ಮನೆ ಆರೋಗ್ಯ ಕ್ಯಾನ್ಸರ್

ಕ್ಯಾನ್ಸರ್

0

 ಕ್ಯಾನ್ಸರಿಗೆ ಸಂಬಂಧಿಸಿದ ಕೆಲವು ವಿಶೇಷಗಳು

   ★ ಕೆಲಬಗೆಯ ವಿಟಮಿನ್ ಗಳು, ನಾರು ಪದಾರ್ಥಗಳು ಕ್ಯಾನ್ಸರ್ನ್ನು ತಡೆಗಟ್ಟಲು ಸಹಕರಿಸುತ್ತವೆಂದು, ಸಂಶೋಧನೆಗಳಿಂದ ರುಜುವಾತಾಗಿದೆ.ಕಣ್ಣುಗಳಲ್ಲಿ ಈ ವಿಟಮಿನ್ ಗಳು ನಾರು ಪದಾರ್ಥಗಳು ವಿಶೇಷವಾಗಿ ದೊರಕುತ್ತವೆ.

    ★ಯಾರಿಗೆ ಯಾವಾಗ ಕ್ಯಾನ್ಸರ್ ಬರುತ್ತದೋ ಹೇಳಲಾಗದು. ನಿಯಮಿತವಾಗಿ ನೀವು ಹಣ್ಣುಗಳನ್ನು ತಿನ್ನುತ್ತಾ ಆರೋಗ್ಯ ಪೂರ್ಣ ಜೀವನಶೈಲಿ ಅಳವಡಿಸಿಕೊಂಡರೆ, ನಿಮ್ಮಲ್ಲಿ ಕ್ಯಾನ್ಸರ್ ನಿರೋಧಕ ಶಕ್ತಿ ಅಭಿವೃದ್ಧಿಯಾಗುತ್ತದೆ.

     ★ಜಪಾನಿನಲ್ಲಿ ಶ್ವಾಸಕೋಶಗಳ ಕ್ಯಾನ್ಸರ್ ಮೇಲೆ ಒಂದು ಆಸಕ್ತಿಕರವಾದ ಸಂಶೋಧನೆ ನಡೆಯಲಾಯಿತು ಆ ಸಂಶೋಧನೆಯಲ್ಲಿ ದಿನವೂ ತಿನ್ನುವ, ಇಲ್ಲವೇ  ಹಣ್ಣಿನ ರಸ ಕುಡಿಯುವ ವ್ಯಕ್ತಿಗಳಿಗೆ, ಲಂಗ್ ಕ್ಯಾನ್ಸರ್ ಬರುವ ಸಂಭವ ಕಡಿಮೆ ಯೆಂದು ತಿಳಿದು ಬಂದಿತು.

     . ★ಹಣ್ಣುಗಳಲ್ಲಿ ನಾರಿನ ಅಂಶ ಅಧಿಕವಾಗಿರುವುದರಿಂದ ನಿಯಮಿತವಾಗಿ ಅವುಗಳನ್ನು ತಿನ್ನುವವರಿಗೆ ದೊಡ್ಡ ಕರುಳಿನ ಕ್ಯಾನ್ಸರ್ ಬರುವ ಸಂಭವ ಕಡಿಮೆ.

      ★ನಾರು ಪದಾರ್ಥ ಕರುಳುಗಳ ಕೆಲಸವನ್ನು ಚುರುಕುಗೊಳಿಸುತ್ತದೆ. ಅಷ್ಟೇ ಅಲ್ಲದೆ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕಗಳೇನಾದರೂ ಕರುಳಿನಲ್ಲಿದ್ದರೆ ಅವುಗಳು ಹೊರ ಹಾಕುತ್ತದೆ.

ವಿಟಮಿನ್ ‘ಎ’ ನಿಂದಾಗುವ ಪ್ರಯೋಜನಗಳು

 ವಿಟಮಿನ್ ‘ಎ ’ನಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಕ್ಯಾನ್ಸರ್ ಬರುವ ಸಂಭವ ಹೆಚ್ಚು.ಹಳದಿ ಹಸಿರು ಹಣ್ಣುಗಳು ಫಲಗಳಲ್ಲಿಯೂ ವಿಟಮಿನ್ ಎ ಗೆ ಪ್ರತಿರೂಪವಾದ ಪುಷ್ಪಳವಾಗಿರುತ್ತದೆ.

