ಮನೆ ಅಪರಾಧ ಬ್ಯಾಂಕ್ ಖಾತೆ ದುರ್ಬಳಕೆ: ಪತಿ, ಮಾವನ ವಿರುದ್ಧ ದೂರು ದಾಖಲಿಸಿದ ಚೈತ್ರಾ ಬಿ ಪೋತರಾಜ್

ಬ್ಯಾಂಕ್ ಖಾತೆ ದುರ್ಬಳಕೆ: ಪತಿ, ಮಾವನ ವಿರುದ್ಧ ದೂರು ದಾಖಲಿಸಿದ ಚೈತ್ರಾ ಬಿ ಪೋತರಾಜ್

0

ಮೈಸೂರು(Mysuru): ಬ್ಯಾಂಕ್ ಖಾತೆ ದುರ್ಬಳಕೆ ಆರೋಪ ಹೊರಿಸಿ ನಟಿ ಚೈತ್ರಾ ಬಿ ಪೋತರಾಜ್ ತನ್ನ ಪತಿ ಮತ್ತು ಮಾವನ ವಿರುದ್ಧ  ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನ್ನ ಅನುಮತಿಯಿಲ್ಲದೆ ಗೋಲ್ಡ್ ಲೋನ್ ಪಡೆಯಲಾಗಿದೆ ಎಂದು ಪತಿ ಬಾಲಾಜಿ ಪೋತರಾಜ್, ಮಾವ ಪೋತರಾಜ್ ವಿರುದ್ಧ ಚೈತ್ರಾ ದೂರು ನೀಡಿದ್ದಾರೆ.

ಗೋಲ್ಡ್​ ಲೋನ್ ಪಡೆಯುವ ವೇಳೆ ತನ್ನ ಸಹಿಯನ್ನು ನಕಲು (ಫೋರ್ಜರಿ) ಮಾಡಲಾಗಿದೆ. ಈ ಅವ್ಯವಹಾರದಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡ ಶಾಮೀಲಾಗಿದ್ದಾರೆ. ಪ್ರಕರಣ ಸಂಬಂಧ ತಮಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಅವರು ಮೂರು ದಿನಗಳ ಹಿಂದೆಯೇ ದೂರು ನೀಡಿದ್ದಾರೆ.

ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಗುರು ಶಿಷ್ಯ, ಶ್ರೀ ದಾನಮ್ಮ ದೇವಿ ಚಿತ್ರಗಳಲ್ಲಿ ನಟಿಸಿರುವ ಚೈತ್ರಾ ಅವರು, ತಮ್ಮ ಅನುಮತಿ ಇಲ್ಲದೆ ಗೋಲ್ಡ್ ಲೋನ್ ಪಡೆದ ಬಗ್ಗೆ ಗಂಡ ಬಾಲಾಜಿ, ಮಾವ ಪೋತರಾಜ್, ಸೌತ್ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ವಿರುದ್ಧ  ದೂರು ದಾಖಲಿಸಿದ್ದು, ನನಗೆ ಜೀವಬೆದರಿಕೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಪತಿಯ ವಿರುದ್ಧ ಈಗಾಗಲೇ ದೈಹಿಕ ಹಲ್ಲೆ ಆರೋಪದಡಿ ಕೇಸು ದಾಖಲಿಸಿದ್ದು, ನನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿ ಮತ್ತೆ ದೂರು ನೀಡುತ್ತಿದ್ದೇನೆ ಎಂದು ಪೊಲೀಸ್ ದೂರಿನಲ್ಲಿ ನಟಿ ಚೈತ್ರಾ ಉಲ್ಲೇಖಿಸಿದ್ದಾರೆ.

ದೂರಿನ ಆಧಾರದ ಮೇಲೆ, ಜಯಲಕ್ಷ್ಮಿಪುರಂ ಪೊಲೀಸರು ಐಪಿಸಿ ಸೆಕ್ಷನ್ 466 (ನಕಲಿ), 406 ಮತ್ತು 409 (ಕ್ರಿಮಿನಲ್ ಉಲ್ಲಂಘನೆ), 420 (ವಂಚನೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳಿಂದ ಮಾಡಿದ ಕೃತ್ಯ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಜನವರಿ 2014 ಮತ್ತು ಮೇ 2022 ರ ನಡುವೆ ಘಟನೆಗಳು ನಡೆದಿವೆ.  ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.