ಮನೆ ರಾಷ್ಟ್ರೀಯ ಆರ್’ಜೆಡಿ ನಾಯಕರ ಮನೆಗಳ ಮೇಲೆ ಸಿಬಿಐ ದಾಳಿ: ಮುಂದುವರಿದ ಶೋಧ ಕಾರ್ಯ

ಆರ್’ಜೆಡಿ ನಾಯಕರ ಮನೆಗಳ ಮೇಲೆ ಸಿಬಿಐ ದಾಳಿ: ಮುಂದುವರಿದ ಶೋಧ ಕಾರ್ಯ

0

ಪಟ್ನಾ(Patna): ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕರ ಮನೆಗಳು ಸೇರಿದಂತೆ ಬಿಹಾರದ ಹಲವೆಡೆ ಬುಧವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉದ್ಯೋಗಕ್ಕೆ ಬದಲಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ.

ಆರ್‌ಜೆಡಿ ಎಂಎಲ್‌ಸಿ ಸುನಿಲ್ ಸಿಂಘ್, ಅಶ್ಫಾಕ್ ಕರೀಂ, ಫಯಾಜ್ ಅಹ್ಮದ್ ಹಾಗೂ ಆರ್‌ಜೆಡಿಯ ಮಾಜಿ ಎಂಎಲ್‌ಸಿ ಸುಬೋಧ್ ರಾಯ್ ಅವರ ಪಟ್ನಾದ ನಿವಾಸದ ಮೇಲೆ ದಾಳಿ ನಡೆದಿದೆ.

ಇದೊಂದು ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸಲಾಗಿದೆ. ಇದಕ್ಕೆ ಅರ್ಥವಿಲ್ಲ. ಭಯದಿಂದ ಶಾಸಕರು ತಮ್ಮ ಬಳಿ ಬರಬಹುದು ಎಂದು ಭಾವಿಸಿ ಹೀಗೆ ಮಾಡುತ್ತಿದ್ದಾರೆ  ಎಂದು ಸುನಿಲ್ ಸಿಂಘ್ ಆರೋಪಿಸಿದ್ದಾರೆ.

ದಾಳಿ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ ರಾಜ್ಯಸಭಾ ಸದಸ್ಯ ಮನೋಜ್ ಝಾ,  ಇವುಗಳನ್ನೆಲ್ಲ ಇ.ಡಿ, ಐಟಿ ಅಥವಾ ಸಿಬಿಐ ದಾಳಿ ಎಂದು ಹೇಳುವುದು ವ್ಯರ್ಥ. ಈ ಸಂಸ್ಥೆಗಳೆಲ್ಲ ಈಗ ಬಿಜೆಪಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳೆಲ್ಲ ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಇದು ಬಿಜೆಪಿಯ ದಾಳಿ. ಇಂದು ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಈ ದಾಳಿಯ ಹಿಂದಿನ ಮರ್ಮವನ್ನು ಊಹಿಸಬಹುದು  ಎಂದು ಹೇಳಿದ್ದಾರೆ.