     ★ಮಾವು, ಪರಂಗಿ ಹಣ್ಣುಗಳಲ್ಲಿ ವಿಟಮಿನ್ ‘ಎ’ ಸಮೃದ್ಧವಾಗಿರುತ್ತದೆ ನಮ್ಮ ಶರೀರದ ಕೆಲವು ಬಗೆಯ ಕ್ಯಾನ್ಸರ್ರ್ಗಳನ್ನು ಉಂಟುಮಾಡುವ ವಿಷ ಪದಾರ್ಥಗಳನ್ನು ಇವು ನ್ಯೂಟ್ರ ಲೈನ್ ಮಾಡುತ್ತವೆಂದು  ಭಾವಿಸಲಾಗುತ್ತದೆ.

ವಿಟಮಿನ್ ಸಿ ಹೊಂದಿರುವ ಹಣ್ಣುಗಳು

       ★ ವಿಟಮಿನ್ ’ಸಿ’ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. ನೆಗಡಿ  ಅಲರ್ಜಿಗಳು. ಕೆಲವು ಬಗೆಯ ತೀವ್ರ ಸೊಂಕುಗಳನ್ನು ನಿರೋಧಿಸುವುದರಲ್ಲಿ ವಿಟಮಿನ್ ‘ಸಿ’ ಪ್ರಮುಖ ಪಾತ್ರ ವಹಿಸುತ್ತದೆ

    ★ ವಿಟಮಿನ್ ‘ಸಿ ’ಎಲ್ಲಿ ಕ್ಯಾನ್ಸಲ್ ನಿರೋದಕ್ಕೆ ಉಪಯುಕ್ತವಾದ ಲಕ್ಷಣಗಳಿವೆ ಹುಳಿಹಣ್ಣುಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿ ದೊರೆಯುತ್ತದೆ. ನಿಂಬೆ ಕಿತ್ತಳೆ ಇತ್ಯಾದಿಗಳಲ್ಲಿ.

    ★ಈ ಹಣ್ಣುಗಳಲ್ಲಿ ವಿಟಮಿನ್ ’ಸಿ’ ಮಾತ್ರವಲ್ಲದೆ ಎಂಬ ಮತ್ತೊಂದು ಮುಖ್ಯ ಪದಾರ್ಥವೂ ಸಿಗುತ್ತದೆ ನಮ್ಮ ಚರ್ಮ ಜೀರ್ಣಾಂಗ ಗಳನ್ನು ಶ್ವಾಸಕೋಶಗಳು ಲಿವರ್ ಮೊದಲಾದ ಭಾಗಗಳಲ್ಲಿನ ಎನ್ಸೈಮ್ಗಳ ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಈ ಹೆಚ್ಚಿಸುತ್ತದೆ.

     ★ ಕ್ಯಾನ್ಸರ್  ನಿರೋಧಕ್ಕಾಗಿ  ನೀವು ಶೇಖರಿಸಿಟ್ಟ ಹಣ್ಣುಗಳಿಗಿಂತ ತಾಜಾ ಹಣ್ಣುಗಳು ತೆಗೆದುಕೊಳ್ಳುವುದು ಉತ್ತಮ ಹಾಗೆಯೇ ಹಣ್ಣಿನ ರಸ ಕುಡಿಯುವುದಕ್ಕಿಂತ ಹಣ್ಣುಗಳನ್ನು ತಿನ್ನುವುದೇ ಮೇಲು.

     ★ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಕ್ಯಾನ್ಸರ್ ಬರದಂತೆ ನೋಡಿಕೊಳ್ಳಲು ನೀವು ದಿನವೂ ತಾಜಾ ಹಣ್ಣುಗಳನ್ನು ಸೇವಿಸಬೇಕು. ಹಣ್ಣುಗಳನ್ನು ಫ್ರಿಜ್ ಹೊರಗಡೆ ಬಹಳ ಹೊತ್ತು ಇರಿಸುವುದು ಒಳ್ಳೆಯದಲ್ಲ.

    ★ಹಣ್ಣುಗಳಲ್ಲಿನ ಪೌಷ್ಟಿಕ ಮೌಲ್ಯಗಳನ್ನು ಪಡೆಯಲು ತಾಜಾ ಹಣ್ಣುಗಳನ್ನು ತಿನ್ನುವುದು ಉತ್ತಮ.