ಮನೆ ರಾಜಕೀಯ ಕುರ್ಚಿ ಕದನ; ಹೈಕಮಾಂಡ್‌ ಹೇಳಿದ್ರೆ ನಾನೂ ಕೇಳ್ಬೇಕು, ಡಿಕೆಶಿನೂ ಕೇಳ್ಬೇಕು – ಸಿದ್ದರಾಮಯ್ಯ

ಕುರ್ಚಿ ಕದನ; ಹೈಕಮಾಂಡ್‌ ಹೇಳಿದ್ರೆ ನಾನೂ ಕೇಳ್ಬೇಕು, ಡಿಕೆಶಿನೂ ಕೇಳ್ಬೇಕು – ಸಿದ್ದರಾಮಯ್ಯ

0

ಬೆಂಗಳೂರು : ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಹೇಳಿದಂತೆ ನಾನು, ಡಿಕೆ ಶಿವಕುಮಾರ್ ನಡೆದುಕೊಳ್ಳಬೇಕು ಅಂತ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ʻಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡ್ತಾರೆ ಎಂಬ ವಿಶ್ವಾಸ ಇದೆʼ ಅನ್ನೋ ಡಿಕೆ ಸುರೇಶ್ ಹೇಳಿಕೆ ಕುರಿತು ಪ್ರಶ್ನೆ ಕೇಳುತ್ತಲೇ ಸಿಟ್ಟಾದ ಸಿಎಂ, ಅದನ್ನ ಬಿಟ್ಟು ಬೇರೆ ಏನು ಕೇಳೋಕೆ ಬರಲ್ವಾ ನಿಮಗೆ? ಇನ್ನೇನು ಕೇಳೋದೆ ಇಲ್ಲವಲ್ಲ. 3 ತಿಂಗಳು ಆಯ್ತು ಇದನ್ನ ನೀವು ಶುರು ಮಾಡಿ. ಇನ್ನು ಮೇಲೆ ಇದನ್ನ ಕೇಳಬೇಡಿ ದಯಮಾಡಿ. ಹೈಕಮಾಂಡ್‌ಗೆ ಎಲ್ಲವೂ ಗೊತ್ತು. ಹೈಕಮಾಂಡ್ ಅವರು ಎಲ್ಲವನ್ನ ತೀರ್ಮಾನ ಮಾಡ್ತಾರೆ ಅಂತ ತಿಳಿಸಿದರು.

ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೋ ಅದರಂತೆ ನಡೆದುಕೊಳ್ಳೋನು ನಾನು. ಇದನ್ನ ಎಷ್ಟು ಸಾರಿ ಹೇಳೋದು ನಿಮಗೆ. ಯಾರು ಕೇಳೋಕೆ ಹೋಗಬೇಡಿ ಇನ್ನು. ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳೋದು. ಹೈಕಮಾಂಡ್ ಹೇಳಿದಂತೆ ನಾನು ನಡೆದುಕೊಳ್ಳಬೇಕು, ಡಿಕೆ ಶಿವಕುಮಾರ್ ಕೂಡಾ ನಡೆದುಕೊಳ್ಳಬೇಕು ಅದು ಬಿಟ್ಟು ಬೇರೆ ಏನು ಕೇಳೋದೇ ಇಲ್ಲವಾ ಎಂದು ಅಕ್ರೋಶಗೊಂಡ್ರು. ಇವತ್ತು ಡಿಕೆ ಸುರೇಶ್‌ ಮಾತಾಡಿದ್ರೆ, ಅವ್ರನ್ನೇ ಕೇಳಿ, ನನಗೆ ಯಾಕೆ ಕೇಳ್ತೀರಾ? ನಾನು ಹೈಕಮಾಂಡ್ ಹೇಳಿದಂತೆ ಕೇಳೋದು ಎಂದರು.