ಏಲಕ್ಕಿಯಲ್ಲಿ ಎರಡು ಪ್ರಕಾರಗಳಿವೆ. ಒಂದು ಚಿಕ್ಕ ಏಲಕ್ಕಿ, ಇನ್ನೊಂದು ದೊಡ್ಡ ಏಲಕ್ಕಿ. ಇದನ್ನು ಮುಖ್ಯವಾಗಿ ಮಸಾಲೆ ಹಾಗೂ ಸುಗಂಧಗಳಿಗಾಗಿ ಬಳಸಲಾಗುತ್ತದೆ. ಇದು ಔಷಧಿಗಳಲ್ಲಿಯೂ ಬಳಸಲ್ಪಡುತ್ತದೆ. ಇದರ ಬೀಜಗಳ ಖಾದ್ಯ ಪದಾರ್ಥ ಹಾಗೂ ಪೇಯಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಮಧ್ಯ ಪೂರ್ವ ದೇಶಗಳಲ್ಲಿ ಇದನ್ನು ಚಹಾ ಕಾಫಿಗಳಲ್ಲಿ ಸುವಾಸಿತಗೊಳಿಸಲು ಉಪಯೋಗಿಸುತ್ತಾರೆ.
ಯಾಲಕ್ಕಿ ಬಳೆಯುವಾಗ, ಹೂ ಬಿಡುವಾಗ, ಫಲಿಸುವಾಗ ಇವುಗಳಿಗೆ ಸ್ತ್ರೀ ಸ್ಪರ್ಶದ ಗೊಬ್ಬರದ ಅವಶ್ಯಕತೆ ಇರುತ್ತದೆ. ಪ್ರತಿ ಎರಡು ವಾರಗಳಿಗೊಮ್ಮೆ ತಂಡೋಪ ತಂಡ ಸ್ತ್ರೀಯರು ಪ್ರತಿ ಗಿಡಗಳಿಗೆ ಮುಟ್ಟುತ್ತಾರೆ. ಮತ್ತೊಂದು ವಿಶೇಷವೇನೆಂದರೆ ಯಾಲಕ್ಕಿ ಗಿಡಗಳ ಬಳಿ ಯಾವುದೇ ಪುರುಷರು ಕುಳಿತುಕೊಂಡರೆ ಇದು ಮುಸುಕು ಹಾಕಿಕೊಳ್ಳುತ್ತದೆ ಮತ್ತು ಹೂಗಳು ಒಣಗುತ್ತವೆ ಎಂದು ತಿಳಿದುಬಂದಿದೆ. ಆದ್ದರಿಂದಲೇ ಇದರ ಬೇಸಾಯಕ್ಕೆ ನೂರಕ್ಕೆ ನೂರರಷ್ಟು ಮಹಿಳೆಯರೇ ಕೆಲಸ ಮಾಡುತ್ತಾರೆ.
ಯಾಲಕ್ಕಿ ಜಗತ್ತಿನ ಎಲ್ಲ ದುಬಾರಿ ಮಸಾಲೆಗಳಲ್ಲೊಂದಾಗಿದೆ. ನೂರಾರು ಔಷಧಿ ತಯಾರಿಕೆಗಳಲ್ಲಿ ಉಪಯೋಗಿಸಲಾಗುತ್ತದೆ. ಸುಮಾರು 3500 ವರ್ಷಗಳ ಹಿಂದೆ ಮಿಶ್ರ ದೇಶದ ನಿವಾಸಿಗಳು ಇದರ ಬಳಕೆ ಆರಂಭಿಸಿದರು. ಅರಬ್ ದೇಸದಲ್ಲಿ ಇದನ್ನು ಶ್ರೀಮಂತ ಮನೆತನದ ಪ್ರತಿಷ್ಟೆ ಎಂದು ಹೇಳಲಾಗುತ್ತದೆ. ಅಲ್ಲಿಯ ಶ್ರೀಮಂತರು ಒಂದು ವಿಶಿಷ್ಟ ರೀತಿಯ ಕಾಫಿ ಕುಡಿಯುತ್ತಾರೆ. ಅದನ್ನ ಕಹವಾ ಎನ್ನುತ್ತಾರೆ.
ಯಾಲಕ್ಕಿಯಿಂದ ತಲೆನೋವು, ಹೊಟ್ಟೆ ನೋವು, ಓಕರಿಕೆ, ಕೀಲು ನೋವುಗಳಂತಹ ಹಳೆಯ ರೋಗಗಳು ವಾಸಿ ಮಾಡುವ ಶಕ್ತಿ ಹೊಂದಿದೆ. ಯಾಲಕ್ಕಿಯು ಪಿತ್ತ-ವಾಂತಿ ನಿವಾರಕ, ತಲೆನೋವು, ಹಲ್ಲುಗಳ ರೋಗ, ಮುಖದ ಊತ, ದುರ್ಬಲತೆ ನಿವಾರಿಸುತ್ತದೆ. ಬಾಯಿಯ ದುರ್ವಾಸನೆ ಬಿಕ್ಕಳಿಕೆ ನಿವಾರಣೆಸುತ್ತದೆ.
ಔಷಧೀಯ ಗುಣಗಳು :-
* ಮೂತ್ರತಡೆ – ಯಾಲಕ್ಕಿ ಅರೆದು ಹಾಲಿನೊಂದಿಗೆ ಕುಡಿಸಲು ಮೂತ್ರ ಸುಗಮವಾಗುತ್ತದೆ ಮತ್ತು ಮೂತ್ರದ ಉರಿ ಗುಣವಾಗುತ್ತದೆ.
* ಮೂತ್ರ ಹರಳು – ಕುಂಬಳ ಬೀಜದೊಂದಿಗೆ ಯಾಲಕ್ಕಿಯನ್ನು ಸೇವಿಸಿದರೆ ಮೂತ್ರ ಜನಾಂಗದಲ್ಲಿರುವ ಹರಳು ನಿವಾರಣೆಯಾಗುತ್ತದೆ.
* ಪಚನ ಕ್ರಿಯೆ – ಯಾಲಕ್ಕಿ, ಶುಂಠಿ, ಲವಂಗ ಮತ್ತು ಜೀರಿಗೆ ಸಮಪ್ರಮಾಣದಲ್ಲಿ ಬೆರೆಸಿ ಸಣ್ಣಗೆ ಚೂರ್ಣ ಮಾಡಿ ಊಟದ ನಂತರ ೨ ಗ್ರಾಂನಷ್ಟು ಸೇವಿಸಿದರೆ ತಿಂದ ಆಹಾರವು ಜೀರ್ಣವಾಗುತ್ತದೆ.
* ಹೊಟ್ಟೆ ನೋವು – ಎರಡು ಯಾಲಕ್ಕಿ ಅರೆದು ಜೇನಿನೊಂದಿಗೆ ನೆಕ್ಕಿದರೆ ಹೊಟ್ಟೆ ನೋವು ಗುಣವಾಗುತ್ತದೆ.
* ರಕ್ತ ಪಿತ್ತ – ಖಾಲಿ ಹೊಟ್ಟೆಯಲ್ಲಿ ದಿನಾಲೂ ಎರಡು ಯಾಲಕ್ಕಿ ಅಗೆದು ತಿಂದು ಮೇಲೆ ಹಾಲು, ನೀರು ಕುಡಿದರೆ ರಕ್ತದ ಪಿತ್ತದ ರೋಗವು ಗುಣವಾಗುತ್ತದೆ.