ಮನೆ ಸುದ್ದಿ ಜಾಲ ಈದ್‌ಮಿಲಾದ್ ವೇಳೆ ಪೊಲೀಸರನ್ನು ಸುಮ್ಮನಿರಿಸಿ ಹಾಡು ಪ್ರಸಾರ – ಮೂವರ ವಿರುದ್ಧ ಕೇಸ್ ದಾಖಲು

ಈದ್‌ಮಿಲಾದ್ ವೇಳೆ ಪೊಲೀಸರನ್ನು ಸುಮ್ಮನಿರಿಸಿ ಹಾಡು ಪ್ರಸಾರ – ಮೂವರ ವಿರುದ್ಧ ಕೇಸ್ ದಾಖಲು

0

ವಿಜಯಪುರ : ಈದ್‌ಮಿಲಾದ್ ಮೆರವಣಿಗೆ ವೇಳೆ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ ಎಂಬ ಹಾಡನ್ನು ಪ್ರಸಾರ ಮಾಡಿದ ಮೂವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.

ವಿಜಯಪುರ ನಗರದಲ್ಲಿ ಸೆ.5 ರಂದು ಈದ್‌ಮಿಲಾದ್ ಹಬ್ಬದ ಪ್ರಯುಕ್ತ ಮೆರವಣಿಗೆ ನಡೆದಿತ್ತು. ಈ ಮೆರವಣಿಗೆಯಲ್ಲಿ 15 ನಿಮಿಷ ಪೊಲೀಸರನ್ನ ಸುಮ್ಮನಿರಿಸಿ, ಎಂಬ ಹಾಡನ್ನು ಪ್ರಸಾರ ಮಾಡಲಾಗಿತ್ತು. ಇದೀಗ ಪೊಲೀಸರು ಈ ಹಾಡನ್ನು ಪ್ರಸಾರ ಮಾಡಿದ ಮೂವರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಈ ಹಾಡು ಪ್ರಸಾರ ಮಾಡಿದ ಡಿಜೆ ವಾಹನದ ಮಾಲೀಕ, ಡಿಜೆ ಆಪರೇಟರ್, ಹಾಗೂ ಇದನ್ನ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಎಂ.ಟಿ ತೌಸಿಫ್ ವಿರುದ್ಧ ಪ್ರಕರಣ ದಾಖಲಾಗಿದೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುತ್ತಿರುವ ಜಿ.ಕೆ ದೇವಕರ್ ಅವರು ಮೂವರ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ್ದಾರೆ ಎನ್ನಲಾಗಿದೆ.