ಮನೆ ಅಪರಾಧ 2 ಲಕ್ಷ ರೂ.ಗೆ ಬಾಲಕಿ ಖರೀದಿಸಿ ವೇಶ್ಯಾವೃತ್ತಿಗೆ ಬಳಕೆ: ಅಪ್ರಾಪ್ತೆಯನ್ನು ರಕ್ಷಿಸಿದ ಒಡನಾಡಿ ಸೇವಾ ಸಂಸ್ಥೆ

2 ಲಕ್ಷ ರೂ.ಗೆ ಬಾಲಕಿ ಖರೀದಿಸಿ ವೇಶ್ಯಾವೃತ್ತಿಗೆ ಬಳಕೆ: ಅಪ್ರಾಪ್ತೆಯನ್ನು ರಕ್ಷಿಸಿದ ಒಡನಾಡಿ ಸೇವಾ ಸಂಸ್ಥೆ

0

ಮೈಸೂರು: ಉತ್ತರ ಕರ್ನಾಟಕ ಮೂಲಕ ಬಾಲಕಿಯೊಬ್ಬಳನ್ನು 2 ಲಕ್ಷ ರೂ.ಗೆ ಖರೀದಿಸಿ ವೇಶ್ಯಾವೃತ್ತಿಗೆ ಬಳಕೆ ಮಾಡುತ್ತಿರುವುದನ್ನು ಒಡನಾಡಿ ಸೇವಾ ಸಂಸ್ಥೆ ಪತ್ತೆ ಹೆಚ್ಚಿ ಬಾಲಕಿಯನ್ನು ರಕ್ಷಿಸಿದೆ.

ಬಡ ಕುಟುಂಬಕ್ಕೆ ಸೇರಿದ 15 ವರ್ಷದ ಬಾಲಕಿಯನ್ನು ಆಕೆಯ ತಾಯಿಗೆ ಹಣ ಆಸೆ ತೋರಿಸಿ, ಆಕೆಯನ್ನು ಬೆಂಗಳೂರಿಗೆ ಕರೆ ತಂದು ವೇಶ್ಯಾವೃತ್ತಿಗೆ ದೂಡಲಾಗಿತ್ತು. ಬೆಂಗಳೂರಿನ ವೇಶ್ಯಾವಾಟಿಕೆ ಜಾಲದ ಪರಿಚಯ ಹೊಂದಿದ್ದ ಚಂದನಾ ಎಂಬಾಕೆ ಬಾಲಕಿಯನ್ನು 2 ಲಕ್ಷಕ್ಕೆ ಖರೀದಿಸಿ ಮೈಸೂರಿಗೆ ಕರೆ ತಂದು ಆಕೆಯನ್ನು ವೇಶ್ಯಾವೃತ್ತಿಗೆ ಬಳಸಿಕೊಳ್ಳುತ್ತಿದ್ದಳು. ಈ ವಿಚಾರ ತಿಳಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರವರು, ಚಂದನಾಳ ಚಲನ-ವಲನದ ಮೇಲೆ ನಿಗಾ ಇರಿಸಿ, ವಿಜಯನಗರ ಠಾಣಾ ಪೊಲೀಸರ ಸಹಕಾರ ಪಡೆದು ಆಕೆಯ ಮನೆ ಮೇಲೆ ದಾಳಿ ನಡೆಸಿ, ಆಕೆಯನ್ನು ರಕ್ಷಣೆ ಮಾಡಿದ್ದಾರೆ.