ಮನೆ ಯೋಗಾಸನ ಚಕೋರಾಸನ

ಚಕೋರಾಸನ

0

 ‘ಚಕೋರ’ವೆಂಬುದು ಒಂದು ಜಾತಿಯ ಪಕ್ಷಿ ‘ಇದು ಚಂದ್ರನ ಕಿರಣಗಳನ್ನು ಸೇವಿಸಿ ಜೀವಿಸುವ ಹಕ್ಕಿ’ ಯೆಂದು ಕವಿಗಳು ವರ್ಣಿಸಿದ್ದಾರೆ.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು, ‘ಕಾಲಭೈರವಾಸನ’ವನ್ನು ಮುಂದುವರಿಸಿ,

 ಬಲದಂಗೈಯನ್ನು ನೆಲದ ಮೇಲೂರಿ, ಬಲಮಂಡಿಯನ್ನು ಭಾಗಿಸಿ,ಎಡಗಾಲನ್ನು ಕತ್ತಿನ ಹಿಂಬದಿಯಲ್ಲಿಟ್ಟು ನೆಲದ ಮೇಲೊರಗಿ,‘ಏಕಪಾದ ಶ್ರೀರ್ಷಾಸನ’ಕ್ಕೆ ಮತ್ತೆ ಹಿಂಜರಿರಬೇಕು.

2. ಬಳಿಕ,ಅಂಗೈಗಳನ್ನು ಟೊಂಕಗಳನ್ನು ಪಕ್ಕಕ್ಕೆ ಬರುವಂತೆ ನೆಲದ ಮೇಲೆ ಊರಿಡಬೇಕು.

3. ಆಮೇಲೆ ಟೊಂಕವನ್ನು ನೆಲದಿಂದ ಮೇಲೆತ್ತಿ, ದೇಹವನ್ನು ಅಂಗೈಗಳ ಮೇಲೆಯೇ ಸಮತೋಲನದಲ್ಲಿ ನಿಲ್ಲಿಸಬೇಕು.ಆ ಬಳಿಕ, ನೆಲದ ಮೇಲೆ ಚಾಚ್ಚಿಟ್ಟಿದ ಬಲಗಾಲನ್ನು ಮೇಲೆತ್ತಿ, ನೆಲಕ್ಕೆ ಸುಮಾರು 60 70 ಡಿಗ್ರಿಗಳಷ್ಟು ಓರೆಯಾಗುವಂತೆ ನಿಲ್ಲಿಸಬೇಕು. ಈ ಭಂಗಿಯಲ್ಲಿ, ಸಾಧ್ಯವಾದಷ್ಟು ಮಟ್ಟಿಗೆ, ಅಂದರೆ ಶಕ್ತಿಗನುಗುಣವಾಗಿ ಸಾಮಾನ್ಯವಾದ ಉಸಿರಾಟ ನಡೆಸುತ್ತಾ ನೆರಸಬೇಕು.

 ದೂರ್ವಾಸಾಸನ :-

 ‘ದುರ್ವಾಸ’ನ ಎಂದರೆ ಮಹೇಶ್ವರನ ಅಂಶದಿಂದ ಅತ್ರಿ ಮಹರ್ಷಿಗೆ ಪುತ್ರನಾಗಿ ಜನಿಸಿದ. ಒಬ್ಬ ಮಹರ್ಷಿಯ ಹೆಸರು. ಈತನು ಮಹಾಕೋಪಿಷ್ಟನೆಂಬುದು ಪ್ರತೀತಿ ‘ಅತಿರೋಷ ಪ್ರತಿಕ’ವೇ ಈತನ ಎಂಬುದು ಲೋಕವಾದ.

 ಅಭ್ಯಾಸ ಕ್ರಮ

1. ಚಕೋರಾಸನದಿಂದ ಮುಂದುವರೆಸಿ ಬಲಗಾಲನ್ನು ನೆಲದಮೇಲೆ ನೀಳವಾಗಿ ಚಾಚಿಸಬೇಕು. ಬಳಿಕ ಬಲ ಮಂಡಿಯನ್ನು ಬಾಗಿಸಿ,ನೆಲದ ಮೇಲೆ ಅಂಗೈಗಳನ್ನೂರಿ ಕುಳಿತುಕೊಳ್ಳಬೇಕು.

2. ಆ ಬಳಿಕ, ಅಂಗೈಗಳನ್ನು ಬಲತೊಡೆಯ ಮೇಲೊ ರಗಿಸಿಟ್ಟು ಉಸಿರನ್ನು ಹೊರದೂಡಿ ಬಲತೊಡೆಯ ಮೇಲೆ ಅಂಗೈಗಳನ್ನೊತ್ತಿಟ್ಟು, ಮುಂಡವನ್ನು  ಮೇಲೆಳೆದು. ಮೆಲ್ಲಮೆಲ್ಲಗೆ ಬಲಗಾಲ ಮೇಲೆ ನಿಂತು, ಆ ಬಳಿಕ ಮಾಂಸಖಂಡಗಳನ್ನು ಬಿಗಿಗೊಳಿಸಿ, ಆ ಕಾಲನ್ನು ನೇರವಾಗಿ ನಿಲ್ಲಿಸಬೇಕು.

3. ಅನಂತರ ಟೊಂಕವನ್ನೂ ಎದೆಯನ್ನೂ ಮೇಲಕ್ಕೆ ಸೆಳೆದು, ಕೈಗಳನ್ನು ಎದೆಯ ಮೇಲೆ ಜೋಡಿಸಿಟ್ಟು ದೇಹವನ್ನೆಲ್ಲ ಬಲಗಾಲಿನ ಮೇಲೆಯೇ ಸಮತೋಲನ ಮಾಡಬೇಕು. ಆಮೇಲೆ ಎಡಗಾಲನ್ನು ಕತ್ತಿನ ಹಿಂಬದಿಯಲ್ಲಿ ಒರಗಿಸಿ ಟ್ಟಿರಬೇಕು.ಆಗ ಉಸಿರಾಟವನ್ನು ಸಾಮಾನ್ಯ ರೀತಿಯಲ್ಲಿ ನಡೆಸಬೇಕು.

4. ಈ ಭಂಗಿಯನ್ನು ಸಾಧ್ಯವಾದಷ್ಟು ಕಾಲ ನಿಲ್ಲಿಸೀಡಬೇಕು. ಸಮತೋಲನದಲ್ಲಿಡುವದು ಕಷ್ಟ ಸಾಧ್ಯವಾದುದರಿಂದ ಮೊದಮೊದಲು ಇದಕ್ಕಾಗಿ ಒಂದು  ಗೋಡೆಯ ನೇರವನ್ನಾಗಲಿ ಇಲ್ಲವೇ ಒಬ್ಬ ವ್ಯಕ್ತಿಯ ಆಸರೆಯನ್ನಾಗಲಿ ಹೊಂದಿರಬೇಕು.