ಮನೆ ಮನೆ ಮದ್ದು ಚಕ್ರಮುನಿ

ಚಕ್ರಮುನಿ

0

ಔಷಧೀಯ ಗುಣಗಳು

ಜೀವಸತ್ವದ ಕೊರತೆ : ಪೋಷಕಾಂಶಗಳ ಕೊರತೆ ಅದರಲ್ಲಿಯೂ ಜೀವಸತ್ವ ಊಎ.ಬಿ,ಸಿಗಳ ನ್ಯೂನತೆಯಿಂದ ಬಳಲುವವರು ಪ್ರತಿದಿನ ಚಕ್ರಮುನಿ ಸೊಪ್ಪನ್ನು ಹಸಿಯಾಗಿ ತಿನ್ನುವುದು ಉತ್ತಮವಾದುದು. ಎರಡು ಚಮಚೆ ಚಕ್ರಮುನಿ ಸೊಪ್ಪಿನ ರಸಕ್ಕೆ ಒಂದು ಚಮಚೆ ಜೇನು ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಗೆ ಕುಡಿಯುವುದರಿಂದ ಉತ್ತಮ ಪರಿಣಾಮ ಉಂಟಾಗುತ್ತದೆ.

Join Our Whatsapp Group

೧ ಮಲಬದ್ಧತೆಯಿಂದ ಬಳಲುವವರು ಆಹಾರದಲ್ಲಿ ಚಕ್ರಮುನಿ ಸೊಪ್ಪನ್ನು ಹೆಚ್ಚು ಬಳಸಬೇಕು.

೧ ಕಣ್ಣಿನ ಕಾಯಿಲೆಗಳಲ್ಲಿ : ಚಕ್ರಮುನಿ ಎಲೆಯ ರಸವನ್ನು ದುಂಡುಮಲ್ಲಿಗೆ ಎಲೆಯ ರಸ ಮತ್ತು ದಾಳಿಂಬೆ ಬೇರುಗಳೊಂದಿಗೆ ಸೇರಿಸಿ ಜಜ್ಜಿ ಹಿಂಡಿ ತೆಗೆದ ರಸವನ್ನು ತೆಳುವಾದ ಸ್ವಚ್ಛವಾದ ಬಟ್ಟೆಯಲ್ಲಿ ಶೋಧಿಸಿ. ಈ ರಸವನ್ನು ಕಣ್ಣು ಕೆಂಪಾಗಿದ್ದಲ್ಲಿ ಎರಡು ಹನಿ ಕಣ್ಣಿಗೆ ಹಾಕುವುದರಿಂದ ಉರಿ, ನೋವು ಶಮನವಾಗುತ್ತದೆ.

 ಅಡುಗೆ

ಪಲ್ಯ : ಚಕ್ರಮುನಿ ಸೊಪ್ಪನ್ನು ಸ್ವಚ್ಛವಾಗಿ ನೀರಿನಲ್ಲಿ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ನಂತರ ಒಗ್ಗರಣೆಗೆ ಹಾಕಿ ಬಾಡಿಸಿ. ಅದಕ್ಕೆ ಉಪ್ಪು, ತೆಂಗಿನ ತುರಿ ಬೆರೆಸಿ ಒಣಮೆಣಸಿನಕಾಯಿ ಪುಡಿ ಸ್ವಲ್ಪ ಉದುರಿಸಬಹುದು.

ತೊವ್ವೃೃ: ತೊಗರಿಬೇಳೆಯನ್ನು ಬೇಯಿಸಿ ನಂತರ ಅದಕ್ಕೆ ಬೇಯಿಸಿದ ಚಕ್ರಮುನಿ ಸೊಪ್ಪು, ಹಸಿಮೆಣಸಿನಕಾಯಿ ಬೆರೆಸಿ ಒಗ್ಗರಣೆ ಕೊಟ್ಟು ತೊವ್ವಗ ತಯಾರಿಸಬಹುದು. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು.

