ.
ಬ್ಯೂ ಡಾರ್ಟ್ ಕೊರಿಯರ್ ಮೂಲಕ ಆರೋಪಿ ಬೆದರಿಕೆ ಪತ್ರ ಕಳಿಸಿದ್ದ. ಜನವರಿ 24 ರಂದು ಉದ್ಯಮಿ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ರವಾನಿಸಿದ್ದ. ವಿಳಾಸ ಹಾಗೂ ಸಹಿ ಇಲ್ಲದ ಅನಾಮಧೇಯ ಬೆದರಿಕೆ ಪತ್ರ ಕಳಿಸಿದ್ದ.
ಪತ್ರದಲ್ಲಿ ಒಬ್ಬ ಯುವತಿಗೆ ಸಂಬಂಧಿಸಿದ ವಿಷಯವನ್ನು ಬಗೆಹರಿಸಿಕೊಳ್ಳುವಂತೆ ಬೆದರಿಸಿದ್ದ. ಎರಡು ತಿಂಗಳಿಂದ ಸುದ್ದಿಯಲ್ಲಿರೋ ಮಹಿಳೆ ಎಂದು ಪರೋಕ್ಷಕವಾಗಿ ನಟಿ ಹೆಸರು ಉಲ್ಲೇಖಿಸಿದ್ದ. ರಾಜಿ ಮಾಡಿಕೊಳ್ಳುವಂತೆ ಸೂಚಿಸಿ 6 ರಿಂದ 7 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದ.
ಹಣವನ್ನು ಜನವರಿ 25 ರಂದು ತಾವು ಸೂಚಿಸಿದ ಸ್ಥಳಕ್ಕೆ ಕಳಿಸಬೇಕು. ತಮ್ಮ ಡ್ರೈವರ್ ಮೂಲಕ ಹಣವನ್ನ ಕಳಿಸಬೇಕು. ಅದನ್ನ ಬೆಳಗ್ಗೆ 8 ಗಂಟೆ ಒಳಗೆ ಜೆಂಟಲೈನ್ ವರ್ಕ್ ಶಾಪ್‌ನಲ್ಲಿ ಪೇ ಮಾಡುವಂತೆ ಬೆದರಿಕೆ ಹಾಕಿದ್ದ. ಒಂದು ವೇಳೆ ಹಣ ನೀಡದಿದ್ದಲ್ಲಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದ. ಆರೋಪಿ ವೈಶಾಕ್ ಬನಶಂಕರಿಯಿಂದ ಬ್ಲೂ ಡಾರ್ಟ್ ಕೋರಿಯರ್ ಮಾಡಿದ್ದ ಎಂದು ಹೇಳಲಾಗಿದೆ.














