ಮನೆ ಆರೋಗ್ಯ ಊಟ ಆದ ಮೇಲೆ ಟೀ ಕುಡಿಯಬಹುದಾ? ಇಲ್ಲಿದೆ ಮಾಹಿತಿ

ಊಟ ಆದ ಮೇಲೆ ಟೀ ಕುಡಿಯಬಹುದಾ? ಇಲ್ಲಿದೆ ಮಾಹಿತಿ

0

ನಮ್ಮ ಆಹಾರ ಸಮತೋಲನದಿಂದ ಕೂಡಿದ್ದರೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅದೇ ರೀತಿ ಕೆಲವೊಂದು ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತೊಂದರೆಯನ್ನು ಉಂಟುಮಾಡುತ್ತವೆ. ನಾವು ನಮ್ಮ ಮನಸ್ಸಿನಲ್ಲಿ ತಿಳಿದುಕೊಂಡ ಆಹಾರಗಳು ಎಲ್ಲವೂ ಆರೋಗ್ಯಕರವಲ್ಲ. ಅದೇ ರೀತಿ ನಾವು ಸೇವನೆ ಮಾಡುವ ಪದ್ಧತಿ ಕೂಡ ನಮಗೆ ಸಕಾರಾತ್ಮಕ ಫಲಿತಾಂಶಗಳನ್ನು ಕೊಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಜೀರ್ಣಾಂಗ ವ್ಯವಸ್ಥೆಯಲ್ಲಿ ಚಹಾದ ಪಾತ್ರ

ಸಾಕಷ್ಟು ಅಧ್ಯಯನಗಳು ಈವರೆಗೂ ನೀಡಿರುವ ವರದಿಯ ಪ್ರಕಾರ ಊಟ ಮಾಡುವಾಗ ಅಥವಾ ಆ ನಂತರದಲ್ಲಿ ಚಹಾ ಕುಡಿಯುವುದರಿಂದ ಹೊಟ್ಟೆಯ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಆದರೆ ಎಲ್ಲಾ ಬಗೆಯ ಚಹಾ ಇದೇ ರೀತಿ ಕೆಲಸ ಮಾಡುತ್ತದೆ ಎಂದು ಹೇಳಲು ಬರುವುದಿಲ್ಲ.

ಗ್ರೀನ್ ಟೀ

ಗ್ರೀನ್ ಟೀ ಮತ್ತು ಕೆಲವೊಂದು ಗಿಡಮೂಲಿಕೆಗಳಿಂದ ಕೂಡಿದ ಚಹಾ ಈ ನಿಟ್ಟಿನಲ್ಲಿ ಸಹಾಯ ಮಾಡು ತ್ತದೆ ಎಂದು ಹೇಳಬಹುದು. ಅಪಾರ ಪ್ರಮಾಣದ ಆಂಟಿ ಆಕ್ಸಿಡೆಂಟ್ ಅಂಶಗಳು ಮತ್ತು ಪಾಲಿಫಿನಾಲ್ ಇದರಲ್ಲಿ ಕಂಡುಬರುವುದರಿಂದ ಆರೋಗ್ಯಕ್ಕೆ ಅನುಕೂಲಕರವಾಗಿ ಕೆಲಸ ಮಾಡುತ್ತವೆ.

ಹೇಗೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂದು ಹೇಳುವುದಾದರೆ…

• ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಅದ್ಭುತವಾದ ಪ್ರಯೋಜನಗಳನ್ನು ಕೊಡುವಲ್ಲಿ ಮತ್ತು ಬಾಯಲ್ಲಿ ಹೆಚ್ಚು ಸಲೈವಾ ಉತ್ಪತ್ತಿ ಮಾಡುವಲ್ಲಿ ಹಾಗೂ ಗ್ಯಾಸ್ಟ್ರಿಕ್ ಜ್ಯೂಸ್ ಉತ್ಪತ್ತಿಯಲ್ಲಿ ಇದು ನೆರ ವಾಗುತ್ತದೆ. ಇದರಿಂದ ಆರೋಗ್ಯಕರವಾದ ಜೀರ್ಣಶಕ್ತಿ ನಿಮ್ಮಲ್ಲಿ ಕಂಡುಬರುತ್ತದೆ.

• ಶಕ್ತಿಯುತವಾದ ಆಂಟಿ ಇನ್ಫ್ಲಮೆಟರಿ ಗುಣಲಕ್ಷಣಗಳು ಮತ್ತು ಆಂಟಿ ಆಕ್ಸಿಡೆಂಟ್ ಪ್ರಭಾವದಿಂದ ಅಜೀರ್ಣತೆ, ಮಲಬದ್ಧತೆ ತೊಂದರೆ ದೂರವಾಗುತ್ತದೆ. ನಾವು ಸೇವಿಸಿದ ಆಹಾರದಲ್ಲಿ ಕಂಡು ಬರುವಂತಹ ಪ್ರೋಟಿನ್ ಅಂಶಗಳನ್ನು ನಮ್ಮ ದೇಹಕ್ಕೆ ಹೀರಿಕೊಳ್ಳುವ ಹಾಗೆ ಚಹಾ ಮಾಡುತ್ತದೆ.

ಹಾಗಾದರೆ ಊಟದ ಜೊತೆ ಟೀ ಕುಡಿಯಬಹುದಾ?

• ಕೆಲವೊಂದು ಅಧ್ಯಯನಗಳು ಹೇಳುವ ಹಾಗೆ ಊಟದ ಜೊತೆ ಚಹಾ ಕುಡಿಯುವುದರಿಂದ ಆಹಾರ ದಲ್ಲಿ ಸಿಗುವಂತಹ ಕಬ್ಬಿಣದ ಅಂಶವನ್ನು ದೇಹ ಹೀರಿಕೊಳ್ಳಲು ಕಷ್ಟವಾಗುತ್ತದೆ.

• ಹಾಗಾಗಿ ಯಾರಿಗೆ ಮೊದಲೇ ಕಬ್ಬಿಣದ ಅಂಶದ ಕೊರತೆ ಇರುತ್ತದೆ ಅವರು ಊಟದ ಸಂದರ್ಭದಲ್ಲಿ ಚಹಾ ಕುಡಿಯುವ ಅಭ್ಯಾಸದಿಂದ ದೂರ ಉಳಿಯುವುದು ಒಳ್ಳೆಯದು. ಅಷ್ಟೇ ಅಲ್ಲದೆ ಇದರಿಂದ ಬೇರೆ ಬಗೆಯ ಆರೋಗ್ಯದ ಅಡ್ಡ ಪರಿಣಾಮಗಳು ಕೂಡ ಎದುರಾಗುವ ಸಾಧ್ಯತೆ ಇರುತ್ತದೆ.

ಗ್ರೀನ್ ಟೀ ಅಥವಾ ಶುಂಠಿ ಚಹಾ ಕುಡಿಯಬಹುದು!

ಹಾಗೂ ಕೂಡ ನೀವು ಊಟದ ಜೊತೆ ಟೀ ಕುಡಿಯಬೇಕು ಎಂದರೆ ಗ್ರೀನ್ ಟೀ ಅಥವಾ ಶುಂಠಿ ಚಹಾ ಕುಡಿಯಬಹುದು. ಇದು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ಆರೋಗ್ಯಕರ ಅಭಿವೃದ್ಧಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ.