ಮನೆ ರಾಜ್ಯ ಪಂಚಾಯ್ತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಸಾಮರ್ಥ್ಯಭಿವೃದ್ಧಿ ತರಬೇತಿ

ಪಂಚಾಯ್ತಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಸಾಮರ್ಥ್ಯಭಿವೃದ್ಧಿ ತರಬೇತಿ

0

ಮೈಸೂರು: ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು, ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಸಹಯೋಗದಲ್ಲಿ  ” ಪಂಚಾಯ್ತಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಸಾಮರ್ಥ್ಯಭಿವೃದ್ಧಿ ತರಬೇತಿ” ಯನ್ನು ಹೋಟೆಲ್ ಗೋವರ್ಧನ ಲ್ಲಿ ನಡೆಸಲಾಯಿತು.

Join Our Whatsapp Group

ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕರು ಸರಸ್ವತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ,  ಸಂಸ್ಥೆಯು ಕಳೆದ 40 ವರ್ಷಗಳಿಂದ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಪುನ ಶಾಲೆಗೆ ಸೇರಿಸುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು, ಗುಣಾತ್ಮಕ ಶಿಕ್ಷಣ, ಹೀಗೆ ಕಾರ್ಯ ನಿರ್ವಹಿಸುತ್ತಿದೆ. ಈ ತರಭೇತಿ ಯನ್ನೂ ಪ್ರಮುಖವಾಗಿ ಸ್ಥಳೀಯ ಮಟ್ಟದಲ್ಲಿ ಇರುವ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೌಸ್ಟಿಕ ಸಮಿತಿ (VHSNC) ಹಾಗು ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ (WCPC) ಕುರಿತು ತಿಳಿದುಕೊಂಡು ಪಂಚಾಯ್ತಿ ಹಂತದಲ್ಲಿ ಎಲ್ಲರೂ ಬಲಪಡಿಸಬೇಕಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾದ ರಾಘವೇಂದ್ರ ಹೆಚ್.ಸಿ. ರವರು ಮಾತನಾಡಿ, ಈ ಹಿಂದೆ ಇದ್ದಂತಹ ಹಲವಾರು ಸಮಿತಿಗಳನ್ನು ಒಂದು ಮಾಡಿ 2019 ರಲ್ಲಿ ಪಂಚಾಯಿತಿ ಹಂತದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ತಂದಿದ್ದು ಎಷ್ಟೋ ಪಂಚಾಯ್ತಿಗಳಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸದಿರುವುದು ದುರದೃಷ್ಟ. ಇಂದು ಇದರ ಕುರಿತು ನಾವು ತಿಳಿದುಕೊಂಡು ಮುಂದಿನ ದಿನದಲ್ಲಿ ಬಲಪಡಿಸೋಣ. ಮಕ್ಕಳ ರಕ್ಷಣಾ ವ್ಯವಸ್ಥೆಗಳು, ಮಕ್ಕಳ ಸ್ನೇಹಿ ಪಂಚಾಯ್ತಿಯನ್ನಾಗಿ ಮಾಡಲು ನಮ್ಮ ಜವಾಬ್ದಾರಿಗಳೇನು, ಶಿಕ್ಷಣ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಸ್ಥಳೀಯ ಸರ್ಕಾರದ ಪಾತ್ರ, ಪ್ರತೀ ವರ್ಷ ನವೆಂಬರ್ ತಿಂಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಮಾಡಲು ಇಲಾಖೆಯಲ್ಲಿ ಆದೇಶವಿದ್ದು ಹಲವಾರು ಕಡೆ ಇದು ನಡೆಯುತ್ತಿಲ್ಲ. ನೀವುಗಳು ಇದರ ಜವಾಬ್ದಾರಿಯನ್ನು ತೆಗೆದುಕೊಂಡು ಮಕ್ಕಳ ಗ್ರಾಮ ಸಭೆಯನ್ನು ಮಾಡಿ ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕಿದೆ. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಆಗ ಮಕ್ಕಳು ನಮ್ಮ ಕುರಿತು ಗೌರವ ಹೊಂದುತ್ತಾರೆ ಎಂದು ತಿಳಿಸಿದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಗೋಪಾಲಕೃಷ್ಣ ಮೊಸಬಾಯನಹಳ್ಳಿ ಮಾತನಾಡಿ, ಸಂಸ್ಥೆಯ ಹಿಂದಿನ ತರಬೇತಿಯ ಮಹತ್ವ ಮತ್ತು ಕಾರ್ಯ ವೈಖರಿಯ ಕುರಿತು ಶ್ಲಾಘಿಸಿದರು.

ತರಬೇತಿಯಲ್ಲಿ ಆಯ್ದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.