ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಇಂದು ವಿಶ್ವವ್ಯಾಪಿ ಬಹುತೇಕರಿಗೆ ಬಂದಾಗಿದೆ. ಸಾಕಷ್ಟು ಜನರು ತಮ್ಮ ಜಡ ಜೀವನ ಶೈಲಿಯಿಂದ ಇದನ್ನು ತಂದು ಕೊಂಡಿದ್ದಾರೆ. ಇನ್ನು ಕೆಲವರಿಗೆ ಅನುವಂಶೀಯವಾಗಿ ವರವಾಗಿದೆ. ಅದೇನೇ ಇರಲಿ ಸಕ್ಕರೆ ಕಾಯಿಲೆ ಬಂದ ನಂತರ ಜೀವನದ ರೂಪರೇಷೆ ಸಂಪೂರ್ಣವಾಗಿ ಬದಲಾಗುತ್ತದೆ.
ಬಹಳ ಚಿಕ್ಕ ವಯಸ್ಸಿಗೆ ಇಂತಹ ಕಾಯಿಲೆಗಳಿಗೆ ಗುರಿಯಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಎನಿಸುತ್ತದೆ. ಸಕ್ಕರೆ ಕಾಯಿಲೆ ಬಂದ ನಂತರ ದಲ್ಲಿ ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂದು ತಿಳಿದು ಕೊಳ್ಳುವುದು ಬಹಳ ಮುಖ್ಯ. ಸೇಬು ಹಣ್ಣಿನ ವಿಚಾರದಲ್ಲೂ ಇದೇ ಗೊಂದಲ ಹಲವರಿಗೆ ಇದೆ. ಈ ಲೇಖನದಲ್ಲಿ ಅದನ್ನು ಬಗೆಹರಿಸಲಾಗಿದೆ.
ಸೇಬು ಮತ್ತು ಸಕ್ಕರೆ ಕಾಯಿಲೆಯ ವಿಚಾರ
• ಸೇಬುಹಣ್ಣಿನಲ್ಲಿ ವಿಟಮಿನ್ ಸಿ, ನಾರಿನ ಅಂಶ ಮತ್ತು ಇನ್ನಿತರ ಹಲವಾರು ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಸಾಕಷ್ಟಿದೆ. ಇದೊಂದು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಅತ್ಯಂತ ರುಚಿಕರ ಹಣ್ಣಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ನಾರಿನ ಅಂಶ ಇರಲಿದೆ.
• ಹೀಗಾಗಿ ಸೇಬು ಹಣ್ಣು ತಿನ್ನುವುದರಿಂದ ದೇಹಕ್ಕೆ ಕ್ಯಾಲೋರಿ ಗಳು ಸಿಗದೇ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ.
• ಆದರೆ ಒಂದು ವಿಚಾರ ಇಲ್ಲಿ ಪ್ರತಿಯೊಬ್ಬರೂ ಗಮನಿಸಬೇಕು. ಅದೇನೆಂದರೆ ಸೇಬುಹಣ್ಣು ತನಲ್ಲಿ ಕಾರ್ಬೋಹೈಡ್ರೇಟ್ ಅಂಶಗಳನ್ನು ಸಹ ಒಳಗೊಂಡಿದೆ.
• ಇದು ದೇಹದ ಶುಗರ್ ಲೆವೆಲ್ ಹೆಚ್ಚು ಮಾಡಬಹುದಲ್ಲ ಎಂದು ನೀವು ಆಲೋಚಿಸಬಹುದು!! ಆದರೂ ಕೂಡ ಅದರಲ್ಲಿರುವ ನಾರಿನ ಅಂಶ ಅದನ್ನು ಅಲ್ಲಿಯೇ ಸರಿಪಡಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದನ್ನು ವಿವರವಾಗಿ ನೋಡು ವುದಾದರೆ….