ಮೆಂತ್ಯ, ದಂಟಿನಸೊಪ್ಪು, ಪಾಲಕ್ ಮುಂತಾದವುಗಳೊಡನೆ ಚಕ್ರಮುನಿ ಸೊಪ್ಪನ್ನು ಬೆರೆಸಿ ಪಲ್ಯ ತಯಾರಿಸಬಹುದು. ಹಾಗೆಯೇ ಬೇಳೆಯೊಂದಿಗೆ ಇತರೆ ಸೊಪ್ಪು ಬೆರೆಸಿಯೂ ಪಲ್ಯ ತಯಾರಿಸಿದಲ್ಲಿ ರುಚಿಕರ ಮತ್ತು ಆರೋಗ್ಯಕರ.

ಸಾರು : ಬೇಯಿಸಿದ ತೊಗರಿಬೇಳೆ, ಹುಣಸೆ ರಸ ಇಲ್ಲವೇ ಟೊಮಾಟೊ, ಚಕ್ರಮುನಿ ಸೊಪ್ಪು, ಸಾರಿನ ಪುಡಿ, ಉಪ್ಪು ಬೆರೆಸಿ ಸಾರು ತಯಾರಿಸಿ ಹಿಂಗಿನ ಒಗ್ಗರಣೆ ಕೊಟ್ಟಲ್ಲಿ ರುಚಿಕರ ಸಾರು ಸಿದ್ದ

ಇಡ್ಲಿ, ದೋಸೆ, ರೊಟ್ಟಿ ತಯಾರಿಸುವ ಹಿಟ್ಟಿನಲ್ಲಿ ಚಕ್ರಮುನಿ ಸೊಪ್ಪನ್ನು ಬೆರೆಸಿ ತಯಾರಿಸಬಹುದು.

ಪಾನೀಯ : ಚಕ್ರಮುನಿ ಸೊಪ್ಪಿನ ರಸ ತೆಗೆದು ಬೆಲ್ಲ ಅಥವಾ ಸಕ್ಕರೆಯೊಂದಿಗೆ ಬೆರೆಸಿ, ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ನೀರು ಬೆರೆಸಿ ಪಾನಕ ತಯಾರಿಸಬಹುದು.

ಚಟ್ನ: ಒಣಮೆಣಸಿನಕಾಯಿ, ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆಯನ್ನು ಹುರಿದು ಪುಡಿ ಮಾಡಿಟ್ಟುಕೊಂಡು, ಚಕ್ರಮುನಿ ಸೊಪ್ಪನ್ನು ಎಣ್ಣೆಯಲ್ಲಿ ಬಾಡಿಸಿ, ಹುಣಸೆ ರಸ, ತೆಂಗಿನ ತುರಿ, ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ಬೇಕೆನಿಸಿದಲ್ಲಿ ಬೆಲ್ಲ ಬೆರೆಸಬಹುದು.

ತಂಬುಳಿ : ಚಕ್ರಮುನಿ ಸೊಪ್ಪನ್ನು ಸ್ವಲ್ಪ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಹುರಿದು ಕೋಳ್ಳಬೇಕು. ತೆಂಗಿನ ತುರಿಯೊಂದಿಗೆ ರುಬ್ಬಿಕೊಂಡು ಮೊಸರು ಇಲ್ಲವೇ ಮಜ್ಜಿಗೆಯಲ್ಲಿಬೆರೆನಬೇಕು. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, ಬೇಕೆನಿಸಿದಲ್ಲಿ ಒಗ್ಗರಣೆ ಕೊಡಬಹುದು.

ಶಂಕರಪೋಳೆ : ಮೈದಾಹಿಟ್ಟು ಅಥವಾ ಗೋಧಿಹಿಟ್ಟು । ಬಟ್ಟಲು, ತೊಳೆದು ಸ್ವಚ್ಛಗೊಳು, ಹೆಚ್ಚಿದ ಚಕ್ರಮನಿ ಸೊಪ್ಪು 1 ಬಟ್ಟಲು, ಹಸಿಮೆಣಸಿನಕಾಯಿ 4. ತುಪ್ಪ 4 ಚಮಚೆ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ

