ಮನೆ ಅಪರಾಧ ಕೋಲಾರದಲ್ಲಿ ಗಾಂಜಾ ಸಾಗಾಟ :10 ಲಕ್ಷ ಮೌಲ್ಯದ ಗಾಂಜಾ ವಶ, ಮೂವರು ಆರೋಪಿಗಳು ಬಂಧನ

ಕೋಲಾರದಲ್ಲಿ ಗಾಂಜಾ ಸಾಗಾಟ :10 ಲಕ್ಷ ಮೌಲ್ಯದ ಗಾಂಜಾ ವಶ, ಮೂವರು ಆರೋಪಿಗಳು ಬಂಧನ

0

ಕೋಲಾರ: ಜಿಲ್ಲೆಯ ಮುಳಬಾಗಲು ಗ್ರಾಮಾಂತರ ಠಾಣಾ ಪೋಲೀಸರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಸುಮಾರು 10 ಲಕ್ಷ ರೂ. ಮೌಲ್ಯದ  11 ಕೆಜಿ ಗಾಂಜಾ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ.

ಮುಳಬಾಗಲು  ತಾಲ್ಲುಕು ಚಿಯಾಂಡಹಳ್ಳಿ ಗ್ರಾಮದ ಅರುಣ್ ಕುಮಾರ್ ಹಾಗೂ ಬೆಂಗಳೂರು ಕೆಆರ್ ಪುರಂ ಮಾರ್ಗೊಂಡಹಳ್ಳಿ ನಿವಾಸಿಗಳಾದ ಸಂಜಯ್ ಹಾಗೂ ಗೋಕಲ್. ಇವರು  ಆಂದ್ರಪ್ರದೇಶದಿಂದ ಬೆಂಗಳೂರಿಗೆ ಕೋಲಾರದ ಮಾರ್ಗವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೋಲೀಸರು ಈ ದಾಳಿ ನಡೆಸಿದ್ದಾರೆ.