ಸೇಬು ಹಣ್ಣಿನಲ್ಲಿ ಪ್ರಕ್ದೋಸ್ ಪ್ರಪೋಸ್ ಇದೆ
• ಸೇಬು ಹಣ್ಣು ತಿನ್ನಲು ಸಿಹಿಯಾಗಿರುತ್ತದೆ. ಅದಕ್ಕೆ ಕಾರಣ ಸೇಬು ಹಣ್ಣಿನಲ್ಲಿ ಹೆಚ್ಚಾಗಿ ಇರುವ ಪ್ರಾಕ್ಟೂಸ್ ಎಂಬ ನೈಸರ್ಗಿಕವಾದ ಸಕ್ಕರೆ ಪ್ರಮಾಣ.
• ಇದು ಕೇವಲ ಸೇಬು ಹಣ್ಣಿನಲ್ಲಿ ಮಾತ್ರವಲ್ಲ, ನಾವು ತಿನ್ನುವಂತಹ ಇನ್ನು ಹಲವಾರು ಹಣ್ಣು ಗಳು, ತರಕಾರಿಗಳು ಮತ್ತು ಜೇನುತುಪ್ಪದಲ್ಲಿ ಸಹ ಕಂಡುಬರುತ್ತದೆ.
• ಆದರೆ ಪೂರ್ಣ ಪ್ರಮಾಣದಲ್ಲಿ ಹಣ್ಣನ್ನು ತಿನ್ನುವುದರಿಂದ ರಕ್ತದ ಮೇಲೆ ಇದರ ಪ್ರಭಾವ ಕಡಿಮೆ ಇರುತ್ತದೆ.
ನಾರಿನ ಪ್ರಮಾಣ ಹೆಚ್ಚಿದೆ
• ಸೇಬು ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನಾರಿನ ಅಂಶ ಇರುವ ಕಾರಣದಿಂದ ಅದರಲ್ಲಿರುವ ಸಕ್ಕರೆ ಪ್ರಮಾಣ ನಮ್ಮ ದೇಹಕ್ಕೆ ಅಂದರೆ ರಕ್ತ ಸಂಚಾರಕ್ಕೆ ಅಷ್ಟು ಬೇಗನೆ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.
• ಇದರಿಂದ ಬ್ಲಡ್ ಶುಗರ್ ಲೆವೆಲ್ ಇದ್ದಕ್ಕಿದ್ದಂತೆ ಹೆಚ್ಚಾಗುವ ಸಾಧ್ಯತೆ ಇರುವುದಿಲ್ಲ. ಅಷ್ಟೇ ಅಲ್ಲದೆ ನಾರಿನ ಅಂಶ ಹೆಚ್ಚಾಗಿ ರುವ ಯಾವುದೇ ಆಹಾರ ಪದಾರ್ಥಗಳು ಹೃದಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ.
• ರಕ್ತದ ಒತ್ತಡವನ್ನು ಮತ್ತು ಉರಿಯುತವನ್ನು ನಿವಾರಣೆ ಮಾಡು ವಂತಹ ಶಕ್ತಿ ಸೇಬು ಹಣ್ಣಿಗಿದೆ. ಡಯಾಬಿಟಿಸ್ ಕಂಟ್ರೋಲ್ ಸಿಗದೇ ಕಷ್ಟ ಪಡುತ್ತಿರುವ ಅನೇಕ ಜನರು ಈ ಒಂದು ನ್ಯಾಚುರಲ್ ಟೆಕ್ನಿಕ್ ಟ್ರೈ ಮಾಡಬಹುದು.
ಇದು ಪೌಷ್ಟಿಕಾಂಶಗಳ ಆಗರ
• ಮೊದಲೇ ಹೇಳಿದಂತೆ ಸೇಬುಹಣ್ಣಿನಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಇರುತ್ತವೆ. ಇದರ ಜೊತೆಗೆ ಪಾಲಿಫಿನಾಲ್ ಎಂಬ ಮೈಕ್ರೋ ನ್ಯೂಟ್ರಿಯೆಂಟ್ ಸಹ ಇರಲಿದ್ದು, ಆಂಟಿ ಆಕ್ಸಿಡೆಂಟ್ ಪ್ರಭಾವವನ್ನು ಹೊಂದಿದೆ.
