ಹೊಸದಿಲ್ಲಿ: ನರೇಂದ್ರ ಮೋದಿ ಅವರ ಕೇಂದ್ರ ಸಂಪುಟಕ್ಕೆ ಸರ್ಜರಿ ಮಾಡಲಾಗಿದೆ. ಕಾನೂನು ಸಚಿವರಾಗಿ ಅರ್ಜುನ್ ರಾಮ್ ಮೆಘ್ವಾಲ್ ಅವರನ್ನು ನೇಮಿಸಲಾಗಿದೆ.
ಕಿರಣ್ ರಿಜುಜು ಅವರಿಗೆ ಭೂವಿಜ್ಞಾನ ಖಾತೆ ನೀಡಲಾಗಿದೆ. ಕಾನೂನು ಮತ್ತು ನ್ಯಾಯ ಸಚಿವಾಲಯದಲ್ಲಿ ರಾಜ್ಯ ಸಚಿವರಾಗಿ ಸ್ವತಂತ್ರ ಉಸ್ತುವಾರಿ ಹೊಂದಿದ್ದ ಅರ್ಜುನ್ ರಾಮ್ ಮೆಘ್ವಾಲ್ ಅವರಿಗೆ ಇದೀಗ ಹೆಚ್ಚುವರಿ ಹೊಣೆ ನೀಡಲಾಗಿದೆ.
ಕಿರಣ್ ರಿಜುಜು ಅವರನ್ನು ಕಾನೂನು ಖಾತೆಯಿಂದ ತೆಗೆದುಹಾಕಿದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ, “ಮಹಾರಾಷ್ಟ್ರದ ತೀರ್ಪಿನ ಮುಜುಗರದ ಕಾರಣವೇ? ಅಥವಾ ಮೊದಾನಿ-ಸೆಬಿ ತನಿಖೆಯೇ?” ಎಂದು ಟ್ವೀಟ್ ಮಾಡಿದ್ದಾರೆ.