ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮೆಡಿಕಲ್ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್’ಲೈನ್ ಮೂಲಕ ಅರ್ಜಿ ಸಲ್ಲಿಸಿ. ಹುದ್ದೆಗಳ ವಿವರ, ಅರ್ಹತೆ, ಪ್ರಮುಖ ದಿನಾಂಕಗಳು, ಅರ್ಜಿ ಲಿಂಕ್ ಅನ್ನು ಕೆಳಗಿನಂತೆ ನೀಡಲಾಗಿದೆ.
ಹುದ್ದೆಗಳ ವಿವರ
ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ : 05
ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ : 185
ಮೆಡಿಕಲ್ ಆಫೀಸರ್ : 107
ಒಟ್ಟು ಹುದ್ದೆಗಳು : 297
ವಿದ್ಯಾರ್ಹತೆ: ಡಿಪ್ಲೊಮ/ ಡಿಗ್ರಿ / ಡಿಎಂ / ಎಂ.ಸಿಹೆಚ್ / ಪಿಜಿ / ಎಂಬಿಬಿಎಸ್ ಪಾಸ್ ಮಾಡಿರಬೇಕು (ಸಂಬಂಧಿಸಿದ ವಿಷಯಗಳಲ್ಲಿ).
ವಯಸ್ಸಿನ ಅರ್ಹತೆ
ಮೆಡಿಕಲ್ ಆಫೀಸರ್ ಹುದ್ದೆಗೆ ಗರಿಷ್ಠ 30 ವರ್ಷ ಮೀರಿರಬಾರದು. ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ ಹುದ್ದೆಗೆ ಗರಿಷ್ಠ 40 ವರ್ಷ ಮೀರಿರಬಾರದು. ಸೂಪರ್ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ ಹುದ್ದೆಗೆ ಗರಿಷ್ಠ 50 ವರ್ಷ ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಪ್ರಮುಖ ದಿನಾಂಕಗಳು
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ: 15-02-2023
ಆನ್’ಲೈನ್ ಅರ್ಜಿಗೆ ಕೊನೆ ದಿನಾಂಕ: 16-03-2023 ರ ರಾತ್ರಿ 11-59 ಗಂಟೆವರೆಗೆ.
ಅರ್ಜಿ ಶುಲ್ಕ ರೂ.400.
ಎಸ್’ಸಿ / ಎಸ್’ಟಿ / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್’ಲೈನ್ ಮೂಲಕ ಪಾವತಿ ಮಾಡಬಹುದು.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ / ಸಹಿಷ್ಣುತಾ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ / ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.
ಆನ್’ಲೈನ್ ಅರ್ಜಿ ಸಲ್ಲಿಸಲು ಫೆಬ್ರುವರಿ 15 ರಂದು ಲಿಂಕ್ ಅನ್ನು ಬಿಡುಗಡೆ ಮಾಡಲಾಗುತ್ತದೆ.
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಅಧಿಕೃತ ವೆಬ್’ಸೈಟ್ ವಿಳಾಸ https://capf.gov.in/ ಗೆ ಭೇಟಿ ನೀಡಿ.