ಮನೆ ಕಾನೂನು 6 ಐಎಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ; ತಡೆ ವಿಸ್ತರಣೆ

6 ಐಎಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ; ತಡೆ ವಿಸ್ತರಣೆ

0

ಬೆಂಗಳೂರು: ಕೆಎಎಸ್‌ ವೃಂದದಿಂದ ಐಎಎಸ್‌ ವೃಂದಕ್ಕೆ ಭಡ್ತಿ ನೀಡುವ ವಿಚಾರವಾಗಿ ಕೇಂದ್ರ ಆಡಳಿತ ನ್ಯಾಯ ಮಂಡಳಿ (ಸಿಎಟಿ) ಆದೇಶ ಪಾಲಿಸಲಾಗಿಲ್ಲ ಎಂದು ಆರೋಪಿಸಿ ರಾಜ್ಯದ 6 ಮಂದಿ ಐಎಎಸ್‌ ಅಧಿಕಾರಿಗಳ ವಿರುದ್ಧ ಸಿಎಟಿ ಮುಂದಿರುವ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದಿನ ಆದೇಶದವರೆಗೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Join Our Whatsapp Group

ಅಲ್ಲದೇ ಈ ಪ್ರಕರಣದಲ್ಲಿ ಹಿಂದೆ ನೀಡಲಾಗಿರುವ ಮಧ್ಯಾಂತರ ಆದೇಶವನ್ನೂ ವಿಸ್ತರಿಸಿದೆ.

ಕೆಎಎಸ್‌ ಅಧಿಕಾರಿ ನಿವೃತ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಅವರ ಪ್ರಕರಣದಲ್ಲಿ ಸಿಎಟಿ ನೀಡಿರುವ ಬಹುಮತದ ತೀರ್ಪು ಹಾಗೂ ತಮ್ಮ ವಿರುದ್ಧದ ನಿಂದನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ರಾಜ್ಯ ಸರಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಗಳಾದ ಸುಭಾಷ್‌ ಕುಂಟಿಯಾ, ಪಿ. ರವಿಕುಮಾರ್‌, ವಂದಿತಾ ಶರ್ಮಾ ಹಾಗೂ ಹಿಂದೆ ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಹೊಣೆಗಾರಿಕೆ ನಿಭಾಯಿಸಿದ್ದ ಟಿ.ಕೆ. ಅನಿಲ್‌ ಕುಮಾರ್‌, ಪಿ. ಹೇಮಲತಾ, ಎಂ.ಎಸ್‌. ಶ್ರೀಕರ್‌ ಅವರು ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಹಾಗೂ ಸಿ.ಎಂ. ಜೋಷಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.