ಮನೆ ಸ್ಥಳೀಯ ಯಾವುದೇ ಸಂಕಷ್ಟದಲ್ಲೂ ರೈತರ ಪರವಾಗಿ ಸರ್ಕಾರ ಕಾರ್ಯನಿರ್ವಾಹಿಸುವುದು -ಚಲುವರಾಯಸ್ವಾಮಿ

ಯಾವುದೇ ಸಂಕಷ್ಟದಲ್ಲೂ ರೈತರ ಪರವಾಗಿ ಸರ್ಕಾರ ಕಾರ್ಯನಿರ್ವಾಹಿಸುವುದು -ಚಲುವರಾಯಸ್ವಾಮಿ

0

ಮೈಸೂರು :- ಬರಗಾಲ ಇದ್ದರೂ, ಆರ್ಥಿಕ ಸಮಸ್ಯೆ ಇದ್ದರೂ, ನೀರಿನ ಸಮಸ್ಯೆ ಸೇರಿದಂತೆ ಯಾವುದೇ ತೊಂದರೆ ರೈತರಿಗೆ ಬಂದರೆ ಸರ್ಕಾರ ಸದಾ ರೈತರ ಜೊತೆ ಇದ್ದು ಅವರನ್ನು ಪ್ರೋತ್ಸಹಿಸುವಂತಹ ಕೆಲಸ ಮಾಡಿಕೊಂಡು ಬರುತ್ತಿದೆ ಎಂದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದರು.

Join Our Whatsapp Group

ಇಂದು ನಗರದ ಜೆ.ಕೆ ಮೈದಾನದ ಆವರಣದಲ್ಲಿರುವ ವೈದ್ಯಕೀಯ ಮಹಾವಿದ್ಯಾಲಯದ ಆಲ್ಯೂಮಿನಿ ಅಸೋಸಿಯೇಷನ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ರೈತದಸರಾ ವೇದಿಕೆ ಕಾರ್ಯಕ್ರಮವನ್ನು ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿ ರೈತರಿಗೆ ಅನುಕೂಲವಾಗಲು ಕೃಷಿ ವಿಶ್ವವಿದ್ಯಾಲಯಕ್ಕೂ ಸಹಕಾರ ಕೊಡಲಿದ್ದೆವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

 ಒಬ್ಬ ವ್ಯಕ್ತಿಗೆ ಸರ್ಕಾರ ಕೆಲಸ ಕೊಟ್ಟರೆ ಅವನು ತನ್ನ ಕುಟುಂಬವನ್ನು ಮಾತ್ರ ಮುನ್ನಡೆಸುತ್ತಾನೆ. ಅದೇ ಒಬ್ಬ ರೈತನಿಗೆ ಪ್ರೋತ್ಸಹ ಕೊಟ್ಟರೆ ತನ್ನ ಕುಟುಂಬದ ಜೊತೆಗೆ 50 ಮಂದಿಗೂ ಕೆಲಸ ನೀಡುವನಂತಾಗುತ್ತಾನೆ ಎಂದರು.

ಈ ಬಾರಿ ಬರಗಾಲದಿಂದ ರೈತರಿಗೆ ವಿದ್ಯುತ್ ಸಮಸ್ಯೆ ಉಂಟಾಗಬಾರದೆಂಬ ಹಿನ್ನೆಲೆ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ರೈತರಿಗೆ ಸಹಾಯ ಮಾಡುತ್ತಾ ಬರುತ್ತಿದೆ. ಈ ಬಾರಿಯ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಮಾಡಬೇಕೆಂದು ಚಿಂತಿಸಲಾಗಿತ್ತು. ಆದರೆ ಈ ಬಾರಿ ಬರದಿಂದ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿದೆ. ಹೀಗಾಗಿ ಸರ್ಕಾರ ಅದ್ದೂರಿ ದಸರಾವನ್ನು ಕೈ ಬಿಟ್ಟು ಸಾಂಪ್ರಾದಾಯಿಕ ಸರಳ ದಸರಾ ಆಚರಣೆಗೆ ಸರ್ಕಾರ ಮುಂದಾಗಿದೆ ಎಂದರು.

ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಮಾತನಾಡಿ ದೇಶಕ್ಕೆ ಮಾದರಿ ಆಡಳಿದ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಭಾಗದಲ್ಲಿ ಕೃಷಿ, ನೀರಾವರಿ, ಹೈನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಪ್ರೋತ್ಸಾಹಿಸಿ ಗ್ರಾಮೀಣ ಜನರ ಬೆನ್ನುಲುಬಾದ ಕೃಷಿ ಅಭಿವೃದ್ಧಿಗೆ ಉತ್ತೇಜನ ನೀಡಿರುವುದು ಅವಿಸ್ಮರಣೀಯ.

ಕಾಂಗ್ರೇಸ್ ಸರ್ಕಾರದ ಅವಧಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಚಟುವಟಿಕೆಗೆ ಸಹಕಾರಿಯಾಗುವಂಥ ಅನೇಕ ಅಭಿವೃದ್ಧಿಗಳ ಕೆಲಸ ಮಾಡುವ ಮೂಲಕ ಕೃಷಿ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿದೆ. ಆಹಾರ ಸ್ವಾವಲಂಬನೆಗಾಗಿ ಹಸಿರು ಕ್ರಾಂತಿಯನ್ನು ಮಾಡಿ,

ದೇಶದಲ್ಲಿ ಅನೇಕ ಅಣೆಕಟ್ಟೆಗಳನ್ನು ನಿರ್ಮಿಸದಿದ್ದರೆ ಇಂದು ಆಹಾರದ ಕೊರತೆ ಎದುರಾಗುತ್ತಿತ್ತು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಕೃಷಿ ಮತ್ತು ನೀರಾವರಿ ಗಮನದಲ್ಲಿರಿಸಿ ಬಾಕ್ರನಂಗಲ್ ಅಣೆಕಟ್ಟೆ ನಿರ್ಮಿಸಲು ಸಲಹೆ ನೀಡಿದ್ದನ್ನು ಅಂದಿನ ಪ್ರಧಾನಿ ನೆಹರು ಅವರ ಸರ್ಕಾರ ಪರಿಗಣಿಸಿತ್ತು. ಲಾಲ್ ಬಹದ್ದೂರು ಶಾಸ್ತ್ರಿ ಅವರ ಕಾಲದಲ್ಲಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮಾಡಿ ಆಹಾರ ಸ್ವಾವಲಂಬೆನೆಯನ್ನು ಬಲಪಡಿಸಿದರು.

ರೈತ ಸಮಸ್ಯೆಗಳ ಪರಿಹಾರಕ್ಕೆ ಹೊಸ ತಂತ್ರಜ್ಞಾನ ಮತ್ತು ವೈಜ್ಞಾನಿಕ ಉಪಾಯಗಳ ಮೂಲಕ ಕೃಷಿ ಅಭಿವೃದ್ಧಿ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಕಾಂಗ್ರೇಸ್ ಸರ್ಕಾರ ಮಾಡಲಿದೆ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಚಳುವಳಿಯಿಂದ ಬಂದಿದ್ದು, ರೈತರ ಸಮಸ್ಯೆಗಳು ಅವರ ಗಮನದಲ್ಲಿದೆ. ಸಂಕಷ್ಟದ ಕಾಲದಲ್ಲಿ ರೈತರ ಪರ ನಿಂತು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಡಳಿತ ನಡೆಸಲಿದ್ದಾರೆ.ಗಣತಂತ್ರ ವ್ಯವಸ್ಥೆಯಲ್ಲಿ ನಾವು ನಿರೀಕ್ಷೆ ಮಾಡಿದ ಸಹಕಾರ ಕೇಂದ್ರ ಸರ್ಕಾರದಿಂದ ಲಭ್ಯವಾಗುತ್ತಿಲ್ಲ. ಪ್ರಸ್ತುತ ರೈತರು ಸಂಕಷ್ಟದಲ್ಲಿದ್ದಾರೆ. ಕೃಷಿ ಕ್ಷೇತ್ರ ಅಪಾಯದಲ್ಲಿದೆ. ಇದು ಅತ್ಯಂತ ನೋವಿನ ಸಂಗತಿ. ಆದರೂ ರಾಜ್ಯ ಸರ್ಕಾರ ರಾಜ್ಯದ ರೈತರನ್ನು ಯಾವುದೇ ಕಾರಣಕ್ಕೂ ಸಂಕಷ್ಟಕ್ಕೆ ಸಿಲುಕಿಸದ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.

