ಮನೆ ಅಪರಾಧ ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

0

ಬೆಳಗಾವಿ: ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅಶ್ಲೀಲ ಪದ ಬಳೆಕೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು ಬಿಜೆಪಿ ನಾಯಕ, ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಗುರುವಾರ ಸಂಜೆ(ಡಿ19) ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಸಚಿವೆ ಬೆಂಬಲಿಗರು ದೂರು ದಾಖಲಿಸಿದ ಬಳಿಕ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಸುವರ್ಣ ಸೌಧದಲ್ಲೇ

ಸಿ.ಟಿ.ರವಿ ಅವರನ್ನು ವಶಕ್ಕೆ ಪಡೆದು ಭಾರೀ ಭದ್ರತೆಯಲ್ಲಿ ಕರೆದೊಯ್ದಿದ್ದಾರೆ.

ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆಗೆ ವಿರುದ್ಧ ಅಶ್ಲೀಲತೆ ಪ್ರದರ್ಶನ, ಅವಮಾನಿಸುವ ಉದ್ದೇಶದ ಸನ್ನೆ, ಪದ ಬಳಕೆ ಮತ್ತು ಕ್ರಿಯೆ, ಲೈಂಗಿಕ ಟೀಕೆ ಅಡಿಯಲ್ಲಿ ಎಫ್​​ಐಆರ್​ ದಾಖಲು ಮಾಡಲಾಗಿದೆ.