ಮನೆ ರಾಜ್ಯ ಬಲವಂತವಾಗಿ ಬಿಎಂಟಿಸಿ ಕಂಡಕ್ಟರ್ ಟೋಪಿ ತೆಗೆಸಿದ ಪ್ರಕರಣ: ಮಹಿಳೆಯ ವಿರುದ್ಧ ಕ್ರಮಕ್ಕೆ ಆಗ್ರಹ

ಬಲವಂತವಾಗಿ ಬಿಎಂಟಿಸಿ ಕಂಡಕ್ಟರ್ ಟೋಪಿ ತೆಗೆಸಿದ ಪ್ರಕರಣ: ಮಹಿಳೆಯ ವಿರುದ್ಧ ಕ್ರಮಕ್ಕೆ ಆಗ್ರಹ

0

ಬೆಂಗಳೂರು: ಬಿಎಂಟಿಸಿ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮುಸ್ಲಿಂ ಸಮುದಾಯಕ್ಕೆ ಸೇರಿದ ನಿರ್ವಾಹಕರೊಬ್ಬರು ತಲೆಗೆ ಧರಿಸಿದ್ದ ಹಸಿರು ಟೋಪಿಯನ್ನು ಮಹಿಳಾ ಪ್ರಯಾಣಿಕರೊಬ್ಬರು ಪ್ರಶ್ನಿಸಿ ಬಲವಂತವಾಗಿ ತೆಗೆಸಿರುವ ಘಟನೆಯ ವೀಡಿಯೋ ವೈರಲ್ ಆಗಿದ್ದು, ವೀಡಿಯೋ ಮಾಡಿದ ಮಹಿಳೆಯ ವಿರುದ್ಧ ನೆಟ್ಟಿಗರು ಕ್ರಮಕ್ಕೆ ಆಗ್ರಹಿಸಿದ್ದಾರೆ.

Join Our Whatsapp Group

ವೈರಲ್ ವೀಡಿಯೋದಲ್ಲಿ, ಸರ್ಕಾರಿ ಸೇವೆಯಲ್ಲಿರುವಾಗ ಸರ್ಕಾರವೇ ಸಮವಸ್ತ್ರ ನೀಡುತ್ತದೆ. ಅದರಲ್ಲಿ ಈ ಹಸಿರು ಟೋಪಿ ಕೂಡ ಭಾಗವಾಗಿದೆಯೇ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕಂಡಕ್ಟರ್ ನಯವಾಗಿಯೇ ಉತ್ತರಿಸಿ, ನಾನು ತುಂಬಾ ಸಮಯದಿಂದ ಹೀಗೆಯೇ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.

ಇದಕ್ಕೆ ಏರುದನಿಯಲ್ಲಿ ಮತ್ತೆ ಪ್ರಶ್ನೆ ಮಾಡಿರುವ ಆ ಮಹಿಳೆ, ಸುಮಾರು ವರ್ಷದಿಂದ ಹಾಕೋದು ಬೇರೆ. ನಿಮ್ಮ ಧರ್ಮವನ್ನು ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ. ಸಮವಸ್ತ್ರದಲ್ಲಿ ಹಾಕೋದಕ್ಕೆ ಅವಕಾಶ ಇಲ್ಲ ಅಂದ ಮೇಲೆ ಹಾಕಬಾರದು ಎಂದು ಹೇಳಿದ್ದಾರೆ.

ವಿಡಿಯೋ ವೈರಲ್ ಬೆನ್ನಲ್ಲೇ ಬಸ್ ನಲ್ಲಿ ಹನುಮಂತನ ಸ್ಟಿಕರ್ ಇರುವ ಫೋಟೋ ಕೂಡ ವೈರಲ್ ಆಗಿದೆ. ಒಂದು ವೇಳೆ ಟೋಪಿ ಹಾಕುವುದು ತಪ್ಪು ಎಂದಾದರೆ, ಪ್ರತಿಯೊಂದು ಬಸ್ಸಿನಲ್ಲಿ ದೇವರ ಫೋಟೋ, ಕುಂಕುಮ, ಹೂ -ಹಾರ ಹಾಕಬಾರದು. ಇಬ್ಬಗೆಯ ನೀತಿ ಆಗಬಾರದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಹಿಂದಿನ ಲೇಖನನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಮುಂದಿನ ಲೇಖನದೆಹಲಿ ಫ್ಲೈಓವರ್ ಬಳಿ ಮಹಿಳೆಯ ದೇಹದ ಭಾಗ ಪತ್ತೆ: ತನಿಖೆ ಚುರುಕುಗೊಳಿಸಿದ ಪೊಲೀಸರು