ಪಶುಸಂಗೋಪನಾ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ.ವೆಂಕಟೇಶ್ ಅವರು ಮಾತನಾಡಿ ಸರ್ಕಾರ ಹೈನುಗಾರಿಗೆ ಪ್ರೋತ್ಸಹ ನೀಡುತ್ತಾ ಬಂದಿದೆ. ಹಳೆ ಪದ್ದತಿಯನ್ನೇ ಅನುಸರಿಸುತ್ತಿದ್ದರೆ ಹೈನುಗಾರಿಕೆಯಲ್ಲಾಗಲಿ, ಕೃಷಿಯಲ್ಲಾಗಲಿ ಪ್ರಗತಿ ಸಾಧಿಸುವುದು ಕಷ್ಟವಾಗುತ್ತದೆ. ಆಧುನಕತೆಗೆ ಬದಲಾಗಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಸಿರಿಧಾನ್ಯ ತಜ್ಞರಾದ ಖಾದರ್ ಅವರು ಮಾತನಾಡಿ, ಕಾಪೋರೆಟ್ ಕಂಪನಿಗಳು ನಮ್ಮ ಅಡುಗೆ ಮನೆಗೆ ಬೀಗ ಹಾಕಿಸುತ್ತಿದ್ದಾರೆ. ಆಹಾರದ ವೈಜ್ಞಾನಿಕ ವ್ಯಸ್ಥೆಯನ್ನು ಈ ಕಪೋರೆಟ್ ಕಂಪನಿಗಳು ನಿರ್ಮೂಲನೆ ಮಾಡುತ್ತಿವೆ. ಹೋಟೆಲ್ ಊಟ ಮಾಡುತ್ತಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಸಿರಿದಾನ್ಯಗಳನ್ನು ಬಿಟ್ಟು, ಸಾಂಸ್ಕೃತಿಕ ಆಹಾರ ಪದ್ದತಿಯ ಆಹಾರವನ್ನು ಸೇವಿಸುತ್ತಿರುವದರಿಂದ ಸಮಾಜ ರೋಗಮುಕ್ತವಾಗುವುದಿಲ್ಲ. ಸಮಾಜ ರೋಗಮುಕ್ತವಾಗಬೇಕಾದರೆ ಸಿರಿದಾನ್ಯಗಳನ್ನು ಸೇವಿಸಬೇಕು. ಸಿರಿಧಾನ್ಯವನ್ನು ಸೇವಿಸುತ್ತಾ ಬಂದರೆ ದೇಹದ ಕಲ್ಮಶಗಳು ಹೊರಬಂದು ಸದೃಡ ಆರೋಗ್ಯವಂತ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದರೆ.

ಸಿರಿಧಾನ್ಯ ಯಾವುದೇ ಕಾರಣಕ್ಕೂ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲ್ಲ. ಸಿರಿದಾನ್ಯಗಳನ್ನು ಮನುಷ್ಯ ಸಾವಿರಾರು ವರ್ಷಗಳಿಂದ ಸೇವಿಸುತ್ತ ಬರುತ್ತಿದ್ದೆವು. ಆದರೆ ಇಂದಿನ ಕೆಲವು ಕಾರ್ಪೋರೆಟ್ ಕಂಪನಿಗಳು ಇಂತಹ ಸಿರಿಧಾನ್ಯಗಳ ಮಹತ್ವವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿಲ್ಲ. ಸಿರಿಧಾನ್ಯ ಸೇವೆಸುತ್ತಾ ಬರುತ್ತಿರುವ ಸಾವಿರಾರು ಬುದ್ದಿಮಾಂದ್ಯ ಮಕ್ಕಳು ಗುಣಮುಖರಾಗಿ ಬರುತ್ತಿದ್ದಾರೆ. ಇದು ಸಿರಿಧಾನ್ಯದ ಶಕ್ತಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಶಾಸಕರಾದ ಕೆ.ಹರೀಶ್ ಗೌಡಬಾಬು ಬಂಡಿಸಿದ್ದೇಗೌಡ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್,

ಉಪ ಮಹಾಪೌರರಾದ ಡಾ.ಜಿ.ರೂಪ, ನಗರ ಪಾಲಿಕೆ ಆಯುಕ್ತಾರಾದ ಆಶಾದ್ ಶರೀಫ್, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ, ಕೆ.ಪಿ.ಲೋಕೇಶ್ ಇತರರು ಹಾಜರಿದ್ದರು.