ಮನೆ ಮನೆ ಮದ್ದು ಚಕ್ರಮುನಿ

ಚಕ್ರಮುನಿ

0
  ಚಕ್ರಮುನಿಯ ತವರೂರು ಮಲೇಷಿಯಾ ಸತ್ವಯುತ ಸಸ್ಯ ಮೂಲ ಆಹಾರಗಳಲ್ಲಿ ಪ್ರಕೃತಿಯ ಅಮೂಲ್ಯ ಕೊಡುಗೆಗಳಲ್ಲಿ ಚಕ್ರಮುನಿಯೂ ಒಂದು. ಇದರಲ್ಲಿ ಪೋಷಕಾಂಶಗಳು ಸಮೃದ್ಧ ವಾಗಿರುವುದರಿಂದ “ಬಹುಜೀವ ಸತ್ವಗಳ ಹಸಿರು” ಎಂದು ಕರೆಯಲಾಗುತ್ತದೆ.ಚಕ್ರಮುನಿಯ ಎಲೆ,ಚಿಗುರು ಮತ್ತು ಕಾಂಡವನ್ನು ಹಸಿಯಾಗಿ ಇಲ್ಲವೇ ಬೇಯಿಸಿ ತಿನ್ನಬಹುದು. ಎಲೆಗಳು ಬೇಯಿಸಿದ ನಂತರ ಹುಳಿಯಾಗಿರುತ್ತವೆ. ಇಂಡೋನೇಷಿಯಾದಲ್ಲಿ ಇದನ್ನು ಹುದುಗು ಬಂದ ಅಕ್ಕಿಯ ಜೊತೆ ಬೇಯಿಸಿ ತಿನ್ನುತ್ತಾರೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ಇದನ್ನು ಪಶುಗಳ ಮತ್ತು ಕೋಳಿಗಳ ಆಹಾರ ತಯಾರಿಕೆಗಾಗಿ ಬಳಸುತ್ತಾರೆ.ಉತ್ತಮ ಪೌಷ್ಟಿಕತೆ ಮತ್ತು ಔಷಧಿಯ ಗುಣವನ್ನು ಹೊಂದಿರುವುದರಿಂದ ಪ್ರತಿ ಮನೆಯ ಮತ್ತು ಶಾಲೆಯ ತೋಟಗಳಲ್ಲಿ ಬೆಳೆಸಿ ಉಪಯೋಗಿಸಿದ್ದಾರೆ ಮಹಿಳೆಯರ ಮತ್ತು ಮಕ್ಕಳಲ್ಲಿನ ಜೀವಸತ್ವಗಳ ಕೊರತೆಯನ್ನು ನೀಗಿಸಬಹುದಾಗಿದೆ.

ಸಸ್ಯವರ್ಣನೆ :

ಬಹುಬಳಕೆಯ ಈ ಚಕ್ರಮುನಿ ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದೆ. ಇನ್ನೂ ಎರಡರಿಂದ ಮೂರು ಪಾಯಿಂಟ್ ಐದು ಮೀಟರ್ ಎತ್ತರ ಬೆಳೆಯುವ ಸಣ್ಣ ಪೊದೆ. ಇದು ಮೃದುವಾದ ರಂಬೆಗಳನ್ನು ಹೊಂದಿದ್ದು ಅನೇಕ ಸಂಯುಕ್ತ ಕಿರು ಎಲೆಗಳನ್ನು ಹೊಂದಿರುತ್ತದೆ.

ಮಣ್ಣು :

 ಫಲವತ್ತಾದ  ಮತ್ತು ಚೆನ್ನಾಗಿ ಬಸಿದು ಹೋಗುವಂತಹ ಎಲ್ಲಾ ತರಹದ ಭೂಮಿಯಲ್ಲಿ ಯಶಸ್ವಿಯಾಗಿ ಇದರ ಬೇಸಾಯ ಸಾಧ್ಯ.

ಹವಾ ಗುಣ :

     ಇದು ಚಳಿ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುವುದಿಲ್ಲವಾದರೂ ಶೀತ ಹಾಗೂ ಸಮಶೀತೋಷಣ ವಲಯಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ .

ಬೇಸಾಯ ಕ್ರಮಗಳು :

    ಗಿಡಗಳನ್ನು ಹೊಸದಾಗಿ ಬೀಜಗಳಿಂದ ಮತ್ತು ಕಾಂಡದ ತುಂಡುಗಳಿಂದ ವೃದ್ಧಿ ಮಾಡಬಹುದು. ಬೀಜಗಳಿಂದ ಬೆಳೆಯಬೇಕಾದಲ್ಲಿ ಬೀಜಗಳನ್ನು ಮೇ ಜೂನ್ ತಿಂಗಳು ಮಾಡಬೇಕು.

