ಬೆಂಗಳೂರು: ಫಸಲ್ ಭೀಮ ಬೆಳೆ ವಿಮೆ ನೀತಿ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಕೃಷಿ ಕ್ಷೇತ್ರದ ಬಗ್ಗೆ ಯಾವುದೇ ಗಂಭೀರ ಪರಿಹಾರ ಇಲ್ಲ ನಿರಾಶದಾಯಕ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ದೆಹಲಿ ರೈತರ ಹೋರಾಟಕ್ಕೆ ಭರವಸೆ ನೀಡಿದಂತೆ ಎಂ ಎಸ್ ಸ್ವಾಮಿನಾಥನ್ ವರದಿ ಪ್ರಕಾರ ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿ ಬಗ್ಗೆ,ರೈತರ ಸಾಲ ಮನ್ನದ ಬಗ್ಗೆ ಯಾವುದೇ ನಿರ್ಧಾರ ಇಲ್ಲ. ಗೃಹಶಕ್ತಿ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸುವ ಭರವಸೆ ಬಡವರಿಗೆ ಆಶಾದಾಯಕ ಎಂದಿದ್ದಾರೆ.