ಮನೆ ರಾಜ್ಯ 75ನೇ ದಿನ ಪೂರೈಸಿದ ಕಾವೇರಿ ಹೋರಾಟ:ವಿವಿಧ ಸಂಘಟನೆಗಳ ಬೆಂಬಲ

75ನೇ ದಿನ ಪೂರೈಸಿದ ಕಾವೇರಿ ಹೋರಾಟ:ವಿವಿಧ ಸಂಘಟನೆಗಳ ಬೆಂಬಲ

0

ಮಂಡ್ಯ:ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಆದೇಶಿಸಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯದ ಹಿತ ಕಾಪಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ 75ನೇ ದಿನದ ಹೋರಾಟಕ್ಕೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ಸೂಚಿಸಿದವು.


ಸೂನಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಮ್ಮಿಗೆ,ಸೂನಗಹಳ್ಳಿ, ಭೂತನಹೊಸೂರು,ಕಬ್ಬನಹಳ್ಳಿ ಗ್ರಾಮಸ್ಥರು ಹಾಗೂ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಸ್ ವೀರಯ್ಯ, ಮಂಡ್ಯ ನಗರದ ಶ್ರೀ ವಿದ್ಯಾ ಗಣಪತಿ ದೇವಾಲಯ ಬಳಿಯ ಕನ್ನಂಬಾಡಿ ಬಳಗ, ಸುಶೀಲಮ್ಮ ಉದ್ಯಾನವನ ಬಳಿಯ ಮಹಿಳಾ ಮತ್ತು ಪುರುಷರ ಬಳಗ, ಶಿವನಂಜಪ್ಪ ಪಾರ್ಕ್ ನ ದೇವರ ಕಾಡು ಬಳಗ ಕಾವೇರಿ ಹೋರಾಟವನ್ನು ಬೆಂಬಲಿಸಿತು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಣರಾಜಸಾಗರದಿಂದ 3000ಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.ರಾಜ್ಯ ಸರ್ಕಾರ ನೀರು ಬಿಡುಗಡೆ ಮಾಡುವುದಿಲ್ಲ ಎಂದೇಳಿ ನೆರೆರಾಜ್ಯಕ್ಕೆ ನೀರು ಹರಿಸುತ್ತಿದೆ, ಕನ್ನಡ ನಾಡಿನ ಹಿತ ಕಾಪಾಡುವ ಬದಲು ತಮಿಳುನಾಡು ರೈತರ ಹಿತ ಕಾಪಾಡುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿ ರೂಪಿಸದೆ ನಿರ್ಲಕ್ಷ ವಹಿಸಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೂನಗಹಳ್ಳಿ ಗ್ರಾಪಂ ಅಧ್ಯಕ್ಷ ಶಿವು, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ,ಸುರೇಶ್,ಪ್ರಶಾಂತ್, ಕಿರಣ್ ಕುಮಾರ್, ರಾಜೇಗೌಡ, ಪುಟ್ಟೇಗೌಡ, ಕೃಷ್ಣ, ಚಂದ್ರು, ಸೋಮಣ್ಣನೇತೃತ್ವ ವಹಿಸಿದ್ದರು.
ಸುಶೀಲಮ್ಮ ಪಾರ್ಕ್ ಮಹಿಳಾ ಮತ್ತು ಪುರುಷರ ಬಳಗದ ಲಕ್ಷ್ಮಿ, ಹೇಮಾ, ಗೌರಮ್ಮ, ಪ್ರಭ,ಗೀತಾ, ಸುಧಾ,ದೇವರ ಕಾಡು ಬಳಗದ ಕೃಷ್ಣೇಗೌಡ, ಬೋರೇಗೌಡ, ಪಾಪೇಗೌಡ,ಲೋಕೇಶ್, ಸಿ.ಕೆ. ರಾಜಣ್ಣ, ಶಿವರಾಮು ಇತರರಿದ್ದರು.