ದೈನಂದಿನದ ಅಭ್ಯಾಸಗಳು
ಈ ದಿನಗಳಲ್ಲಿ ನಾವು ಸೇವಿಸುತ್ತಿರುವ ಆಹಾರ ಎಂತಹುದು?
★ತೀವ್ರ ಹಾನಿಯುಂಟು ಮಾಡುವ ರಾಸಾಯನಿಕ ಗೊಬ್ಬರಗಳಿಂದ ಬೆಳೆಸಿ ಪೊಷಿಸಲ್ಪಟ್ಟ ತರಕಾರಿ, ಕಾಳುಗಳು, ಧಾನ್ಯಗಳಿಂದ ಕೂಡಿದೆಯಲ್ಲವೇ?
★ಬಗೆಬಗೆ ಕೀಟನಾಶಕಗಳನ್ನು ನಮಗೆ ಆಹಾರವಾಗಿ ಉಪಯೋಗವಾಗುವ ಸಸಿಗಳು, ಹಣ್ಣಿನ ಗಿಡಗಳ ಮೇಲೆ ಸಿಂಪರಣೆ ಮಾಡುತ್ತಿಲ್ಲವೇ?
★ ನಾವು ತಿನ್ನುವ ಹಣ್ಣು, ತರಕಾರಿಗಳನ್ನು ಜೋಪಾನ ಮಾಡಲು ನಾವು ಈ ವಿವಿಧ ರಾಸಾಯನಿಕಗಳನ್ನು ಉಪಯೋಗಿಸುತ್ತೇವೆ.ಆಹಾರ ಹೆಚ್ಚು ಕಾಲ ಕೆಡದಂತಿರಲು ಸಂಸ್ಕರಣೆ ಮಾಡುತ್ತೇವೆ ಇವೆಲ್ಲದಕ್ಕೂ ನಾವು ಎಷ್ಟು ರಾಸಾಯನಿಕಗಳನ್ನು ಬೆರೆಸುವುದಿಲ್ಲ
★ ಸ್ವೀಟ್ ಗಳು. ಪಲಾವು ಗಳಂತಹ ಆಹಾರಗಳನ್ನು ಆಕರ್ಷವಾಗಿ ಕಾಣುವಂತೆ ಮಾಡಲು ವಿವಿಧ ಬಣ್ಣಗಳನ್ನು ಬೇರೆ ಬೇರೆ ಪದಾರ್ಥಗಳನ್ನು ಬೆರೆಸಿಸುತ್ತಿದ್ದೇವೆ. ಇವುಗಳೆಲ್ಲದರಲ್ಲಿಯೂ ಎಷ್ಟೋ ರಾಸಾಯನಿಕ ಇದ್ದೇ ಇರುತ್ತವೆ.
★ನಿಜ ಹೇಳಬೇಕೆಂದರೆ ಈಗ ನಾವು ತಿನ್ನುತ್ತಿರುವ ಆಹಾರ ಪೂರ್ತಿಯಾಗಿ ರಾಸಾಯನಿಕಗಳಿಂದ ಕೂಡಿರುವುದಿಲ್ಲ ಮತ್ತೆನು?
ಜೀವನ ಶೈಲಿ
ನಾವು ಅನುಸರಿಸುತ್ತಿರುವ ಆಧುನಿಕ ಜೀವನ ವಿಧಾನ ಕೂಡ ನಮ್ಮಲ್ಲಿ ಕ್ಯಾನ್ಸರ್ ರೋಗವಾಗಲು ಸಹಕರಿಸುತ್ತಿದೆಯೆನ್ನುತ್ತಾರೆ ಕ್ಯಾನ್ಸರ್ ತಜ್ಞರು.