• ಇದೇ ಕಾರಣದಿಂದ ಸೇಬು ಹಣ್ಣು ತಿಂದ ಮೇಲೆ ಮಧುಮೇಹ ನಿರ್ವಹಣೆ ಆಗುತ್ತದೆ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ದೇಹದಲ್ಲಿ ಜೀರ್ಣವಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ.
• ಹಲವರಿಗೆ ಇರುವಂತಹ ಅಜೀರ್ಣತೆ, ದೇಹದ ಬೊಜ್ಜು, ಕೊಲೆಸ್ಟ್ರಾಲ್, ಹೃದಯ ರಕ್ತನಾಳದ ಕಾಯಿಲೆಗಳು ಎಲ್ಲವೂ ಸಹ ಸೇಬು ಹಣ್ಣಿನ ಸೇವನೆಯಿಂದ ನಿಯಂತ್ರಣಕ್ಕೆ ಬರುತ್ತದೆ.
ಆಂಟಿ ಆಕ್ಸಿಡೆಂಟ್ ಹೇರಳವಾಗಿದೆ
• ಸೇಬು ಹಣ್ಣುಗಳಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ತುಂಬಾ ಹೆಚ್ಚಾಗಿರುವ ಕಾರಣದಿಂದ ನಿಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶಗಳ ಹಾವಳಿಯಿಂದ ನಿಮಗೆ ರಕ್ಷಣೆ ಸಿಗುತ್ತದೆ.
• ಫ್ರೀ ರಾಡಿಕಲ್ ಅಂಶಗಳು ನಿಮ್ಮ ದೇಹದಲ್ಲಿ ನೀವು ಸೇವಿಸಿದ ಆಹಾರ ಜೀರ್ಣವಾಗುವ ಸಂದರ್ಭದಲ್ಲಿ ಉತ್ಪತ್ತಿಯಾಗುತ್ತವೆ ಮತ್ತು ಇವುಗಳ ಪ್ರಮಾಣ ಹೆಚ್ಚಾದರೆ ಅದರಿಂದ ದೇಹಕ್ಕೆ ತುಂಬಾ ತೊಂದರೆ.
• ಆದ್ದರಿಂದ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುವ ಸೇಬುಹಣ್ಣು ತಿನ್ನುವುದರಿಂದ ಅಥವಾ ಬೇರಾವುದೇ ಆಹಾರ ಪದಾರ್ಥ ಸೇವನೆ ಮಾಡುವುದರಿಂದ ದೇಹದ ಮೇಲೆ ಸಕಾ ರಾತ್ಮಕ ಪ್ರಭಾವ ಉಂಟಾಗುತ್ತದೆ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಹಾಗಾಗಿ ಸೇಬುಹಣ್ಣನ್ನು ಮಧುಮೇಹಿ ಸ್ನೇಹಿ ಎಂದು ಕರೆಯ ಬಹುದು.
ಗ್ಲೈಸಮಿಕ್ ಸೂಚ್ಯಂಕ ಕಡಿಮೆ ಇದೆ
• ಎಷ್ಟು ಬೇಗನೆ ಆಹಾರದಲ್ಲಿರುವಂತಹ ಕಾರ್ಬೋಹೈಡ್ರೇಟ್ ನಮ್ಮ ಬ್ಲಡ್ ಶುಗರ್ ಲೆವೆಲ್ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸುವ ಅಂಕವೇ ಗ್ಲೈಸಮಿಕ್ ಸೂಚ್ಯಂಕ.
• ಯಾವ ಆಹಾರ ಪದಾರ್ಥಗಳಲ್ಲಿ ಇದು ಕಡಿಮೆ ಇರುತ್ತದೆ, ಅಂತಹ ಆಹಾರ ಬಹಳ ಸುಲಭವಾಗಿ ಬ್ಲಡ್ ಶುಗರ್ ಲೆವೆಲ್ ನಿರ್ವಹಣೆ ಮಾಡಬಲ್ಲದು ಎಂದು ತಿಳಿಯಲಾಗಿದೆ.
