ಮನೆ ಸುದ್ದಿ ಜಾಲ ಬಿಸಿಯೂಟ ವ್ಯವಸ್ಥೆ ಮಾಡಿದ್ದ ಚೈತ್ರ ಶಶಿಧರ್‌ಗೌಡ

ಬಿಸಿಯೂಟ ವ್ಯವಸ್ಥೆ ಮಾಡಿದ್ದ ಚೈತ್ರ ಶಶಿಧರ್‌ಗೌಡ

0

ಮಂಡ್ಯ: ನಗರದ ಸೇವಾ ಕಿರಣ ವೃದ್ಧಾಶ್ರಮದಲ್ಲಿ ಮದ್ದೂರು ತಾಲ್ಲೂಕಿನ ಅಜ್ಜಳ್ಳಿ ಗ್ರಾಮದ ಸಮಾಜ ಸೇವಕಿ ಚೈತ್ರ ಶಶಿಧರ್‌ಗೌಡ ಅವರು ಮಧ್ಯಾಹ್ನದ ಬಿಸಿ‌ಯೂಟದ ವ್ಯವಸ್ಥೆ ಮಾಡಿದ್ದು, ಅಲ್ಲಿದ್ದ ವಯೋ ವೃದ್ಧರಿಗೆ ಸ್ವತಃ ಊಟ ಬಡಿಸುವ ಮೂಲಕ ಸರಳತೆ ಮೆರೆದರು.

ನಂತರ ಮಾತನಾಡಿದ ಅವರು, ಅನ್ನದಾನವೂ ಕೂಡ ಶ್ರೇಷ್ಠ ದಾನದಲ್ಲಿ ಒಂದಾಗಿದೆ ನಮ್ಮ ಬಿಡುವಿನ ವೇಳೆಯಲ್ಲಿ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳಿಗೆ ಭೇಟಿ ನೀಡಿ ಅವರಿಗೆ ನಮ್ಮ ಕೈಲಾದ ಸೇವೆಯನ್ನು ನೀಡುತ್ತಾ ಬಂದಿದ್ದೇವೆ, ಅದರಂತೆ ಇಂದು ಕೂಡ ಸೇವಾಕಿರಣ ವೃದ್ಧಾಶ್ರಮದಲ್ಲಿ ಉಪಹಾರ ನೀಡಿದ್ದೇವೆ ಎಂದರು. ನಾವು ದುಡಿದ ದುಡ್ಡಿನಲ್ಲಿ ಒಂದಷ್ಟು ಅಳಿಲು ಸೇವೆಯನ್ನು ಮಾಡುತ್ತಿದ್ದೇವೆ ಮುಂದೆ ಕೂಡ ಸಮಾಜಮುಖಿ ಕಾರ್ಯಗಳನ್ನು ಮಾಡಲಿದ್ದೇವೆ, ಹಾಗಾಗಿ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಕೈಲಾದ ಸಹಾಯವನ್ನು ಮಾಡುತ್ತಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಶಿಧರ್‌ಗೌಡ, ದೇವರಾಜು, ಭುವನ್, ರೋಹನ್, ಆದರ್ಶ್, ದೀಪಕ್‌ಗೌಡ, ಪ್ರೀತಮ್‌ಗೌಡ ಭಾಗವಹಿಸಿದ್ದರು.