ಮನೆ ಕ್ರೀಡೆ ಐಪಿಎಲ್ ನಲ್ಲಿ ವೇಗವಾಗಿ 150 ವಿಕೆಟ್ ಪಡೆದ 2ನೇ ಬೌಲರ್ ಚಹಲ್

ಐಪಿಎಲ್ ನಲ್ಲಿ ವೇಗವಾಗಿ 150 ವಿಕೆಟ್ ಪಡೆದ 2ನೇ ಬೌಲರ್ ಚಹಲ್

0

ಮುಂಬೈ(Mumbai): ಚಹಲ್ ಐಪಿಎಲ್‌ನಲ್ಲಿ ವೇಗವಾಗಿ 150 ವಿಕೆಟ್ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಅವರು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 4 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

118ನೇ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ, 105 ಐಪಿಎಲ್ ಪಂದ್ಯಗಳಲ್ಲಿ 150 ವಿಕೆಟ್ ಪೂರೈಸಿದ ಮಾಜಿ ಬೌಲರ್ ಲಸಿತ್ ಮಾಲಿಂಗ ಮೊದಲ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಅತಿ ವೇಗದ 150 ವಿಕೆಟ್

105 – ಲಸಿತ್ ಮಾಲಿಂಗ

118 – ಯಜುವೇಂದ್ರ ಚಹಾಲ್

137 – ಡ್ವೇನ್ ಬ್ರಾವೋ

140 – ಅಮಿತ್ ಮಿಶ್ರಾ

156 – ಪಿಯೂಷ್ ಚಾವ್ಲಾ

159 – ಹರ್ಭಜನ್ ಸಿಂಗ್

ಇನ್ನು ನಾಲ್ಕು ವಿಕೆಟ್ ಪಡೆಯುವ ಮೂಲಕ ಚಹಲ್ ಅವರು  ಉಮೇಶ್ ಯಾದವ್ ಅವರನ್ನು ಹಿಂದಿಕ್ಕಿ ಪರ್ಪಲ್ ಕ್ಯಾಪ್ ಗೆದ್ದರು. ಈಗ ಅವರ ಹೆಸರಿನಲ್ಲಿ 11 ವಿಕೆಟ್‌ಗಳಿವೆ. ಲಖನೌ ವಿರುದ್ಧದ ಪಂದ್ಯದಲ್ಲಿ ಅವರು ಕ್ವಿಂಟನ್ ಡಿ ಕಾಕ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ ಮತ್ತು ದುಷ್ಮಂತ ಚಮೀರಾ ಅವರ ವಿಕೆಟ್ ಪಡೆದಿದ್ದಾರೆ. 

ಹಿಂದಿನ ಲೇಖನಕೆಯುಡಬ್ಲ್ಯೂಜೆ ಚುನಾವಣೆ ಬಗ್ಗೆ ಸಲ್ಲಿಸಿದ್ದ ತಕರಾರು ಅರ್ಜಿ ವಜಾ ಮಾಡಿದ ಹೈಕೋರ್ಟ್
ಮುಂದಿನ ಲೇಖನಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕನ್ನಡ ದ್ರೋಹಿಗಳು:ಹೆಚ್ ಡಿ ಕೆ