ಮನೆ ರಾಜ್ಯ ಕೆಎಸ್ ಆರ್ ಟಿಸಿ ಟಿಕೆಟ್ ದರ ಶೇ. 15ರಷ್ಟು ಏರಿಕೆಗೆ ಸಚಿವ ಸಂಪುಟ ಸಮ್ಮತಿ

ಕೆಎಸ್ ಆರ್ ಟಿಸಿ ಟಿಕೆಟ್ ದರ ಶೇ. 15ರಷ್ಟು ಏರಿಕೆಗೆ ಸಚಿವ ಸಂಪುಟ ಸಮ್ಮತಿ

0

ಬೆಂಗಳೂರು: ಕರ್ನಾಟಕ ಸಾರಿಗೆ ನಿಗಮಗಳ ಬಸ್‌ ಪ್ರಯಾಣ ಟಿಕೆಟ್‌ ದರವನ್ನು ಶೇ.15ರಷ್ಟು ಏರಿಕೆ ಮಾಡುವ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟವು ಗುರುವಾರ ಒಪ್ಪಿಗೆ ನೀಡಿದೆ.

Join Our Whatsapp Group

ನಾಲ್ಕು ನಿಗಮಗಳಿಂದ ಬಸ್ ಪ್ರಯಾಣ ದರ ಏರಿಕೆಯ ಕುರಿತು ಪ್ರಸ್ತಾವನೆಗಳು ಬಂದಿದ್ದವು.

ಟಿಕೆಟ್ ದರ ಏರಿಕೆ ಸಾರ್ವಜನಿಕರು ಆಕ್ರೋಶ
ಸಚಿವ ಸಂಪುಟ ಟಿಕೆಟ್ ದರ ಏರಿಕೆ ಮಾಡುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಜನರಿಂದ ಆಕ್ರೋಶ ಹೊರಹಾಕಿದ್ದಾರೆ. ಬಸ್ ದರ ಹೆಚ್ಚಳ ಎನ್ನುತ್ತೀರಾ, ಆದರೆ ಬಸ್ ಇಲ್ಲದೆ ನಿಂತು ಸಾಕಾಗಿದೆ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ದರ ಹೆಚ್ಚಳ ಮಾಡಬಾರದು. ಮಹಿಳೆಯರಿಗೆ ಉಚಿತ ಅಂದ್ರೆ, ನಮಗೂ ಉಚಿತ ಮಾಡಿ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ? ಮಾಡುವುದಿದ್ದರೆ ಎಲ್ಲರಿಗೂ ಒಂದೇ ಮಾಡಿ ಎಂದು ಹೇಳಿದ್ದಾರೆ.