ಮನೆ ರಾಷ್ಟ್ರೀಯ ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ ಪ್ರಕಟ : ದೇಶದಲ್ಲಿ ಮೂರನೇ ಸ್ಥಾನ ಪಡೆದ ಬೆಂಗಳೂರು!

ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ ಪ್ರಕಟ : ದೇಶದಲ್ಲಿ ಮೂರನೇ ಸ್ಥಾನ ಪಡೆದ ಬೆಂಗಳೂರು!

0

ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 10ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದ್ದು, ದೇಶದಾದ್ಯಂತ ವಿದ್ಯಾರ್ಥಿಗಳಲ್ಲಿ ಸಂತೋಷದ ಹೊನಲು ಚೆಲ್ಲಿದೆ. ಈ ಫಲಿತಾಂಶದಲ್ಲಿ ಬೆಂಗಳೂರು ನಗರವು ಉತ್ತಮ ಸಾಧನೆ ನಡೆಸಿ ದೇಶದ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ ಎಂಬುದು ಹೆಮ್ಮೆನಿಸುವ ವಿಚಾರ.

ಈ ವರ್ಷ ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶದಲ್ಲಿ ಒಟ್ಟು 93.60% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದು ಕಳೆದ ವರ್ಷದ 93.12% ಗೆ ಹೋಲಿಸಿದರೆ 0.06% ಅಧಿಕವಾಗಿದೆ. ವಿಶೇಷವಾಗಿ ಹುಡುಗಿಯರು ಹುಡುಗರಿಗಿಂತ 2.37% ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ವರ್ಷ ಹುಡುಗಿಯರ ಉತ್ತೀರ್ಣ ಪ್ರಮಾಣ 95% ಆಗಿದ್ದು, ಶಿಕ್ಷಣದಲ್ಲಿ ಲಿಂಗ ಸಮಾನತೆಯತ್ತ ಮುನ್ನಡೆಯದಿರುವ ಇನ್ನೊಂದು ಉದಾಹರಣೆಯಾಗಿದೆ.

ಸಿಬಿಎಸ್‌ಇ 10ನೇ ಫಲಿತಾಂಶ ಹೇಗೆ ಪರಿಶೀಲಿಸಬೇಕು?

  1. ಅಧಿಕೃತ ವೆಬ್‌ಸೈಟ್: cbse.gov.in
  2. ‘Results’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  3. “Class 10 Results” ಲಿಂಕ್ ಆಯ್ಕೆಮಾಡಿ.
  4. ಲಾಗಿನ್ ಪುಟದಲ್ಲಿ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ.
  5. Submit ಕ್ಲಿಕ್ ಮಾಡಿದ ಬಳಿಕ ನಿಮ್ಮ ಫಲಿತಾಂಶ ಪೈದೆಯಲ್ಲೇ ಕಾಣಿಸುತ್ತದೆ.
  6. ಡೌನ್‌ಲೋಡ್ ಮಾಡಿ ಭವಿಷ್ಯಕ್ಕಾಗಿ ಉಳಿಸಿ.

ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ ಹೇಗೆ ಪಡೆಯುವುದು?

  1. DigiLocker App ಡೌನ್‌ಲೋಡ್ ಮಾಡಿ ಅಥವಾ digilocker.gov.in ಗೆ ಭೇಟಿ ನೀಡಿ.
  2. ನಿಮ್ಮ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ.
  3. ತರಗತಿ ಆಯ್ಕೆಮಾಡಿ (Class 10).
  4. ಶಾಲೆಯ ಹೆಸರು, ರೋಲ್ ಸಂಖ್ಯೆ ಮತ್ತು ಆರು-ಅಂಕಿಯ ಕೋಡ್ ನಮೂದಿಸಿ.
  5. OTP ಮೂಲಕ ಖಾತೆ ಸಕ್ರಿಯಗೊಳಿಸಿ.
  6. “Go to DigiLocker account” ಕ್ಲಿಕ್ ಮಾಡಿ ಮತ್ತು ನಿಮ್ಮ ದಾಖಲೆಗಳನ್ನು ಡೌನ್‌ಲೋಡ್ ಮಾಡಿ.

ವಿಶೇಷ ಸೂಚನೆ: ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಈಗ ಡಿಜಿಟಲ್ ದಾಖಲೆಗಳ ಪೂರೈಕೆಗೆ ಡಿಜಿಲಾಕರ್ ವ್ಯವಸ್ಥೆ ಒದಗಿಸಲಾಗಿದೆ. ಈ ಮೂಲಕ ಅಂಕಪಟ್ಟಿ, ಉತ್ತೀರ್ಣ ಪ್ರಮಾಣಪತ್ರ, ವರ್ಗಾವಣೆ ಪ್ರಮಾಣಪತ್ರಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಬಹುದು.