ಮನೆ ಮಕ್ಕಳ ಶಿಕ್ಷಣ ಗೋಡೆ ಮೇಲಿನ ಬೆಕ್ಕು ಪೋಷಣೆ

ಗೋಡೆ ಮೇಲಿನ ಬೆಕ್ಕು ಪೋಷಣೆ

0

ಗೋಡೆ ಮೇಲೆ ಕುಳಿತುಕೊಂಡ ಬೆಕ್ಕು,ಎತ್ತಾ ಕಡೆ ಧುಮಿಕ್ಕುತ್ತದೆಯೋ ಅದಕ್ಕೆ ಗೊತ್ತಾಗುವುದಿಲ್ಲ ಎಂಬಂತೆ, ಕೆಲವು ಮಂದಿ ತಾಯಿ ತಂದೆಯರು ಯಾವಾಗ ಹೇಗೆ ಪ್ರವರ್ತಿಸುತ್ತಾರೋ ಗೊತ್ತಿಲ್ಲ.ಒಂದು ಬಾರಿ ಒಂದು ಕೆಲಸವನ್ನು ಮಾಡಿದ್ದಕ್ಕಾಗಿ ಅಭಿನಂದನೆಗಳನ್ನು ಪಡೆದ ಮಗನು, ಮರುದಿನ ಅದೇ ಕೆಲಸಕ್ಕೆ ಬೈಗುಳಗಳನ್ನು ಪಡೆದುಕೊಳ್ಳುತ್ತಾನೆ.

ಇದರಿಂದಾಗಿ,  ತಾನು ಹೀಗಿರಬೇಕೋ ಯಾವ ರೀತಿ ಪ್ರವರ್ತಿಸಬೇಕೂ ಗೊತ್ತಾಗದಂತಹ ಗುಂದಾಲಕ್ಕೀಡಾಗುತ್ತಾನೆ. ಹಾಗೆಯೇ ಯಾವಾಗಲೂ ನಿಜವನ್ನೇ ಮಾತನಾಡಬೇಕೆಂದು  ಪದೇ ಪದೇ ಹೇಳುವ ತಂದೆ ತನಗ್ಯಾರಾದರೂ ಫೋನ್ ಮಾಡಿದರೆ “ನಾನಿಲ್ಲ ಎಂದೇಳು” ಎಂದು ಹೇಳುತ್ತಾನೆ ಹಿರಿಯರನ್ನು ಗೌರವಿಸಬೇಕೆಂದು ಬುದಿವಾದ ಹೇಳುವ ತಾಯಿ ತನ್ನ ಅತ್ತೆ ಮಾವಂದಿರ ವಿಷಯದಲ್ಲಿ ಆ ರೀತಿಯಾಗಿ ಗೌರವಿಸದಿರುವುದು ಮಗನನ್ನು ಸಂಧಿಗತೆಗೆ ಸಿಲುಕಿಸುತ್ತದೆ.ಇಂತಹ ವಾತಾವರಣದಲ್ಲಿ ಬೆಳೆದ ಮಕ್ಕಳು ಸ್ವಂತವಾಗಿ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲಾರರು. ಇಂತಹವರು ಬೆಳೆದ ದೊಡ್ಡವರಾದ ಮೇಲೆ ಮಾನಸಿಕ ಸಂಘರ್ಷಗಳಿಗೊಳ ಗಾಗುವ ಅಪಾಯವಿದೆ.