ಮನೆ ಅಪರಾಧ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಸ್ಟಡಿ ಸೆಂಟರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ಮೂವರ...

ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಸ್ಟಡಿ ಸೆಂಟರ್ ಮೇಲೆ ಸಿಸಿಬಿ ಪೊಲೀಸರ ದಾಳಿ: ಮೂವರ ಬಂಧನ

0

ಹುಬ್ಬಳ್ಳಿ/ ಬೆಂಗಳೂರು: ಸ್ಟಡಿ ಸೆಂಟರ್​​ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಹುಬ್ಬಳ್ಳಿಯ KIOS ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

Join Our Whatsapp Group

ಪ್ರಭುರಾಜ್, ಮೈಲಾರಿ, ಮೊಹಮ್ಮದ್ ತೈಹೀದ್ ಬಂಧಿತ ಆರೋಪಿಗಳು. ಬಂಧಿತರಿಂದ ಪದವಿ, ಎಸ್’​ಎಸ್​’ಎಲ್’​ಸಿ, ಪಿಯು ಮಾರ್ಕ್ಸ್ ಕಾರ್ಡ್​’ಗಳು, ಉತ್ತರ ಪ್ರತಿಗಳು, ಕಲರ್​ ಪ್ರಿಂಟರ್​​ ಮತ್ತು ಜೆರಾಕ್ಸ್ ಮಷಿನ್ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KIOS ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಸ್ಟಡಿ ಸೆಂಟರ್ ನಡೆಸುತ್ತಿದ್ದರು. ಪೊಲೀಸರು ದಾಳಿ ವೇಳೆ 7100 ಅಂಕಪಟ್ಟಿ, 5500 ಉತ್ತರ ಪ್ರತಿಗಳು, 25 ಅಡ್ಮಿಷನ್ ರಿಜಿಸ್ಟರ್​​ಗಳು ಪತ್ತೆಯಾಗಿವೆ.

11.86 ಲಕ್ಷ ಮೌಲ್ಯದ ಅಪೀಮ್ ಪತ್ತೆ

ಸಿಸಿಬಿ ಎಸಿಪಿ ನಾರಾಯಣ ಭರಮಣಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಕುಲ್ ರೋಡ್ ಹೊಸ ಬಸ್ ನಿಲ್ದಾಣದ ಬಳಿ 11.86 ಲಕ್ಷ ಮೌಲ್ಯದ ಸುಮಾರು 2 ಕೆಜಿ ಅಪೀಮ್ ಪತ್ತೆಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮೂಲಾರಾಮ್​ ಹಾಗೂ ಜಯರಾಮ್ ಎಂಬುವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 2 ಕೆಜಿ ದ್ರವ ರೂಪದ ಅಫೀಮು, ಮೂರು ಮೊಬೈಲ್ ಹಾಗೂ 4500 ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.