ನಾಗಮಂಗಲ:ಟಿವಿಎಸ್ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಸಾವನಪ್ಪಿದ ಘಟನೆ ತಾಲೂಕಿನ ಕರಿಕ್ಯಾತನಹಳ್ಳಿ ಬಳಿ ನಡೆದಿದೆ.
ತಾಲೂಕಿನ ಆಯಿತನಹಳ್ಳಿ ಗ್ರಾಮದ ಶ್ರೀನಿವಾಸಯ್ಯ (73) ಮೃತಪಟ್ಟಿರುವ ದುರ್ದೈವಿಯಾಗಿದ್ದಾರೆ,
ಆಷಾಢ ಶುಕ್ರವಾರದ ಮಧ್ಯಾಹ್ನ ಕಾಂತಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಗೆ ಸ್ಕೂಟರ್ ನಲ್ಲಿ ತೆರಳಿ ಸ್ವಗ್ರಾಮಕ್ಕೆ ಪಾಪಸಾಗುತ್ತಿದ್ದಾಗ
ಕರಿಕ್ಯಾತನಹಳ್ಳಿ ಗ್ರಾಮದ ವೃತ್ತದಲ್ಲಿ ಕೆ.ಆರ್.ಪೇಟೆ ಕಡೆಯಿಂದ ಯಾದವಗಿರಿ ಕಡೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದ ಪರಿಣಾಮ ಕೆಳಕ್ಕೆ ಬಿದ್ದು ಗಾಯಗೊಂಡ ಶ್ರೀನಿವಾಸಯ್ಯ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಕಾರಿನ ಅತಿ ವೇಗ ಮತ್ತು ಚಾಲಕನ ಅಜಾಗರುಕತೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.