ಯಶ್ ಅವರ ಮಗ ಯಥರ್ವ್ 2019ರ ಅಕ್ಟೋಬರ್ 30ರಂದು ಜನಿಸಿದ. ಈಗ ಅವನಿಗೆ 6 ವರ್ಷ. ಅವನ ಜನ್ಮದಿನವನ್ನು ಕುಟುಂಬದವರು ಅಂದರೆ ಯಶ್ ಹಾಗೂ ರಾಧಿಕಾ ಪಂಡಿತ್ ಅದ್ದೂರಿಯಾಗಿ ಆಚರಣೆ ಮಾಡಿದರು.
ಈ ಸಂದರ್ಭದ ವಿಡಿಯೋನ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬರ್ತ್ಡೇಗೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ವೈಲ್ಡ್ ಲೈಫ್ ಥೀಮ್ನಲ್ಲಿ ಹುಟ್ಟುಹಬ್ಬ ಆಚರಿಸಲಾಗಿದೆ. ಕೇಕ್ ಕೂಡ ಹಾಗೆಯೇ ಇತ್ತು. ಯಥರ್ವ್-ಆಯ್ರಾ ಕುಣಿದು ಕುಪ್ಪಳಿಸಿದರು.















