ಮನೆ ರಾಜ್ಯ ತಮಿಳುನಾಡಿಗೆ ಕಾವೇರಿ ನೀರು: 100 ಅಡಿಗೆ ಕುಸಿದ ಕೆಆರ್ ಎಸ್ ಡ್ಯಾಂ

ತಮಿಳುನಾಡಿಗೆ ಕಾವೇರಿ ನೀರು: 100 ಅಡಿಗೆ ಕುಸಿದ ಕೆಆರ್ ಎಸ್ ಡ್ಯಾಂ

0

ಮಂಡ್ಯ: ಕೆಆರ್ ಎಸ್  ಡ್ಯಾಂ ನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಕೆಆರ್ ಎಸ್  ಡ್ಯಾಂ ನೀರಿನ ಮಟ್ಟ 100 ಅಡಿಗೆ ಕುಸಿದಿದೆ.

ಡ್ಯಾಂ ನ ನೀರಿನ ಮಟ್ಟ ಕುಸಿತದಿಂದಾಗಿ ಜಿಲ್ಲೆಯ ರೈತರು‌ ಕಂಗಾಲಾಗಿದ್ದಾರೆ. ಮಳೆಯ ಕೊರತೆಯ ನಡುವೆಯೂ 113 ಅಡಿಗಳಷ್ಟು ಕೆಆರ್ ಎಸ್  ಡ್ಯಾಂ ಭರ್ತಿಯಾಗಿತ್ತು. ಆದರೆ ತಮಿಳುನಾಡಿಗೆ ನೀರು ಬಿಟ್ಟಿದ್ದರಿಂದ 113 ಅಡಿಯಿಂದ 100 ಅಡಿಗೆ ಇಳಿಕೆಯಾಗಿದೆ.

ಪ್ರತಿ ನಿತ್ಯ 5 ಸಾವಿರ ಕ್ಯುಸೆಕ್ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ನೀರು 100 ಅಡಿಗೆ ಇಳಿಕೆಯಾದರೂ ಇನ್ನು ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ಮುಂದಿನ ದಿನಗಳ ನೀರಿಗೆ ಹಾಹಾಕಾರ ಎದುರಾಗಲಿದೆ/

ಕುಡಿಯುವ ನೀರಿಗೆ ಕೆಆರ್ ಎಸ್ ನ್ನು ನಂಬಿರುವ ಸಿಲಿಕಾನ್ ಸಿಟಿ ಮಂದಿಗೆ ಜಲ ಕಂಟಕ ಎದುರಾಗುವ ಆತಂಕವಿದೆ.

KRS ಡ್ಯಾಂ ನ ಇಂದಿನ  ನೀರಿನ‌ ಮಟ್ಟ

ಕೆ.ಆರ್.ಸಾಗರ ಅಣೆಕಟ್ಟೆಯ

ಗರಿಷ್ಟ ಮಟ್ಟ:124.80 ಅಡಿ

ನೀರಿನ ಮಟ್ಟ: 100.34 ಅಡಿ

ಒಳಹರಿವು    : 1635 ಕ್ಯೂಸೆಕ್

ಹೊರಹರಿವು : 7180 ಕ್ಯೂಸೆಕ್

ಸಂಗ್ರಹ.        : 23.079 TMC

ಹಿಂದಿನ ಲೇಖನಅಲಕೃಂತ ಗಜಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ
ಮುಂದಿನ ಲೇಖನಚಾಮುಂಡಿಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ: ಉಲ್ಲಂಘಿಸಿದರೆ ದಂಡ