ಗದಗ: ಗದಗ ಜಿಲ್ಲೆಯಲ್ಲೊಂದು ಭೀಕರ ಘಟನೆ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿಗೆ ಹಠಾತ್ತನೆ ಬೆಂಕಿ ಹತ್ತಿದ ಘಟನೆ ವರದಿಯಾಗಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿ ಇದ್ದ ಕುಟುಂಬಸ್ಥರು ತಕ್ಷಣ ಎಚ್ಚೆತ್ತು, ಕಾರಿನಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈರಣ್ಣ ಜಾಲಿಹಾಳ ಅವರು ತಮ್ಮ ಕುಟುಂಬದೊಂದಿಗೆ ಗದಗನಿಂದ ಹನುಮಸಾಗರ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರಿನ ಇಂಜಿನ್‌ನಲ್ಲಿ ಮೊದಲಿಗೆ ಸ್ವಲ್ಪ ಹೊಗೆ ಕಾಣಿಸಿಕೊಂಡಿತು. ತಕ್ಷಣ ಸೂಚನೆ ಅರ್ಥಮಾಡಿಕೊಂಡ ಈರಣ್ಣ ಮತ್ತು ಕುಟುಂಬಸ್ಥರು ತಕ್ಷಣ ಕಾರಿನಿಂದ ಹೊರಗಡೆ ಓಡಿ ಬಂದು ಜೀವ ಉಳಿಸಿಕೊಂಡರು.
ಮಧ್ಯ ರಸ್ತೆಯಲ್ಲೇ ಕಾರು ಸಂಪೂರ್ಣವಾಗಿ ಹೊತ್ತಿ ಉರಿಯಿತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸಿದರು. ಘಟನೆಯ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.