ಮನೆ ರಾಜ್ಯ ಬಿಎಸ್ಸಿ ಪದವಿ ಪಡೆದಿರುವ ವ್ಯಕ್ತಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಬಹುದೇ ?: ಡಾ.ಶ್ರೀನಿವಾಸ ಕಕ್ಕಿಲಾಯ

ಬಿಎಸ್ಸಿ ಪದವಿ ಪಡೆದಿರುವ ವ್ಯಕ್ತಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಬಹುದೇ ?: ಡಾ.ಶ್ರೀನಿವಾಸ ಕಕ್ಕಿಲಾಯ

0

ಬೆಂಗಳೂರು(Bengaluru): ಬಿಎಸ್ಸಿ ಪದವಿಯನ್ನಷ್ಟೇ ಪಡೆದಿರುವ ವ್ಯಕ್ತಿ ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಬಹುದೆ? ಸ್ನಾತಕೋತ್ತರ ಪದವಿಯನ್ನೂ ಪಡೆಯದ, ಶಿಕ್ಷಕನಾಗಿ ಬೋಧಿಸದ ವ್ಯಕ್ತಿ ಇಂತಹ ಸಮಿತಿಯ ನೇತೃತ್ವ ವಹಿಸಲು ಅರ್ಹರೆ  ಎಂದು ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿರುವ ಪಠ್ಯಪುಸ್ತಕ ಪರಿಷ್ಕರಣಾ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಚಕ್ರತೀರ್ಥ ಅವರು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿರುವ ಮಾಹಿತಿ ಇದೆ. ಪದವಿಯಲ್ಲಿ ಗಣಿತ, ಭೌತವಿಜ್ಞಾನ, ಕಂಪ್ಯೂಟರ್‌ ವಿಜ್ಞಾನ ವಿಭಾಗದಲ್ಲಿ ಓದಿದ, ಸಂಸ್ಕೃತವನ್ನು ಎರಡನೇ ಭಾಷೆಯಾಗಿ ಕಲಿತಿರುವ ಮಾಹಿತಿ ಸಿಕ್ಕಿದೆ. ಪದವಿಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಲಿಯದ ವ್ಯಕ್ತಿ ಕನ್ನಡ ಪಠ್ಯಪುಸ್ತಕಗಳನ್ನು ಹೇಗೆ ಪರಿಷ್ಕರಿಸುತ್ತಾರೆ  ಎಂದು ಪ್ರಶ್ನಿಸಿದ್ದಾರೆ.

ಅರ್ಹತೆ ಬಗ್ಗೆ ಉತ್ತರಿಸುವ ಅಗತ್ಯವಿಲ್ಲ

ನನ್ನ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಉತ್ತರಿಸುವ ಅಗತ್ಯವಿಲ್ಲ. ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಎಲ್ಲ ಆಯಾಮಗಳಿಂದಲೂ ನೋಡಿ, ನೇಮಕ ಮಾಡಲಾಗಿದೆ. ನಾನು ಐಐಟಿ–ಸಿಇಟಿ ಪ್ರಾಧ್ಯಾಪಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ರೋಹಿತ್ ಚಕ್ರತೀರ್ಥ ಪ್ರತಿಕ್ರಿಯೆ ನೀಡಿದ್ದಾರೆ.

 ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ದಾಖಲಾತಿಯೊಂದಿಗೆ ಚರ್ಚೆಗೆ ಬಂದರೆ ಉತ್ತರಿಸುತ್ತೇನೆ. ಉಳಿದವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲಾರೆ. ಎಂದು ಹೇಳಿದ್ದಾರೆ.