    “ಹಸಿಮೆಣಸಿನಕಾಯಿಯನ್ನು ಸಣ್ಣಗೆ ಜಜ್ಜಿಕೊಳ್ಳಬೇಕು. ಮೈದಾ ಅಥವಾ ಗೋಧಿಹಿಟ್ಟಿಗೆ ತುಪ್ಪ. ಚಕ್ರಮುನಿ ಸೊಪ್ಪು, ಹಸಿಮೆಣಸಿನಕಾಯಿ ಉಪ್ಪು ಎಲ್ಲವನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ನಂತರ ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಿಸಬೇಕು. ಹಾಳೆ ಸ್ವಲ್ಪ ದಪ್ಪಗಿರಬೇಕು. ಚೌಕಾಕಾರ, ತ್ರಿಕೋನಾಕಾರ, ವಜ್ರಾಕೃತಿ ಹೀಗೆ ನಮಗೆ ಬೇಕೆನಿಸಿದ ಆಕಾರದಲ್ಲಿ ಕತ್ತರಿಸಿಕೊಂಡು ಎಣ್ಣೆಯಲ್ಲಿ ಹಾಕಿ ಕರಿಯಬೇಕು. ಆರಿದ ನಂತರ ಡಬ್ಬಿಯಲ್ಲಿ ತುಂಬಿಡಬೇಕು. ಮಕ್ಕಳಿಗೆ ಸಂಜೆ ಹೊತ್ತು ಶಾಲೆಯಿಂದ ಬಂದ ತಕ್ಷಣ ತಿನ್ನಲು ಕೊಡಲು ಉತ್ತಮ ತಿಂಡಿ.

ವಡೆ -1 : 100 ಗ್ರಾಂ ಚಕ್ರಮುನಿ ಸೊಪ್ಪು, 1 ಬಟ್ಟಲು ಸಣ್ಣ ರವೆ, 1 ಬಟ್ಟಲು ಕಡಲೆಹಿಟ್ಟು, 4 ಚಮಚ ಜೀರಿಗೆ, 1 ಚಮಚ ಮೆಣಸಿನ ಹುಡಿ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ

ಕಡಲೆ ಹಿಟ್ಟು, ರವೆ, ಮೆಣಸಿನ ಹುಡಿ. ಉಪ್ಪು, ನೀರು ಸೇರಿಸಿ ಹದವಾಗಿ ಬೆರೆಸಿಕೊಳ್ಳಬೇಕು. ಅದಕ್ಕೆ ತೊಳೆದು ಸ್ವಚ್ಚಗೊಳಿಸಿ ಸಣ್ಣಗೆ ಹೆಚ್ಚಿಟ್ಟುಕೊಂಡಿರುವ ಚಕ್ರಮುನಿ ಸೊಪ್ಪನ್ನು ಬೆರೆಸಿ ತಟ್ಟಿ ಎಣ್ಣೆಯಲ್ಲಿ ಹಾಕಿ ಕರಿಯಬೇಕು.

ವಡೆ – 2 : ಕಡಲೆಬೇಳೆಯನ್ನು ನೆನೆಸಿಟ್ಟು, ಒಂದು ಗಂಟೆಯ ನಂತರ ತರಿತರಿಯಾಗಿ ರುಬ್ಬಿಕೊಂಡು ಅದಕ್ಕೆ ಉಪ್ಪು, ಜೀರಿಗೆ, ಸಣ್ಣಗೆ ಹೆಚ್ಚಿದ ಚಕ್ರಮುನಿ ಸೊಪ್ಪು. ಹಸಿಮೆಣಸಿನಕಾಯಿ, ಉಪ್ಪು ಬೆರೆಸಿ ತಟ್ಟಿ ಎಣ್ಣೆಯಲ್ಲಿ ಹಾಕಿ ಕರಿಯಬೇಕು ರುಚಿಕರ ವಡೆ ತಯಾರು

ಇತರೆ

ತಮಿಳುನಾಡಿನಲ್ಲಿ ಪಶು ಮತ್ತು ಕೋಳಿ ಆಹಾರದಲ್ಲಿ ಚಕ್ರಮುನಿ ಸೊಪ್ಪನ್ನು ಬಳಸುತ್ತಾರೆ.

 ಇತರ ಭಾಷೆಗಳಲ್ಲಿ

 ಇಂಗ್ಲಿಷ್ —ಮಲ್ಟಿವಿಟಮಿನ್ ಪ್ಲಾಂಟ್