  ಸೀಸದ ಕಡ್ಡಿಯ ಗಾತ್ರದ 6ರಿಂದ 12 ತಿಂಗಳು ಚೆನ್ನಾಗಿ ಬಲಿತ ರೆಂಬೆಗಳನ್ನು 20-30 ಸೆಂ.ಮೀ ಉದ್ದದ ತುಂಡುಗಳಾಗಿ ಕತ್ತರಿಸಿ, ಜೂನ್ ಜುಲೈ ತಿಂಗಳ ಅನಂತರ ಅವು ಚಿಗುರು ಒಡೆಯುತ್ತವೆ. ಅಮೇಲೆ ಎರಡು ಘನ ಅಡಿ ಅಳತೆಯ ಗುಣಿಗಳನ್ನು ತೆಗೆದು, ಕೆಲವು ದಿನ ಬಿಟ್ಟು ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರವನ್ನು ಮೇಲ್ಮಣ್ಣಿನೊಡನೆ ಮಿಶ್ರ ಮಾಡಿ ಗುಣಿಗಳನ್ನು ತುಂಬಬೇಕು. ಅನಂತರಾ ಒಂದೊಂದು ಗುಣಿಗೂ ಎರಡು ತುಂಡುಗಳಂತೆ 45 c.m ಅಂತರದಲ್ಲಿ 12 -15 ಸೆಂ.ಮೀ. ಆಳವಾಗಿ ನಾಟಿ ಮಾಡಬೇಕು ಗಿಡಗಳು 90 ಸೆಂ.ಮೀ. ಎತ್ತರದ ಬೆಳೆದಾಗ ಅವುಗಳ ಕುಡಿಯನ್ನು ಚಿವುಟಿ ಹಾಕಬೇಕು ಇದರಿಂದ ಚಿವುಟಿ ಹಾಕಬೇಕು ಇದರಿಂದ ಗಿಡವು  ಪೊದೆಯಾಗಿ ಬೆಳೆಯಲು ಸಾಧ್ಯವಾಗುತ್ತದೆ.

ನೀರಾವರಿ :
ನೀರನ್ನು ಕಾಲಕಾಲಕ್ಕೆ ಗಿಡಗಳಿಗೆ ಹಾಕುತ್ತಿರಬೇಕು.

ಕಳೆ ಹತೋಟಿ :
ಗಿಡದ ಬುಡ ಭಾಗದಲ್ಲಿ ಇರುವ ಕಳೆಗಳನ್ನು ತೆಗೆಯುತ್ತಿರಬೇಕು.

ಸತ್ಯ ಸಂರಕ್ಷಣೆ :
ಈ ಗಿಡಕ್ಕೆ ಹೆಚ್ಚು ಹಾನಿಯುಂಟು ಮಾಡುವ ಕೀಟ ಮತ್ತು ರೋಗ ಬಾಧೆ ಕಂಡುಬಂದಿಲ್ಲ.

ಕೊಯ್ಲು ಮತ್ತು ಇಳುವರಿ :

    ನಾಟಿಯಾದ ಮೂರ ರಿಂದ ನಾಲ್ಕು ತಿಂಗಳ ನಂತರ ಗಿಡಗಳು ಪೊದೆಯಾಗಿ ಬೆಳೆದು ಕೊಯ್ಲಿಗೆ ಬರುತ್ತವೆ. ನಂತರ ಪ್ರತಿತಿಂಗಳು ಎಳೆಯ ಸೊಪ್ಪನ್ನು ಕೊಯ್ಲು ಮಾಡಿ ಸೊಪ್ಪು ತರಕಾರಿಯಾಗಿ ಬಳಸಬಹುದು. ಒಂದು ಸಲಕ್ಕೆ ಒಂದು ಗಿಡದಿಂದ ಸರಾಸರಿ ಎರಡು ಮೂರು ಕೆಜಿ ಸೊಪ್ಪನ್ನು ಪಡೆಯಬಹುದು. ಆರು ತಿಂಗಳಿಗೊಮ್ಮೆ ಗಿಡಗಳನ್ನು ಸವರುವುದರಿಂದ ಗಿಡಗಳು ಸೊಂಪಾಗಿ ಬೆಳೆಯುತ್ತವೆ.

ಉಪಯುಕ್ತ ಭಾಗಗಳು :

ಎಲೆ,ಬೇರು,ಕಾಂಡ,

ಪೋಷಕಾಂಶಗಳು :
ಸಸಾರ ಜನಕ – 7.4 ಗ್ರಾಂ
‘ಎ’ ಜೀವಸತ್ವ – 47500ಏ.ಯು
‘ಸಿ’ ಜೀವಸತ್ವ – 110 ಮಿ. ಗ್ರಾಂ
ರಂಜಕ – 200 ಮಿ. ಗ್ರಾಂ
ಶಕ್ತಿ – 54 ಕ್ಯಾಲೋರಿ
‘ಬಿ’ ಜೀವಸತ್ವ – 51 ಮಿ. ಗ್ರಾಂ
ಸುಣ್ಣಾಂಶ – 570 ಮಿ. ಗ್ರಾಂ
ಕಬ್ಬಿಣಾಂಶ – 23 ಮಿ. ಗ್ರಾಂ