ಮನೆ ಜ್ಯೋತಿಷ್ಯ ಹೃದಯವ್ಯಾದಿಗೆ ಕಾರಣಗಳು

ಹೃದಯವ್ಯಾದಿಗೆ ಕಾರಣಗಳು

0

1. ಅತಿಯಾದ ಒತ್ತಡದಿಂದ ಕೆಲಸ ಮಾಡುವುದು

2. ಅತಿಯಾದ ಕೊಲೆಸ್ಟ್ರಾಲ್ ಇರುವಿಕೆ

3. ವಯಸ್ಸಿನ ಪ್ರಭಾವದಿಂದ

4. ರಕ್ತ ಹೀನತೆ.

5. ವಾಯುಮಾಲಿನ್ಯ ಧೂಮಪಾನ ಹಾಗೂ ಮಧ್ಯಪಾನ.

6. ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಇರುವುದು.

7. ಆಹಾರ ದೋಷ ಹಾಗೂ ಕೊಬ್ಬಿನ ಹಂಸ ಹೆಚ್ಚಾಗಿರುವುದು.

8. ನಿಯಮಿತ ವ್ಯಾಯಾಮ ಇಲ್ಲದಿರುವುದು.

9. ಅತಿಯಾದ ಆಯಾಸ

Join Our Whatsapp Group

         ಈ ರೀತಿಯಾದ ಕಾರಣಗಳನ್ನು ವೈದರು ಕೊಡುವುದು ಸಾಮಾನ್ಯದ ವಿಷಯ.ಇನ್ನು ಜ್ಯೋತಿಷ್ಯದಿಂದ ಈ ಕಾಯಿಲೆಗೆ ಇರುವ ಗ್ರಹ ದೋಷ, ರಾಶಿ ದೋಷಗಳನ್ನು ಈ ರೀತಿಯಾಗಿ ವಿವರಿಸಬಹುದು.

 ರೋಗಲಕ್ಷಣಗಳು :

   ಹೃದಯ ವೈಫಲ್ಯದೆ ಮುಖ್ಯ ರೋಗ ಲಕ್ಷಣವೆಂದರೆ ರೋಗಿಗೆ ವಿಪರೀತ ಸುಸ್ತಾಗುವುದು ಮುಖ್ಯ ಕಾರಣ ಎಂದರೆ ದೇಹದ ಮಾಂಸಖಂಡಗಳಿಗೆ ಅಗತ್ಯ ವಿರುವ ರಕ್ತವನ್ನು ಪಂಪ್ ಮಾಡುವ ಶಕ್ತಿ ಕಡಿಮೆ ಆಗುವುದರಿಂದ ಲಭ್ಯವಿರುವ ರಕ್ತವನ್ನು ದೇಹದ ಅತಿ ಮುಖ್ಯ ಅಂಗಗಳಾದ ಹೃದಯ  ಶ್ವಾಸಕೋಶ,ಮೆದುಳಿಗೆ ಹೋಗುವಂತೆ ದೇಹ ನೋಡಿಕೊಳ್ಳುತ್ತದೆ. ಪರಿಣಾಮ ದೇಹವನ್ನು ಸದಾ ಚೈತನ್ಯ ಪೂರ್ವ ವಾಗಿರುವ ವಿವಿಧ ಮಾಂಸ ಖಂಡಗಳಿಗೆ ರಕ್ತದ ಕೊರತೆಯಾಗಿ ಅವು ಚಟುವಟಿಕೆ ಹೀನವಾಗುತ್ತದೆ ಹಾಗಾಗಿಯೇ ಸುಸ್ತಿನ ತೀವ್ರ ಅನುಭವವಾಗುತ್ತದೆ.

