ಮನೆ ಆರೋಗ್ಯ ಸೆರೆಬ್ರಲ್ ಪಾಲ್ಸಿ

ಸೆರೆಬ್ರಲ್ ಪಾಲ್ಸಿ

0

ಡೆವಲಪ್ ಮೆಂಟಲ್ ಡಿಸಾರ್ಡರ್ಸ್ ನಲ್ಲಿ ಸೆರಿಬ್ರಲ್ ಪಾಲ್ಸಿ ಮುಖ್ಯಾವಾದದ್ದು. ಸೆರಿಬ್ರಲ್ ಪಾಲ್ಸಿಯಿದ್ದಾಗ ಅ ಮಗು ಮಲಗುವುದು, ಕುಳಿತುಕೊಳ್ಳುವುದು ವಿಚಿತ್ರವಾಗಿರುತ್ತದೆ. ಇತರೆ ಮಕ್ಕಳಂತೆ ಇವರು ಇರುವುದಿಲ್ಲ. ಇವರಲ್ಲಿರುವ ದೋಷ ಶಾಶ್ವತವಾಗಿದ್ದುಬಿಡುತ್ತದೆ. ಅದಕ್ಕಿಂತ ಜಾಸ್ತಿಯಾಗುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಮೆದುಳು ಘಾಸಿಗೊಂಡು, ನರಗಳ ಮೇಲಾಗಿರುವ ಪರಿಣಾಮದಿಂದ ಹೀಗಾಗುತ್ತದೆ. ಸ್ನಾಯುಗಳು ಬಿಗಿದುಕೊಂಡಿರುವುದರಿಂದ ಮಗುವನ್ನು ಎಬ್ಬಿಸಿದರೆ, ಕುಳ್ಳಿರಿಸಿದರೆ, ನಡೆಯಿಸಿದರೆ ಶರೀರದಲ್ಲಿರುವ ಸ್ನಾಯುಗಳು ಸ್ಪಂದಿಸುವುದಿಲ್ಲ.

ಅವಧಿಗೆ ಮುಂಚೆ ಹುಟ್ಟಿದ ಮಕ್ಕಳಲ್ಲಿ ಕಡಿಮೆ ತೂಕದ ಮಕ್ಕಳಲ್ಲಿ ಸೆರಿಬ್ರಲ್ ಪಾಲ್ಸಿಗೆ ಹೆಚ್ಚು ಕಂಡುಬರುತ್ತದೆ. ಹೆರಿಗೆಗೆ ಯಾವುದೇ ಸಂಬಂಧವಿಲ್ಲದೇ ಗರ್ಭಾದಲ್ಲಿರುವ ಮಗುವಿಗೆ ತೊಂದರೆಯಿಂದ ಸೆರಿಬ್ರಲ್ ಪಾಲ್ಸಿ ಬರಬಹುದು. ಸೆರಿಬಲ್ಸ್ ಪಾಲ್ಸಿ ಮಗು ಹುಟ್ಟಿದ ಒಂದು ವರ್ಷದಿಂದ 3 ವರ್ಷಗಳ ವಯಸ್ಸಿನಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಸೆರೆಬ್ರಲ್ ಪಾಲ್ಸಿಗೆ ಪ್ರಧಾನವಾಗಿ ಮನೆಯಲ್ಲಿ ಹೆರಿಗೆಯಾಗುವುದು. ಯಾವುದೇ ಶಿಕ್ಷಣವಿಲ್ಲದವರು ಹೆರಿಗೆ ಮಾಡಿಸುವುದೇ ಕಾರಣವಾಗಿರುತ್ತದೆ.

ಸೆರಿಬ್ರಲ್ ಪಾಲ್ಸಿ ಮಗುವನ್ನು ಗುರುತಿಸುವುದು :-

3ನೇ ತಿಂಗಳು ತುಂಬಿದರು ಕೂಡ ತಲೆಯನ್ನು ನಿಲ್ಲಿಸಲಾಗುವುದಿಲ್ಲ. ಕೈಕಾಲುಗಳು ಬಿಗಿದುಕೊಂಡಿರುತ್ತದೆ. 8 ತಿಂಗಳಾದರೂ ತನ್ನಷ್ಟಕ್ಕೆ ತಾನೇ ಕುಳಿತುಕೊಳ್ಳಲಾರದು. ಶರೀರದ ಒಂದು ಕಡೆಯ ಕೈ ಮತ್ತು ಕಾಲನ್ನು ಉಪಯೋಗಿಸುತ್ತದೆ. ಅತಿಯಾಗಿ ಅಳುತ್ತದೆ, ಕೋಪ ಮಾಡಿಕೊಳ್ಳುತ್ತದೆ, ನಗುವುದಿಲ್ಲ, ಆಹಾರ ತಿನ್ನಿಸಿದರೆ ಸರಿಯಾಗಿ ಅಗಿಯುವುದಿಲ್ಲ, ನಂಗುವುದಿಲ್ಲ.        

