ಮನೆ ಕಾನೂನು ಚಡ್ಡಿ ಗ್ಯಾಂಗ್ ಬೆಂಗಳೂರಿನಿಂದ ಮಂಗಳೂರಿಗೆ ಬಂದಿತ್ತು: ಪೊಲೀಸ್ ಆಯುಕ್ತ ಅನುಪಮ್

ಚಡ್ಡಿ ಗ್ಯಾಂಗ್ ಬೆಂಗಳೂರಿನಿಂದ ಮಂಗಳೂರಿಗೆ ಬಂದಿತ್ತು: ಪೊಲೀಸ್ ಆಯುಕ್ತ ಅನುಪಮ್

0

ಮಂಗಳೂರು: ಮಂಗಳೂರಿನಲ್ಲಿ ದರೋಡೆ‌ ನಡೆಸಿ ಸಿಕ್ಕಿ ಬಿದ್ದಿರುವ ಮಧ್ಯ ಪ್ರದೇಶ ಮೂಲದ ಚಡ್ಡಿ ಗ್ಯಾಂಗ್ ಬೆಂಗಳೂರಿನಿಂದ ಮಂಗಳೂರಿಗೆ ಬಂದಿತ್ತು. ದರೋಡೆ ನಡೆಸಿದ ಬಳಿಕ ಬೆಂಗಳೂರಿನ ಯಶವಂತ ಪುರಕ್ಕೆ ವಾಪಸಾಗುತ್ತಿತ್ತು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.

Join Our Whatsapp Group

ಇದೆ ಚಡ್ಡಿಗ್ಯಾಂಗ್ ಬೆಂಗಳೂರು, ರಾಜಸ್ತಾನ, ಮಧ್ಯ ಪ್ರದೇಶಗಳಲ್ಲಿಯೂ ಹಲವಾರು ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದೆ. ಓರ್ವ ಆರೋಪಿ ರಾಜು ಮೇಲೆ ಹತ್ತು ಪ್ರಕರಣಗಳಿವೆ. ಇದು ವೃತ್ತಿಪರ ದರೋಡೆಕೋರರ ಗ್ಯಾಂಗ್. ಮಂಗಳೂರಿನ ಕೋಡಿಕಲ್ ನಲ್ಲಿ ಕೂಡ ಇದೇ ಗ್ಯಾಂಗ್ ಕಳ್ಳತನ ನಡೆಸಿರುವುದು ಗೊತ್ತಾಗಿದೆ. ಫಿಂಗರ್ ಪ್ರಿಂಟ್ ಪರಿಶೀಲನೆ ಮೂಲಕ ದೇಶದಾದ್ಯಂತ ಈ ತಂಡ ನಡೆಸಿರಬಹುದಾದ ಕೃತ್ಯಗಳ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ದರೋಡೆಕೋರರನ್ನು ಬಂಧಿಸಿದ ತಂಡಕ್ಕೆ ಆಯುಕ್ತರು ಐವತ್ತು ಸಾವಿರ ರೂ. ನಗದು ಬಹುಮಾನ ಘೋಷಿಸಿದರು.

ಆರೋಪಿಗಳು ರಾಡ್ ಎಸೆದಿರುವ ಜಾಗದ ಪಂಚನಾಮೆ ನಡೆಸಲು ಇಂದು ಬೆಳಗ್ಗೆ ಮುಲ್ಕಿ ಸಮೀಪದ ಸ್ಥಳವೊಂದಕ್ಕೆ ಕರೆದುಕೊಂಡು ಹೋದಾಗ ಆರೋಪಿಗಳಿಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ ಗುಂಡು‌ ಹಾರಿಸಲಾಯಿತು ಎಂದು ಅಯುಕ್ತರು ತಿಳಿಸಿದ್ದಾರೆ.