 ಎಡ ಭಾಗದ ಹೃದಯದ ವೈಫಲ್ಯವಾದರೆ :

     ರೋಗಿಗೆ ನಿಧಾನವಾಗಿ ಉಸಿರು ಕಟ್ಟಲಾರಂಭಿಸುತ್ತದೆ. ಈ ಲಕ್ಷಣಗಳು ದಿನದ ಯಾವುದೇ ಕಾಲದಲ್ಲಾದರೂ ಕಾಣಿಸಿಕೊಳ್ಳಬಹುದು.ಆದರೆ ಹೆಚ್ಚಿನ ಸಂದರ್ಭದಲ್ಲಿ ರೋಗಿಯು ಯಾವುದೇ ಕೆಲಸದಲ್ಲಿ ತೀವ್ರತರವಾಗಿ ತೊಡಗಿದಾಗ ರಾತ್ರಿಯ ಹಾಸಿಗೆಯಲ್ಲಿ ಮಲಗಿದ್ದ ವ್ಯಕ್ತಿಗೆ ಉಸಿರು ಕಟ್ಟಿದ ಅನುಭವವಾಗಿ ಅಲ್ಲಿಯೇ ಕುಳಿತುಕೊಂಡು ಹೊಸಗಾಳಿ ದೊರಕುವುದೇನೋ  ಎಂದು ಪರದಾಡುತ್ತಿರುತ್ತಾರೆ ಆಕಸ್ಮಿಕವಾಗಿ ಕೆಮ್ಮು ಬರುವುದು ಅಥವಾ ಇರುವ ಕೆಮ್ಮು ಹೆಚ್ಚಾಗುವುದು ಕೆಮ್ಮಿ ಜೊತೆಗೆ ರೋಗಿಯು ಕಫ ವಾಂತಿ ಮಾಡಿಕೊಳ್ಳುವುದು,ಕೆಲವೊಮ್ಮೆ ಕಪ್ಪದ ಜೊತೆ ರಕ್ತವನ್ನು ವಾಂತಿ ಮಾಡಿಕೊಳ್ಳುವುದು.

    ಈ ಎಲ್ಲಾ ಕಾರಣಗಳು ರೋಗಿಯ ಹೃದಯದಲ್ಲಿ ಪಂಪಿಂಗ್ ಚಟುವಟಿಕೆ ತೀವ್ರ ರೀತಿಯಲ್ಲಿ ಕಡಿಮೆಯಾಗುವುದರಿಂದ ಶ್ವಾಸಕೋಶದಲ್ಲಿ ಹಲವು ರೀತಿಯಲ್ಲಿ ದ್ರವ್ಯಗಳು ಶೇಖರಣೆ ಆಗುವುದು.

 ಬಲಭಾಗದ ಹೃದಯ ವೈಫಲ್ಯವಾದರೆ :

     ಕಾಲು ಮತ್ತು ಮೊಣಕಾಲು ವಿಪರೀತ ಊದಿಕೊಳ್ಳುವುದು.ಹೊಟ್ಟೆಯ ಭಾಗದೊಡ್ಡದಾಗುವುದು. ಅದರಲ್ಲಿ ಯಕೃತ್ ವಿಪರೀತ ದೊಡ್ಡದಾಗುವುದು.ಇದಕ್ಕೆ ಕಾರಣ ಹೃದಯಕ್ಕೆ ಹರಿದು ಬರುವ ಮಲಿನ ರಕ್ತವು ರಕ್ತನಾಳಗಳಿಂದ ನಿಧಾನವಾಗಿ ಬರುತ್ತದೆ.ಪರಿನಾಮ ದೇಹದ ವಿವಿಧ ಅಂಗಗಳಲ್ಲಿ ದ್ರವ್ಯ ಶೇಖರಣೆಯಾಗುತ್ತಾ ಹೋಗುತ್ತದೆ.ಹೀಗೆ ಶೇಖರಣೆ ಗೊಂಡ ಸೋಡಿಯಂ ಲವನಾಂಶವು ಮತ್ತು ನೀರನ್ನು ಹೊರ ಹಾಕಲು ಮೂತ್ರಪಿಂಡ ಸಮರ್ಥವಾಗುತ್ತಾ ಹೋಗುತ್ತದೆ.ಪರಿಣಾಮವಾಗಿ ದೇಹದಲ್ಲಿ ಹೆಚ್ಚು ಹೆಚ್ಚು ದ್ರವ್ಯ ಶೇಖರಣೆಗೊಂಡು ವಿಧಾನವಾಗಿ ಶೀತಲಗೊಳ್ಳುತ್ತಾ ಹೋಗುತ್ತದೆ.

