ಮನೆ ಸುದ್ದಿ ಜಾಲ ಕಾಂಗ್ರೆಸ್ ಪಕ್ಷದ ಪದವೀಧರ ವಿಭಾಗದ ಅಧ್ಯಕ್ಷರಾಗಿ.ಸಿ.ವೆಂಕಟೇಶ್ ಆಯ್ಕೆ

ಕಾಂಗ್ರೆಸ್ ಪಕ್ಷದ ಪದವೀಧರ ವಿಭಾಗದ ಅಧ್ಯಕ್ಷರಾಗಿ.ಸಿ.ವೆಂಕಟೇಶ್ ಆಯ್ಕೆ

0
Oplus_0

ಯಳಂದೂರು: ಚಾಮರಾಜನಗರದ ಕಾಂಗ್ರೆಸ್ ಪಕ್ಷದ ಪದವೀಧರ ವಿಭಾಗದ ಜಿಲ್ಲಾಧ್ಯಕ್ಷರಾಗಿ ತಾಲೂಕಿನ ಬಿಳಿಗಿರಿರಂಗನಬೆಟ್ಟದ ನಿವಾಸಿ ಸಿ. ವೆಂಕಟೇಶ್ ರವರನ್ನು ರಾಜ್ಯಾಧ್ಯಕ್ಷರಾದ ಎ.ಎನ್.ನಟರಾಜ್ ಗೌಡ ರವರು ಈಚೆಗೆ ಆದೇಶ ಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಿ. ವೆಂಕಟೇಶ್ ಮಾತನಾಡಿ, ಸಂಸದ ಸುನೀಲ್ ಬೋಸ್ ಹಾಗೂ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಸಿ. ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್ ಕಾಡಾ ಅಧ್ಯಕ್ಷ ಮರಿಸ್ವಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು ರವರ ಸಹಕಾರದಿಂದ ಈ ಸ್ಥಾನ ನನಗೆ ಲಭಿಸಿದೆ. ಹಲವು ವರ್ಷಗಳಿಂದಲೂ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನನಗೆ ಈ ಪದವಿ ಲಭಿಸಿದ್ದಕ್ಕೆ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದರು.