ಮನೆ ಅಪರಾಧ ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್: 9 ಕುರಿ, 4...

ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್: 9 ಕುರಿ, 4 ಆಡು ಸಾವು

0

ತಾವರಗೇರಾ: ಪಟ್ಟಣದ ಕುಷ್ಟಗಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ 9 ಕುರಿ ಹಾಗೂ 4 ಆಡುಗಳು ಸ್ಥಳದಲ್ಲಿ ಮೃತಪಟ್ಟ ಘಟನೆ ನ.21ರ ಗುರುವಾರ ಬೆಳಗ್ಗೆ ಸಂಭವಿಸಿದೆ.

Join Our Whatsapp Group

ಅಪಘಾತದಲ್ಲಿ 13 ಕುರಿಗಳು ಗಾಯಗೊಂಡಿವೆ. ತಾವರಗೇರಾದಿಂದ ಕುಷ್ಟಗಿ ರಸ್ತೆಯಲ್ಲಿ ಸಾಗುತ್ತಿದ್ದ ಕುರಿಗಳ ಮೇಲೆ ಕ್ಯಾಂಟರ್ ಲಾರಿಯೊಂದು ಮುಂದೆ ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ.

ವೆಂಕಪ್ಪ ಹನುಮಪ್ಪ ಗೊಲ್ಲರ್ ರತ್ತಾಪುರ ಹಟ್ಟಿ ಎಂಬವರಿಗೆ ಸೇರಿದ ಕುರಿಗಳು ಎನ್ನಲಾಗಿದೆ.

ಸ್ಥಳಕ್ಕೆ ಸ್ಥಳೀಯ ಠಾಣೆಯ ಸಿಬ್ಬಂದಿಗಳಾದ ವೀರೇಶ್ ಹಾಗೂ ಬಸವರಾಜ್ ಇಂಗಳದಾಳ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.