 ಎರಡು ಭಾಗದ ಹೃದಯ ವೈಫಲ್ಯವಾದರೆ :

     ವ್ಯಕ್ತಿಯ ತಲೆ ತಿರುಗುತ್ತದೆ.ಮನಸ್ಸು ಗೊಂಜಲು ಉಂಟಾಗುತ್ತದೆ.ವಾಂತಿ ಬರುವಂತೆ ಆಗುತ್ತದೆ.ಹಸಿವು ತೀವ್ರತರವಾಗಿ ಕಡಿಮೆಯಾಗುತ್ತದೆ. ತೀವ್ರ ಮಲಬದ್ಧತೆ ಉಂಟಾಗುತ್ತದೆ.ಹೃದಯ ವೈಫಲ್ಯ ಉಂಟಾಗಲು ಕಾರಣಗಳು ಹಲವಾರು.ಮಧುಮೇಹ,ಸ್ಥೂಲಾಕಾಯ, ವಿಪರೀತ ಧೂಮಪಾನ,ಮಿತಿಮೀರಿದ ರಕ್ತದೊತ್ತಡ,ಮಾನಸಿಕ ಕಿನ್ನತೆ, ಜನಾಂಗ ಹೃದಯ ತೊಂದರೆಗಳು ಅನಿಮೀಯಾ ರಕ್ತ ಹೀನತೆ ಥೈರಾಯ್ಡ್ ಗ್ರಂಥಿವ್ಯಾಧಿಗಳು.

 ಚಿಕಿತ್ಸೆ

    ವ್ಯಾದಿ ತೀವ್ರತರವಾಗಿ ಮುಂದುವರೆದರೆ ಪೂರ್ಣವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ.ಚಿಕಿತ್ಸೆಯನ್ನು ವಿವಿಧ ಔಷಧಿಗಳಿಂದ ಮಾಡಲಾಗುತ್ತದೆ.ಇದರಲ್ಲಿ ಆಕರ ಕೋಶ ಚಿಕಿತ್ಸೆ ತುಂಬಾ ಪರಿಣಾಮಕಾರಿ.ಹೃದಯಘಾತ, ಈ ಎರಡು ವ್ಯಾಧಿಗಳು ಬರದಂತೆ ಮಾಡಲು ಇದರ ಮುನ್ನೆಚ್ಚರಿಕೆಯೇ ಮುಖ್ಯ ಜೀವನ ಶೈಲಿ ಬದಲಾಗಬೇಕು. ಅಧಿಕ ಮದ್ಯಪಾನ,ಧೂಮಪಾನ,ರಕ್ತದ ಒತ್ತಡ, ಮಧುಮೇಹ ನಿಯಂತ್ರಿಸಬೇಕು. ಹೆಚ್ಚು ಕೊಬ್ಬಿನ ಆಹಾರವನ್ನು ತಿನ್ನಬಾರದು. ಹೆಚ್ಚು ನಡಿಗೆ, ವ್ಯಾಯಾಮ,ಉತ್ತಮ ಆರೋಗ್ಯಕರ ಆಹಾರ, ಹಣ್ಣು ತರಕಾರಿ  ಸೇವಿಸುತ್ತಾ ಹೆಚ್ಚು ದೈಹಿಕ ಮಾನಸಿಕ ಶ್ರಮ ಪಡಬಾರದು.