ಮನೆ ಅಪರಾಧ ಹಾಡುಹಗಲೇ ಮದ್ದೂರಿನಲ್ಲಿ ಸರಗಳ್ಳತನ: 70 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಹಾಡುಹಗಲೇ ಮದ್ದೂರಿನಲ್ಲಿ ಸರಗಳ್ಳತನ: 70 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾದ ದುಷ್ಕರ್ಮಿಗಳು

0

ಮದ್ದೂರು: ಪಟ್ಟಣದಲ್ಲಿ ಹಾಡುಹಗಲೇ ವೃದ್ದೆಯೊಬ್ಬರ ಸರಗಳ್ಳತನ ಮಾಡಿರುವ ಪ್ರಕರಣ ಸೋಮವಾರ ಬೆಳಿಗ್ಗೆ ನಡೆದಿದೆ.

Join Our Whatsapp Group

ಮದ್ದೂರು ಪಟ್ಟಣದ ಕೆನರಾ ಬ್ಯಾಂಕ್ ರಸ್ತೆಯ ಬೆಸ್ತರ ಬೀದಿಯ ಕೆಂಪಮ್ಮ (70) ಎಂಬ ವೃದ್ದೆಯೇ ಚಿನ್ನದ ಸರ ಕಳೆದುಕೊಂಡ ವೃದ್ದೆಯಾಗಿದ್ದಾರೆ.
ಬೆಳಿಗ್ಗೆ ಮನೆ ಮುಂಭಾಗ ಕೆಂಪಮ್ಮ ಕುಳಿತಿರುವುದನ್ನು ಗಮನಿಸಿ ಬಂದ ಇಬ್ಬರು ದುಷ್ಕರ್ಮಿಗಳು ವೃದ್ದೆ ಬಳಿ ಬಂದು ಹೊಸದಾಗಿ ಸಾಯಿಬಾಬಾ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ ನೀವು ಸ್ವಲ್ಪ ದೇವಾಲಯ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಹೇಳಿದ್ದಾರೆ.ಅಜ್ಜಿ ಜೊತೆ ಮಾತನಾಡುತ್ತ ಒಬ್ಬ ಪ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಚಾಲನೆ ಇಟ್ಟುಕೊಂಡಿದ್ದಾನೆ.ಮತ್ತೊಬ್ಬ ಮಾತನಾಡುತ್ತಿದ್ದಂತೆ ವೃದ್ದೆ ಕೆಂಪಮ್ಮರ ಕುತ್ತಿಗೆಗೆ ಕೈ ಹಾಕಿ ಅಂದಾಜು 70 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಳ್ಳುತ್ತಿದಂತೆ ವೃದ್ದೆ ಜೋರಾಗಿ ಕಿರುಚಿಕೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಹಾಗೂ ಸಾರ್ವಜನಿಕರು ಸರಗಳ್ಳರನ್ನು ಹಿಡಿಯುವಷ್ಟರಲ್ಲಿ ಇಬ್ಬರು ದುಷ್ಕರ್ಮಿಗಳು ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ.


ತಕ್ಷಣವೇ ಸ್ಥಳೀಯರು ಮತ್ತು ವಾಹನ ಸವಾರರು ಸರಗಳ್ಳರನ್ನು ಬೆನ್ನಟ್ಟಿದ್ದರು ಸಹ ಮಿಂಚಿನ ವೇಗದಲ್ಲಿ ಸರಗಳ್ಳರು ಕಣ್ಮರೆಯಾಗಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ವೃತ್ತ ನಿರೀಕ್ಷಕ ಶಿವಕುಮಾರ್, ಮದ್ದೂರು ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಹಾಗೂ ಅಪರಾಧ ವಿಭಾಗದ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಇನ್ನು ಗ್ರಾಮಾಂತರ ಪ್ರದೇಶ, ವಾಯುವಿಹಾರಕ್ಕೆ ತೆರಳುತ್ತಿದ್ದ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಕೊಂಡು ಸರಗಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳು ಈಗ ಪಟ್ಟಣ ವ್ಯಾಪ್ತಿಯಲ್ಲಿ ಹಾಡುಹಗಲೇ ಸರಗಳ್ಳತನಕ್ಕೆ ಇಳಿದಿದ್ದಾರೆ.ಇದೇ ರೀತಿ ಪ್ರಕರಣಗಳು ಮುಂದುವರೆದರೆ ಜನರು ನಿರ್ಭೀತಿಯಿಂದ ಓಡಾಡಲು ಆಗುವುದಿಲ್ಲ ಆಗಾಗಿ ಹೆಚ್ಚಿನ ಪೋಲೀಸ್ ಗಸ್ತು, ಸರಗಳ್ಳರ ಹೆಡೆಮುರಿ ಕಟ್ಟಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.