ಮನೆ ಅಪರಾಧ ಸಿಸಿಬಿ ಭರ್ಜರಿ ಕಾರ್ಯಾಚರಣೆ : 45 ಲಕ್ಷ ಮೌಲ್ಯದ ಅಕ್ರಮ ತಂಬಾಕು ಜಪ್ತಿ, ಓರ್ವ ಬಂಧನ

ಸಿಸಿಬಿ ಭರ್ಜರಿ ಕಾರ್ಯಾಚರಣೆ : 45 ಲಕ್ಷ ಮೌಲ್ಯದ ಅಕ್ರಮ ತಂಬಾಕು ಜಪ್ತಿ, ಓರ್ವ ಬಂಧನ

0

ಬೆಂಗಳೂರು : ಅಕ್ರಮವಾಗಿ ತಂಬಾಕು ಶೇಖರಿಸಿ ಇಟ್ಟಿದ್ದ ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಬೆಂಗಳೂರಿನಲ್ಲಿ ಸಿಸಿಬಿ ಇಂದ ಅಕ್ರಮವಾಗಿ ಶೇಖರಿಸಿ ಇಟ್ಟಿದ್ದ 45 ಲಕ್ಷ ಮೌಲ್ಯದ ತಂಬಾಕು ಜಪ್ತಿ ಮಾಡಿಕೊಳ್ಳಲಾಗಿದೆ.

ಗಣೇಶ ಕಂಪನಿಯ ತಂಬಾಕು ಶೇಖರಿಸಿ ಇಡಲಾಗಿತ್ತು. ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯ ಭೋಗಲ್ ಮ್ಯಾನ್ಶನ್ ಗೋದಾಮಿನಲ್ಲಿ ಬಿಲ್ ಇಲ್ಲದೆ ಅಕ್ರಮವಾಗಿ ತಂಬಾಕು ವಸ್ತುಗಳ ಶೇಖರಣೆ ಮಾಡಲಾಗಿತ್ತು. ಸರ್ಕಾರದ ನಿಯಮ ಪ್ರಕಾರ ತಂಬಾಕು ಆರೋಗ್ಯಕ್ಕೆ ಹಾನಿಕರ ಅಂತ ತಂಬಾಕು ಪ್ಯಾಕೆಟ್ ಮೇಲೆ ಕಾಣಿಸುವ ಹಾಗೆ ಬರಹ ಹಾಕಿಸಬೇಕು.

ಆದರೆ ಪ್ಯಾಕೆಟ್ಗಳ ಮೇಲೆ ಸರಿಯಾಗಿ ನಮೂದಿಸದೆ ಮಾರಾಟ ಮಾಡಲಾಗುತ್ತಿತ್ತು . ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಆರೋಪಿ ದಿಲೀಪ್ ನನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.