ಪಾಂಡವಪುರ: ತಮ್ಮ ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪದ ಮೇಲೆ ಟಿ.ಎಸ್.ಛತ್ರ ಗ್ರಾಮದ ರಮೇಶ್ ಅನ್ನು ಅಬಕಾರಿ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ಅಕ್ರಮವಾಗಿ ಬೆಳೆದಿದ್ದ 9 ಅಡಿ ಉದ್ದದ ಒಂದು ಗಾಂಜಾ ಗಿಡವನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಅಬಕಾರಿ ಉಪ ಆಯುಕ್ತ ಡಾ.ಎಂ.ಮಹಾದೇವಯ್ಯ, ಪಾಂಡವಪುರ ಅಬಕಾರಿ ಉಪ ಅಧೀಕ್ಷಕ ವೈ.ಡಿ.ಗುರುರಾಜ್ ಅವರ ನಿರ್ದೇಶನದ ಮೇರೆಗೆ ಅಬಕಾರಿ ಉಪ ನಿರೀಕ್ಷಕ ಬಿ.ಶಿವಣ್ಣ, ಅಬಕಾರಿ ನಿರೀಕ್ಷಕ ಪ್ರಪುಲ್ ಚಂದ್ರ, ಕಾನ್ಸ್ಟೆಬಲ್ಗಳಾದ ದಿಲೀಪ್ ಕುಮಾರ್, ರಘು, ಮಲ್ಲೇಶ್ ಹಾಗೂ ವಾಹನ ಚಾಲಕ ಸಂದೀಪ್ ಅವರ ತಂಡವು ಕಾರ್ಯಾಚರಣೆ ನಡೆಸಿತು.