ಮನೆ ಉದ್ಯೋಗ ಸೆಂಟ್ರಲ್​ ಸಿಲ್ಕ್​ ಬೋರ್ಡ್​: ಕಂಪ್ಯೂಟರ್​ ಆಪರೇಟರ್​ ಹುದ್ದೆಗೆ ಅರ್ಜಿ ಆಹ್ವಾನ

ಸೆಂಟ್ರಲ್​ ಸಿಲ್ಕ್​ ಬೋರ್ಡ್​: ಕಂಪ್ಯೂಟರ್​ ಆಪರೇಟರ್​ ಹುದ್ದೆಗೆ ಅರ್ಜಿ ಆಹ್ವಾನ

0

ಬೆಂಗಳೂರು: ಸೆಂಟ್ರಲ್​ ಸಿಲ್ಕ್​ ಬೋರ್ಡ್ ​ನಲ್ಲಿ ಖಾಲಿ ಇರುವ ಕಂಪ್ಯೂಟರ್​ ಆಪರೇಟರ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸಮರ್ಥ್​​ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ 4 ತಿಂಗಳ ಅವಧಿಗೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

Join Our Whatsapp Group

ವಿದ್ಯಾರ್ಹತೆ: ಪಿಯುಸಿ ವಿದ್ಯಾರ್ಹತೆಯ ಜೊತೆಗೆ ಕಂಪ್ಯೂಟರ್​ ಜ್ಞಾನ ಹೊಂದಿರಬೇಕು.

ವೇತನ: ಮಾಸಿಕ 25 ಸಾವಿರ ರೂ ಗೌರವಧನ.

ಆಯ್ಕೆ ಪ್ರಕ್ರಿಯೆ: ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿ ಪ್ರಮಾಣ ಪತ್ರದೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಬಹುದು.

ನೇರ ಸಂದರ್ಶನದ ವಿವರ: ಡಿಸೆಂಬರ್​ 9ರಂದು ಬೆಳಗ್ಗೆ 10ರಿಂದ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು 9.30ಕ್ಕೆ ವಾಕ್​ ಇನ್​ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.

ವಿಳಾಸ: ಕೇಂದ್ರ ರೇಷ್ಮೆ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಸಿಎಸ್​ಬಿ ಕಾಂಪ್ಲೆಕ್ಸ್​, ಬಿಟಿಎಂ ಲೇಔಟ್​, ಮಡಿವಾಳ, ಬೆಂಗಳೂರು- 560068

ಈ ಕುರಿತು ಹೆಚ್ಚಿನ ಮಾಹಿತಿಗೆ csb.gov.in ಇಲ್ಲಿಗೆ ಭೇಟಿ ನೀಡಿ.