ಮನೆ ಕಾನೂನು ಸಿ.ಟಿ. ರವಿ ಪ್ರಕರಣ: ಖಾನಾಪುರ ಸಿಪಿಐ ಅಮಾನತು

ಸಿ.ಟಿ. ರವಿ ಪ್ರಕರಣ: ಖಾನಾಪುರ ಸಿಪಿಐ ಅಮಾನತು

0

ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಖಾನಾಪುರ ಠಾಣೆಗೆ ಕರೆತಂದ ಕರ್ತವ್ಯ ಲೋಪ, ನಿಷ್ಕಾಳಜಿತನ, ಬೇಜಬ್ದಾರಿತನ ಪ್ರದರ್ಶನ ಆರೋಪ ಹಾಗೂ ಅಪಾಧಿತರನ್ನು ಹೊರತುಪಡಿಸಿ ಠಾಣೆಯೊಳಗೆ ಯಾರನ್ನೂ ಬಿಡದಂತೆ ಆದೇಶ ನೀಡಿದ್ದರೂ ನಿರ್ಲಕ್ಷ್ಯ ವಹಿಸಿ ಬಿಜೆಪಿ ನಾಯಕರನ್ನು ಠಾಣೆಯೊಳಗೆ ಬಿಟ್ಟಿರುವ ಆರೋಪದ ಮೇಲೆ ಖಾನಾಪುರ ಸಿಪಿಐ ಮಂಜುನಾಥ ನಾಯಕ ಅವರನ್ನುಅಮಾನತು ಮಾಡಿ ಐಜಿಪಿ ವಿಕಾಸಕುಮಾರ ವಿಕಾಸ ಆದೇಶ ಹೊರಡಿಸಿದ್ದಾರೆ.

Join Our Whatsapp Group

ರವಿ ಅವರನ್ನು ಬಂಧಿಸಿ ತಡರಾತ್ರಿ ಖಾನಾಪುರ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಈ ವೇಳೆ ಠಾಣೆಯ ಹೊರಗಡೆ ಗಲಾಟೆ ಮಾಡಿದ ಬಿಜೆಪಿ ನಾಯಕರನ್ನು ಸಿಪಿಐ ಮಂಜುನಾಥ ಠಾಣೆಯೊಳಗೆ ಬಿಟ್ಟಿದ್ದರು. ಇದಾದ ಬಳಿಕ ಠಾಣೆಯಲ್ಲಿ ಬಿಜೆಪಿ ನಾಯಕರು ಸಭೆ ಮಾಡಿದ್ದರು.

ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ ಜಗದೀಶ ಅವರೂ ಅರ್ಧಗಂಟೆ ಚರ್ಚೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗರಂ ಆಗಿರುವ ಗೃಹಸಚಿವ ಪರಮೇಶ್ವರ ಅವರು ಪೊಲೀಸರಿಗೆ ತರಾಟೆಗೆಕೊಂಡಿದ್ದಾರೆ. ಐಜಿಪಿ ವಿಕಾಸಕುಮಾರ ವಿಕಾಸ ಅವರು ಸಿಪಿಐ ಮಂಜುನಾಥ ನಾಯಕ ಅವರನ್ನುಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.