ಬೆಂಗಳೂರು(Bengaluru): ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬೆಂಗಳೂರು ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ ಎಂಬ ರಾಜಕಾರಣಿಗಳ ಮಾತು ಮುಖ್ಯಮಂತ್ರಿಗೆ(Chief Minister) ಮತ್ತು ಸರ್ಕಾರಕ್ಕೆ(Government) ಮಾಡಿದ ಅಪಮಾನ ಎಂದು ಮಾಜಿ ಪೊಲೀಸ್ ಅಧಿಕಾರಿ, ಎಎಪಿ ನಾಯಕ ಭಾಸ್ಕರ್ ರಾವ್ (Bhaskar rao)ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಸೋಮವಾರ ಅವರು ಟ್ವೀಟಿಸಿರುವ ಅವರು, ‘ಬೆಂಗಳೂರು ಪೊಲೀಸ್ ಆಯುಕ್ತರು ಎಂದರೆ 1.5 ಕೋಟಿ ನಾಗರಿಕರ ರಕ್ಷಿಸುವ ಸಂಸ್ಥೆಯಿದ್ದಂತೆ. ರಾಜ್ಯದ ಆಡಳಿತಾರೂಢ ಪಕ್ಷ ಮತ್ತು ಅದರ ನಾಯಕರೊಬ್ಬರು ಮಾಧ್ಯಮಗಳಲ್ಲಿ ಆಯುಕ್ತರನ್ನು ‘ಸುಳ್ಳುಗಾರ’ ಎಂದು ಕರೆಯುವುದು ಮುಖ್ಯಮಂತ್ರಿ ಮತ್ತು ಸರ್ಕಾರವನ್ನು ಅವಮಾನಿಸಿದಂತೆ. ಉತ್ತಮ ಆಡಳಿತವು ಮೇಲುಗೈ ಸಾಧಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
‘ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಜೆ.ಜೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಂದ್ರಶೇಖರ ಎಂಬ ಯುವಕನ ಕೊಲೆ ನಡೆದಿತ್ತು ಎಂದು ಗೃಹ ಸಚಿವರು ನೀಡಿದ್ದ ಹೇಳಿಕೆ ಸತ್ಯ. ಬೈಕ್‌ಗಳು ತಗುಲಿದ ವಿಚಾರಕ್ಕೆ ಗಲಾಟೆಯಾಗಿ ಕೃತ್ಯ ನಡೆದಿದೆ ಎಂದು ಪೊಲೀಸ್ ಕಮಿಷನರ್ ಹೇಳಿರುವುದು ಸುಳ್ಳು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಇತ್ತೀಚೆಗೆ ಹೇಳಿದ್ದರು.