ಸೆರಿಬ್ರಲ್ ಪಾಲ್ಸಿ ಡಿಫೆಕ್ಟ್ ಮಕ್ಕಳಲೆಲ್ಲರಲ್ಲಿಯೂ ಒಂದೇ ವಿಧವಾಗಿ ಇರಬೇಕೆಂದೇನೂ ಇಲ್ಲ. ಸ್ವಲ್ಪ ಹೆಚ್ಚು ಕಡಿಮೆ ಇರುತ್ತದೆ.

ಚಿಕಿತ್ಸೆ :-

ಸೆರಿಬ್ರಲ್ ಪಾಲ್ಸಿ ಔಷಧಿಗಳಿಂದ ವಾಸಿಯಾಗುವುದಿಲ್ಲ. ಈ ಸಮಸ್ಯೆ ಇರುವ ಮಗುವಿನ ಶರೀರ ಚಲನೆಯ ಶಿಕ್ಷಣ ಕೊಡುವುದರ ಮೂಲಕ ದೋಷಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಸೆರಿಬ್ರಲ್ ಪಾಲ್ಸಿ ಮಗು ಹಾಲು ನುಂಗಲಾಗದಿದ್ದಾಗ ಮೃದುವಾದ ಬ್ರಷ್ ನಿಂದ ಬಾಯಿಯನ್ನು ಸುತ್ತಲೂ ರೂಟಿಂಗ್ ರಿಫ್ಲೆಕ್ಟ್ ಮಾಡಿದರೆ ನುಂಗುವಿಕೆ ಮಾಡಬಹುದು. ತಾಯಿಯ ಮೊಲೆತೊಟ್ಟುಗಳನ್ನು ಬಾಯಿಗಿಟ್ಟರೆ ಚೀಪುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಕಣ್ಣಿನ ಗುಡ್ಡೆಗಳನ್ನು ಅತ್ತಿತ್ತ ಕದಲಿಸಲು, ಕಣ್ಣು ಮುಂದೆ ಬೊಂಬೆಗಳನ್ನು ಅತಿತ್ತ ತಿರುಗಾಡಿಸುತ್ತಾ ʼಐʼ ಎಕ್ಸರ್ ಸೈಜ್ ಮಾಡಿಸಬಹುದು. 8ನೇ ತಿಂಗಳು ತುಂಬಿದಾಗಿನಿಂದ ಕೈಗೆ ಆಟಿಕೆಗಳನ್ನು ಕೊಡುತ್ತಾ ಅವುಗಳನ್ನು ಹಿಡಿದುಕೊಳ್ಳಲು ಪ್ರೋತ್ಸಾಹಿಸಬಹುದು. ವಿವಿಧ ಕ್ರಮಗಳನ್ನನುಸರಿಸಿ ಶರೀರದ ಚಲನೆಯನ್ನು ಪ್ರೋತ್ಸಾಹಿಸಲು ಪ್ರಯತ್ನಿಸಬೇಕು. ಇಷ್ಟೆಲ್ಲಾ ಮಾಡುತ್ತಿದ್ದರೆ ಸ್ಪಾಸ್ಟಿಸಿಟಿ ಸ್ವಲ್ಪ ನಿಯಂತ್ರಣಕ್ಕೆ ಬರುತ್ತದೆ. ಸಾಧಾರಣ ಚಲನೆ ಸ್ಥಾಪಿತವಾಗುತ್ತದೆ. ಫಿಜಿಯೋಥೆರಪಿಯ ಮೂಲಕವು ಅವರಲ್ಲಿರುವ ತೊಂದರೆಯನ್ನು ನಿವಾರಿಸಲು ಪ್ರಯತ್ನಿಸಬೇಕು.

ಮುಂದುವರೆಯುತ್ತದೆ…