ಮನೆ ಅಪರಾಧ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಇಬ್ಬರ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಇಬ್ಬರ ಸಾವು

0

ಬೆಳಗಾವಿ(Belagavi): ಚಾಲಕ ನಿಯಂತ್ರಣ ತಪ್ಪಿ ಕಾಲುವೆಗೆ ಕಾರೊಂದು ಬಿದ್ದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕರಿಮಸೂತಿ ಏತ ನೀರಾವರಿ ಕಾಲುವೆಗೆ ಕಾರು ಬಿದ್ದಿದ್ದು, ಮೃತರನ್ನು ಮಹಾದೇವ ಚಿಗರಿ (೨೬) ಮತ್ತು ಸುರೇಶ ಬಡಚಿ (೨೭) ಎಂದು ಗುರುತಿಸಲಾಗಿದೆ.
ಎಂಹೆಚ್ ೦೫-ಎಬಿ ೬೬೭೪ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಕಾಲುವಿಗೆ ಕಾರು ಬಿದ್ದಿದೆ.
ಘಟನೆಯಲ್ಲಿ ಘಟನಟ್ಟಿ ಗ್ರಾಮದ ಶ್ರೀಕಾಂತ ನಡುವಿನಮನಿ ಎಂಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ, ಕ್ರೇನ್ ಮೂಲಕ ಕಾರು ಹಾಗೂ ಮೃತ ಯುವಕರನ್ನು ಹೊರತೆಗೆದರು.