ಪಟ್ನಾ(Patna): ಸಿಬಿಐ ದಾಳಿ ನಮ್ಮನ್ನು ಹೆದರಿಸುವುದಕ್ಕಷ್ಟೇ. ಆದರೆ, ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕಿ ರಾಬ್ರಿದೇವಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಹಲವೆಡೆ ಬುಧವಾರ ಆರ್ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ ದಾಳಿ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ.
ಅವರು (ಬಿಜೆಪಿಯವರು) ಹೆದರಿದ್ದಾರೆ. ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ನಮ್ಮ ಜತೆಗಿವೆ. ನಮಗೆ ಬಹುಮತವಿದೆ. ಸಿಬಿಐ ದಾಳಿ ನಮ್ಮನ್ನು ಹೆದರಿಸುವುದಕ್ಕಷ್ಟೇ. ಆದರೆ, ಇದಕ್ಕೆಲ್ಲಾ ನಾವು ಹೆದರುವುದಿಲ್ಲ. ಈ ರೀತಿಯ ದಾಳಿ ನಡೆಯುವುದು ಇದೇ ಮೊದಲಲ್ಲ ಎಂದು ತಿಳಿಸಿದ್ದಾರೆ.