★ ಉದಾಹರಣೆಗೆ ಮಿತ ಆದಾಯ, ದಿನ ದಿನಕ್ಕೂ ಹೆಚ್ಚು ತಿರುವ ಅಗತ್ಯಗಳಿಂದ ಆಧುನಿಕ ಮಾನವ ಬಹಳ ಮಾನಸಿಕ ಒತ್ತಡ, ಘರ್ಷಣೆಗಳಿಗೆ ಒಳಗಾಗುತ್ತಿದ್ದಾನೆ. ಇವುಗಳಿಂದ ಅವನಲ್ಲಿ ಖಿನ್ನತೆ, ನಿರಾಶೆಗಳು ಹೆಚ್ಚಾಗಿ ಶರೀರದ ರೋಗನಿರೋಧಕ ಶಕ್ತಿ ದುರ್ಬಲವಾಗುತ್ತಿದೆ. ಶರೀರದ ರೋಗ ನಿರೋಧಕ ಶಕ್ತಿ ಕಡಿಮೆಯಾದಂತೆ ಕ್ಯಾನ್ಸರ್ ಬರುವುದು ಸುಲಭವಾಗುತ್ತದೆ.
★ ಮೇಲಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಜನರು ಬಡತನದಿಂದ ಬಾಗುತ್ತಾ ಕಷ್ಟಪಟ್ಟು ಕೆಲಸ ಮಾಡಿದ್ದಲ್ಲದೆ ಹೊಟ್ಟೆತುಂಬದ ಸ್ಥಿತಿಯಲ್ಲಿ ಪೌಷ್ಟಿಕ ಆಹಾರವನ್ನು ಪಡೆಯದ ಸ್ಥಿತಿಯಲ್ಲಿದ್ದಾರೆ. ಇಂತಹವರ ಶರೀರದಲ್ಲಿ ಸಮತೋಲನ ತಪ್ಪಿ ಕ್ಯಾನ್ಸರ್ ಉಂಟಾಗುವ ಕಾರಣವಾಗುತ್ತದೆ.
★ ಒಟ್ಟಿನಲ್ಲಿ ಹೇಳಬೇಕೆಂದರೆ ಕರ್ಣನ ಸಾವಿಗೆ ಕಾರಣಗಳನೇಕ ಎಂದಂತೆ, ಆಧುನಿಕ ಮಾನವನಿಗೆ ಕ್ಯಾನ್ಸರ್ ಆಗಲೂ ಕೂಡಾ ಅನೇಕ ಕಾರಣಗಳು ಜೊತೆಗೂಡಿ ಕೆಲಸ ಮಾಡುತ್ತವೆ ಇದರ ಪರಿಣಾಮ ವೆಂಬಂತೆ ಅವನಲ್ಲಿ ಯಾವುದೋ ಒಂದು ಅವಯವಕ್ಕೆ ಕ್ಯಾನ್ಸರ್.
ಹಣ್ಣುಗಳು ಕ್ಯಾನ್ಸರನ್ನು ನಿರೋಜಿಸುತ್ತವೆ
★ಕ್ಯಾನ್ಸರನ್ನು ಉಳಿಸಿಕೊಡರೇ ಮನುಷ್ಯರಲ್ಲಿ ನಡುಕವುಂಟಾಗುತ್ತದೆ. ಅಂತಹ ಭಯಂಕರ ರೋಗವಾಗಿ ಅಚ್ಚಚತ್ತಿಹೋಗಿದೆ ಕ್ಯಾನ್ಸರ್.
★ವಾಸ್ತವವಾಗಿ ಪ್ರಾರಂಭದ ದೆಸೆಯಲ್ಲೇ ಗುರ್ತಿಸಿದರೆ ಕ್ಯಾನ್ಸರ್ನ್ನು ಚಿಕಿತ್ಸೆ ಮಾಡುವುದು ಸುಲಭವೇ. ಕ್ಯಾನ್ಸರ್ ಬಂದು ಉಲ್ಬಣನಗೊಳ್ಳುವತನಕ, ಬೇರೂರಿ ನಡುಕಹುಟ್ಟಿಸುವತನಕ ಬಹಳ ಮಂದಿ ಅದರ ಕುರಿತು ನಿಜವಾಗಿ ಚಿಂತಿಸುವುದಿಲ್ಲ ತಮ್ಮ ವಿಷಯವೂ ಅಷ್ಟೇ ಮನೆಯಲ್ಲಿ ಉಳಿದವರ ವಿಷಯವೂ ಅಷ್ಟೇ.