ವಿಪಕ್ಷಗಳ ಮೈತ್ರಿಕೂಟವನ್ನು ಇಂಡಿಯಾ ಎಂದು ಕರೆಯಬೇಡಿ ಬದಲಾಗಿ ‘ಘಮಂಡಿಯಾ’ ಎಂದು ಕರೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಇಂಡಿಯಾ ಎಂದು ಕರೆದುಕೊಳ್ಳುವುದು ದೇಶಪ್ರೇಮದಿಂದಲ್ಲ ದೇಶವನ್ನು ದೋಚುವ ಉದ್ದೇಶದಿಂದ ಎಂದು ಮೋದಿ ವಾಗ್ದಾಳಿ ನಡೆಸಿದ್ದರು. ಸರ್ಕಾರದ ಯೋಜನೆಗಳನ್ನು ಎನ್ ಡಿಎ ಸರ್ಕಾರದ ಯೋಜನೆಗಳು ಎಂದು ವಿವರಿಸಲು ಸಂಸದರಿಗೆ ಪ್ರಧಾನಿ ಸಲಹೆ ನೀಡಿದರು. ಮತ್ತು ಎನ್‌ಡಿಎ ಮಾತ್ರ ಸ್ಥಿರ ಸರ್ಕಾರವನ್ನು ನೀಡುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಸೂಚಿಸಿದ್ದಾರೆ.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉಲ್ಲೇಖಿಸಿದ ಮಾತನಾಡಿರುವ ಮೋದಿ, ನಿತೀಶ್ ಕುಮಾರ್ ಅವರು ಕಡಿಮೆ ಸ್ಥಾನ ಗಳಿಸಿದ್ದರು, ಮುಖ್ಯಮಂತ್ರಿಯಾಗಲೂ ಅರ್ಹರಿರಲಿಲ್ಲ ಆದರೂ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಇದು ಎನ್ ಡಿಎಯ ತ್ಯಾಗದ ಮನೋಭಾವ. ಅಟಲ್ ಬಿಹಾರಿ ವಾಜಪೇಯಿ ಹಾಗೂ ಸುಶ್ಮಾ ಸ್ವರಾಜ್ ಅವರ ವಾಕ್ ಚಾತುರ್ಯದ ಕುರಿತು ಮಾತನಾಡಿದರು.