• ಅದರಂತೆ ಸೇಬುಹಣ್ಣು ಕಡಿಮೆ ಗ್ಲೈಸಮಿಕ್ ಸೂಚ್ಯಂಕ ಹೊಂದಿದ್ದು, ಸೇಬು ಹಣ್ಣು ತಿಂದ ತಕ್ಷಣ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗದು.
ಇನ್ಸುಲಿನ್ ಪ್ರತಿರೋಧತೆ ಕಡಿಮೆ ಮಾಡುತ್ತದೆ
• ಇನ್ಸುಲಿನ್ ಪ್ರತಿರೋಧತೆ ಎಂದರೆ ನಮ್ಮ ದೇಹದ ಜೀವಕೋಶಗಳು ದೇಹದಲ್ಲಿ ಉತ್ಪತ್ತಿ ಯಾಗುವ ಇನ್ಸುಲಿನ್ ಪ್ರಮಾಣಕ್ಕೆ ಸರಿಯಾಗಿ ರೆಸ್ಪಾನ್ಸ್ ಮಾಡದೇ ಇರುವುದು.
• ಯಾರಿಗೆ ಟೈಪ್ 2 ಮಧುಮೇಹ ಇರುತ್ತದೆ, ಅವರಿಗೆ ಇನ್ಸುಲಿನ್ ಪ್ರತಿರೋಧತೆ ಇರುತ್ತದೆ ಎಂದು ಹೇಳಬಹುದು.
• ಆದರೆ ಸೇಬು ಹಣ್ಣಿನಲ್ಲಿ ಇರುವಂತಹ ಪಾಲಿಫಿನಾಲ್ ಅಂಶ ಗಳು ದೇಹದ ಪ್ಯಾಂಕ್ರಿಯಾಸ್ ಗ್ರಂಥಿಯನ್ನು ಹೆಚ್ಚಾಗಿ ಇನ್ಸುಲಿನ್ ಬಿಡುಗಡೆ ಮಾಡುವಂತೆ ಮಾಡಿ ಇನ್ಸುಲಿನ್ ಪ್ರತಿರೋಧತೆಯನ್ನು ಕಡಿಮೆ ಮಾಡುತ್ತದೆ.
ಹಾಗಾದರೆ ಸಕ್ಕರೆ ಕಾಯಿಲೆ ಇರುವವರು ಸೇಬು ಹಣ್ಣು ತಿನ್ನಬಹುದಾ?
• ಸೇಬು ಹಣ್ಣು ಒಂದು ಆರೋಗ್ಯಕರವಾದ ಮತ್ತು ಪೌಷ್ಟಿಕಾಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ಹಣ್ಣು ಎಂದು ತಿಳಿದು ಬಂದಿದೆ.
• ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಹಲವಾರು ಬಗೆಯ ವಿಟಮಿನ್ ಅಂಶಗಳು ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳ ಸಹಿತ ನಾರಿನ ಪ್ರಮಾಣ ಕೂಡ ಹೆಚ್ಚಾಗಿ ಸಿಗುತ್ತದೆ.
• ಇವೆಲ್ಲದರ ಕಾರಣದಿಂದ ನಮ್ಮ ದೇಹದ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಗೆ ಬರುತ್ತದೆ. ಸೇಬು ಹಣ್ಣು ಬ್ಲಡ್ ಶುಗರ್ ಪ್ರಮಾ ಣದ ಮೇಲೆ ಕಡಿಮೆ ಪ್ರಭಾವ ಹೊಂದಿದೆ ಎಂದು ಡಾಕ್ಟರ್ ಹೇಳುತ್ತಾರೆ. ಸೇಬು ಹಣ್ಣು ತಿಂದ ತಕ್ಷಣ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ.
• ಹಾಗಾಗಿ ಮಧುಮೇಹ ಇರುವವರು ಸೇಬು ಹಣ್ಣನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಳ್ಳಬಹುದು. ಆದರೆ ಅದಕ್ಕೂ ಮೊದಲು ನಿಮ್ಮ ಶುಗರ್ ಚೆಕ್ ಮಾಡಿಸಿ ಆನಂತರ ಡಾಕ್ಟರ್ ಸಲಹೆ ಪಡೆದು ಮುಂದುವರೆಯಿರಿ.