ಮನೆ ರಾಜ್ಯ ಬೋಗಸ್ ಕಾರ್ಡ್‌ ರದ್ದುಗೊಳಿಸುವ ಅಭಿಯಾನ

ಬೋಗಸ್ ಕಾರ್ಡ್‌ ರದ್ದುಗೊಳಿಸುವ ಅಭಿಯಾನ

0

ಮೈಸೂರು(Mysuru): ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಬೋಗಸ್ ಕಾರ್ಡ್‌’ಗಳನ್ನು ರದ್ದುಗೊಳಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಫಲಾನುಭವಿಗಳೆಂದು ನೋಂದಣಿಯಾಗಿ ಮಂಡಳಿಯ ವಿವಿಧ ಸೌಲಭ್ಯಗಳನ್ನು ಪಡೆಯುತ್ತಿರುವ ಬೋಗಸ್ ಕಾರ್ಡ್‌’ಗಳನ್ನು ರದ್ದುಪಡಿಸಲಾಗುವುದು. ಬೋಗಸ್ ಕಾರ್ಡ್‌’ಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಯ ಅಥವಾ ಕಾರ್ಮಿಕನ ವಿರುದ್ಧ ಕಾನೂನಿನ ಅನ್ವಯ ಕ್ರಮ ವಹಿಸಲಾಗುವುದು ಎಂದು ಎಚ್ಚರಕೆ ನೀಡಿದೆ.

ಆಯಾ ವೃತ್ತ, ತಾಲ್ಲೂಕಿನಲ್ಲಿ ಕಾರ್ಮಿಕ ಇನ್‌’ಸ್ಪೆಕ್ಟರ್‌ ಕಚೇರಿಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಗುರುತಿನ ಚೀಟಿ ಪಡೆದಿರುವ ಫಲಾನುಭವಿಗಳು ಸ್ವ-ಇಚ್ಛೆಯಿಂದ ಮಂಡಳಿಗೆ ಹಿಂತಿರುಗಿಸಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸಿ, ಕೈಬಿಡಲಾಗುವುದು. ಪರಿಶೀಲನೆಗೆ ಒಳಗಾದ ಫಲಾನುಭವಿಯು ನಕಲಿ ದಾಖಲಾತಿಯನ್ನು ಸೃಷ್ಟಿಸಿ ನೋಂದಾಯಿಸಿರುವುದು ಕಂಡುಬಂದಲ್ಲಿ ಸೇವಾಸಿಂಧು ತಂತ್ರಾಂಶದಲ್ಲಿ ಸ್ಥಗಿತಗೊಳಿಸಲಾಗುವುದು. ಆ ಫಲಾನುಭವಿಯ ವೈಯಕ್ತಿಕ ಕಡತದಲ್ಲೂ ರದ್ದಾಗಿರುವ ಕುರಿತು ದಾಖಲಿಸಲಾಗುವುದು. ಅಧಿಕಾರಿಗಳು, ಅಗತ್ಯವಿದ್ದಲ್ಲಿ ಮಂಡಳಿಯ ಅನುಮತಿ ಪಡೆದು ಸಕ್ಷಮ ಪ್ರಾಧಿಕಾರದ ಮುಂದೆ ಮೊಕದ್ದಮೆ ದಾಖಲಿಸಬಹುದು ಎಂದು ತಿಳಿಸಿದೆ.